ದಾವಣಗೆರೆ, ಜನವರಿ 28: ಪತ್ನಿ ಬೇರೊಬ್ಬನ ಜೊತೆ ಪರಾರಿ ಹಿನ್ನೆಲೆ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರೇಮಿ ಶಿವಕುಮಾರ ಹಾಗೂ ಸರಸ್ವತಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದಾರೆ. ಆರೋಪಿ ಪತ್ನಿ ಸರಸ್ವತಿಯನ್ನು ಬಂಧಿಸಿದ್ದಾರೆ. ಶಿವಕುಮಾರಗಾಗಿ ಶೋಧ ನಡೆದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌ಪಿ ಉಮಾ ಪ್ರಶಾಂತ್, ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿದ್ದ ಸರಸ್ವತಿಗೂ ಮೊದಲೇ ಆರೋಪಿ ಶಿವಕುಮಾರನನ್ನ ಪ್ರೀತಿಸುತ್ತಿದ್ದಳು. ಜನವರಿ 23ರಂದು ಗುಮ್ಮನೂರ ಗ್ರಾಮದಿಂದ ತನ್ನ ಪ್ರಿಯತಮನ ಜೊತೆಗೆ ಹೋಗಿದ್ದಳು. ಇದೇ ಕಾರಣಕ್ಕೆ ಆಕೆಯ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಶರಣಾದ ಇಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡ ಅಟ್ರಾಸಿಟಿ ಕೂಡ ಆರೋಪಿ ಶಿವಕುಮಾರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.