
ಬೆಂಗಳೂರು/ದಾವಣಗೆರೆ, (ಮಾರ್ಚ್ 27): ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ರಂಗೇರಿದ್ದು, ಇನ್ನೊಂದೆಡೆ ಕಾಂಗ್ರೆಸ್‌ಗೆ ಮುಸ್ಲಿಂ ಮತಗಳ ಆತಂಕ ಕಾಡುತ್ತಿದೆ. ಯಾಕಂದ್ರೆ ತಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು, ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಾಧಿಕ್ ಪೈಲ್ವಾನ್ ಪ್ರಮುಖರಾಗಿದ್ದರೆ, ಕಾಂಗ್ರೆಸ್ ವೋಟ್ ಬ್ಯಾಂಕ್ ಒಡೆಯುತ್ತಾರೆ ಎಂಬ ಭಯ ಇತ್ತು. ಆದರೆ, ಇದೀಗ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಪೈಲ್ವಾನ್ ಬಂಡಾಯ ಶಮನ ಮಾಡಲು ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಆದರೆ, ಪೈಲ್ವಾನ್ ಹೆಸರು ಮಾತ್ರ ಕಣದಲ್ಲಿ ಇರುತ್ರೆ.
ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ನಿನ್ನೆ (ಮಾರ್ಚ್ 27) ದಾವಣಗೆರೆಯಲ್ಲಿ ಸಾಧಿಕ್ ಪೈಲ್ವಾನ್ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ ಸಾಧಿಕ್ ಅವರನ್ನು ಸಿಎಂ ಬಳಿಕ ಕರೆತಂದು ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸಾಧಿಕ್ ಪೈಲ್ವಾನ್ ಈ ಬಗ್ಗೆ ಯಾವುದೇ ಮಾತನಾಡದೇ ಸಂಜೆ ಹೇಳುತ್ತೇನೆಂದು ಮೌನವಾಗಿ ತೆರಳಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ತಣ್ಣಗಾಗದ ಅಸಮಾಧಾನ, ಅಖಾಡದಲ್ಲೇ ಉಳಿದ ಪೈಲ್ವಾನ್, ಕಾಂಗ್ರೆಸ್ ಗೆ ಟೆನ್ಷನ್
ಸಂಧಾನ ಸಭೆ ಬಳಿಕ ಮಾಧ್ಯಮಗಳಿಗೆ ರಿಜ್ವಾನ್ ಅರ್ಷದ್ ಹೇಳಿಕೆ, ನಾವು ಸಲೀಂ ಅಹ್ಮದ್ ಅವರು ಹೋಗಿ ಭೇಟಿ ಮಾಡಿ ಬಂದಿದ್ವಿ. ಸಾಧಿಕ್ ಪೈಲ್ವಾನ್ ಸಮೇತ ಸಿದ್ದರಾಮಯ್ಯ ಜೊತೆ ಸಿಎಂ ಚರ್ಚೆ ಮಾಡಿದ್ದೇವೆ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಲಾಭ ಆಗಬಾರದು. ಇದೇ ವಿಚಾರವಾಗಿ ಅವರು ಸಿಎಂ ಜೊತೆ ಮಾತಾಡಿದ್ದಾರೆ. ಸಂಜೆ 4 ಗಂಟೆಗೆ ಅವರು ಕೆಪಿಸಿಸಿ ತೆರಳಿ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಸಾಧಿಕ್ ಒಪ್ಪಿಕೊಂಡಿದ್ದಾರೆ. ಶಮನ ಆಗುತ್ತೆ ಎಂದು ನಿನ್ನೆಯೇ ಹೇಳಿದ್ವಿ. ನಾವು ಹೇಳಿದ ಮೇಲೆ ಒಪ್ಪು ಇಲ್ಲಿಗೆ ಬಂದಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಇವರದ್ದು 40 ವರ್ಷಗಳ ಸಂಬಂಧ. ಡಿಸಿಎಂ, ಸುರ್ಜೇವಾಲಾ ಜೊತೆಗೂ ಮಾತಾಡುತ್ತಾರೆ ಎಂದರು.