ದಾವಣಗೆರೆ, ನವೆಂಬರ್ 02: ಅಲ್ಲೊಂದು ದರೋಡೆ ನಡೆದಿತ್ತು. ಅದಕ್ಕೆ ಹತ್ತಾರು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಹಾರ ಯುವಕನನ್ನು ಮೂರು ದಿನ ಇಟ್ಟುಕೊಂಡು ಕೊಡಬಾರದ ಹಿಂಸೆ ಕೊಟ್ಟು ಬಿಟ್ಟುಕಳುಹಿಸಿದ್ದಾರೆ. ಇದಕ್ಕೆ ಬೇಸತ್ತು ಆತ ಆತ್ಯಹತ್ಯೆಗೆ (ಆತ್ಮಹತ್ಯೆ) ಯತ್ನಿಸಿದ್ದು, ಸದ್ಯ ಸಾವು-ಬದುಕಿನೊಂದಿಗೆ ಹೋರಾಟ ನಡೆಸುತ್ತಿದೆ. ಮಗನ ಪರಿಸ್ಥಿತಿ ತಾಯಿ (ತಾಯಿ) ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸ್ ಠಾಣೆಗೆ ನುಗ್ಗಿ ಖಾಕಿ ಪಡೆಯ ಚಳಿ ಬಿಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಯುವಕ ಕಿರಣ್ ಆತ್ಮಹತ್ಯೆಗೆ ಯತ್ನಿಸಿದ್ದ. ಮನೆಗೆ ಆಧಾರವಾಗಿದ್ದ ಕಿರಣ್, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆತನ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ತಾಯಿ ಬದುಕಿದ್ದಾಗ ಸಾಕಲಿಲ್ಲ, ಈಗ ಮೃತದೇಹಕ್ಕಾಗಿ ಬಡಿದಾಡಿಕೊಂಡ ಮಕ್ಕಳು
ಏಳು ತಿಂಗಳ ಹಿಂದಷ್ಟೇ ಮದುವೆ ಮಾಡಿದ್ದ ತಾಯಿಗೆ ಇದ್ದ ಒಬ್ಬ ಮಗನ ಸ್ಥಿತಿ ಕಂಡು ಆಕಾಶವೇ ಕಳಚಿ ಬಿದ್ದಂತಾಗಿದೆ. ಇಂದು ಆ ತಾಯಿ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. ಸಂತೆಬೆನ್ನೂರಿ ಸಿಪಿಎಂ ಲಿಂಗನಗೌಡನ ಚಳಿ ಬಿಡಿಸಿದ್ದಾರೆ. ಸ್ಥಳೀಯರು ಈ ಮಧ್ಯೆ ಬರದಿದ್ದರೆ ಪೊಲೀಸ್ ಅಧಿಕಾರಿಯನ್ನು ಹೊಡೆದುಕೊಳ್ಳುವಷ್ಟು ಆಕ್ರೋಶದಲ್ಲಿದ್ದರು.
ಸಂತೆಬೆನ್ನೂರು ಠಾಣೆ ಪೊಲೀಸರೇ ಕಾರಣ?
ಅಷ್ಟ ಇದಕ್ಕೆಲ್ಲಾ ಸಂತೆಬೆನ್ನೂರು ಠಾಣೆ ಪೊಲೀಸರೇ ಕಾರಣವಂತೆ. ಸಂತೆಬೆನ್ನೂರು ವ್ಯಾಪ್ತಿಯ ಕಾಕನೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳ ಹಿಂದೆ ಒಂಟಿ ಮನೆಯಲ್ಲಿ ಕಳ್ಳತನವಾಗಿತ್ತು. ಆ ಕಳ್ಳತನ ಕಿರಣ್ ಮಾಡಿದ್ದಾನೆ ಎಂದು ಆರೋಪಿಸಿ ಅ.27 ರಂದು ಮಪ್ತಿಯಲ್ಲಿ ಬಂದಿದ್ದ ಆತನನ್ನು ಕರೆದೊಯ್ದಿದ್ದರು.
ಈ ವೇಳೆ ಠಾಣೆ ಮುಂದೆ ಪೆಟ್ರೋಲ್ ಹಾಕುತ್ತೇವೆ ಎಂದು ಕಿರಣ್ ಕುಟುಂಬಸ್ಥರು ಹಠ ಹಿಡಿದಿದ್ದರು. ವಿಚಾರಣೆಗೆ ಕರೆತಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ, ಜೊತೆಗೆ ಕಳ್ಳತನ ಮಾಡಿದವರು ಯಾರು ಎಂದು ಹೇಳಬೇಕು. ಇಲ್ಲ ನೀನೇ ಒಪ್ಪಿಕೊಳ್ಳಬೇಕು ಎಂದು ಹೇಳಿ ಕಳಿಸಿದರಂತೆ. ಮತ್ತೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಹೆದರಿ ನೇಣು ಬಿಗಿದುಕೊಂಡು ಕಿರಣ್ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ರಕ್ಷಣೆ ಮಾಡಿದ್ದ ಕುಟುಂಬಸ್ಥರು, ಎಸ್ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ: ಪ್ರವಾಸಕ್ಕೆ ಬಂದಿದ್ದ ವೇಳೆ ಭಾರೀ ದುರಂತ; ನಾಲ್ವರು ಮಕ್ಕಳು ಸಾವು, ಬಾಲಕನ ರಕ್ಷಣೆ
ಯುವಕನಿಗೆ ಟಾರ್ಚರ್ ಎಂದು ಕುಟುಂಬಸ್ಥರ ಆರೋಪವಾಗಿದೆ. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಎಸ್ ಪಿ ಅವರಿಗೆ ಸೂಕ್ತ ತನಿಖೆ ಮಾಡುವಂತೆ ಆದೇಶ ನೀಡಲಾಗಿದೆ.
ಒಂಟಿ ಮನೆಯಲ್ಲಿ ದರೋಡೆ
ಸೆಪ್ಟೆಂಬರ್ 7 ರಂದು ಚನ್ನಗಿರಿ ತಾಲ್ಲೂಕಿನ ಕಾಕನೂರಿನಲ್ಲಿ ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡಿ ಒಂಟಿ ಮನೆಯಲ್ಲಿ ಮಾಡಲಾಗಿದೆ. ಈ ಪ್ರಕರಣಕ್ಕೆ ಹತ್ತಾರು ಯುವಕರನ್ನ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಕಳ್ಳತನಕ್ಕೆ ಒಪ್ಪುವಂತೆ ಟಾರ್ಚರ್ ಇರುವಂತೆ. ಇನ್ನು ಕಿರಣ್ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಮೊಬೈಲ್ ನಲ್ಲಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾನಂತೆ. ಆದರೆ ಮೊಬೈಲ್ ಲಾಕ್ ಆತನಿಗೆ ಮಾತ್ರ ಗೊತ್ತು. ಹೀಗಾಗಿ ಅಸಲಿ ಸತ್ಯ ಮೊಬೈಲ್ ನಲ್ಲಿ ಅಡಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ.
ಆತ್ಮಹತ್ಯೆಗೆ ಯತ್ನಿಸಿರುವ ಕಿರಣ್ ಸ್ಥಿತಿ ಸದ್ಯ ಗಂಭೀರವಾಗಿದೆ. ಜೊತೆಗೆ ದೇಹದ ಮೇಲೆ ಗಾಯದ ಆರೋಗ್ಯ. ಆತನಿಗೆ ನೋಡಲು ಬರಬೇಕಾಗಿದೆ. ವಿಚಾರಣೆಯಲ್ಲಿ ನಿಜವಾಗಿಯೂ ಚಿತ್ರ ಹಿಂಸೆ ನೀಡಿದ್ದರಾ ಎಂಬ ದೊಡ್ಡ ಪ್ರಶ್ನೆಯಾಗಿದೆ. ಸದ್ಯ ಪೊಲೀಸರ ಟಾರ್ಚರ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 6:46 pm, ಭಾನುವಾರ, 2 ನವೆಂಬರ್ 25