
ದಾವಣಗೆರೆ, (ಏಪ್ರಿಲ್ 10): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ (ದಾವಣಗೆರೆ ಉಪಚುನಾವಣೆ) ಅಂತ್ಯವಾಗಿದೆ. ಕಳೆದ ಹದಿನೈದು ಇಪ್ಪತ್ತು ದಿನಗಳ ಅಬ್ಬರದ ಪ್ರಚಾರ ಒಂದು ರೀತಿಯಲ್ಲಿ ಭರ್ಜರಿ ಮಳೆ ಸುರಿದು ನಿಂತ ಅನುಭವ. ಬಿರು ಬಿಸಿಲು, ಸೀಮೆಂಟ್ ರಸ್ತೆ ಉಲ್ಟಾ ಝಳ. ನಿರಂತರ ಹುರಿಯುತ್ತಿರುವ ಮಂಡಕ್ಕಿ ಭಟ್ಟಿಗಳ ಕಾವಿಗಿಂತ ಇದು ಸ್ವಲ್ಪ ಹೆಚ್ಚಾಗಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಬಗ್ಗೆ ನಾವು ಹೇಳುತ್ತಿದ್ದೇವೆ. ಹಿರಿಯ ರಾಜಕಾರಣಿ ಆರು ಸಲ ಶಾಸಕ. ಒಮ್ಮೆ ಸಚಿವ, ಒಮ್ಮೆ ಸಂಸದಸಭೆ ಜೊತೆಗೆ ವೀರಶೈವ ಮಹಾಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಕ್ಷೇತ್ರ ದಾವಣೆಗೆರ ದಕ್ಷಿಣ ಕ್ಷೇತ್ರದ ಉಪಚುನಾವಣೆ ಮುಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಮತದಾನದ ಅಂಕಿ ಸಂಖ್ಯೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಮತದಾನದ ಅಂಕಿ ಸಂಖ್ಯೆ ನೋಡುವುದಾದರೆ, ಒಟ್ಟು 158131 ಜನರಿಂದ ಮತದಾನ ಮಾಡಲಾಗಿದೆ. ಅಂದ್ರೆ ಶೇ.68.43ರಷ್ಟು ಮತದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ 50 ಮತಗಟ್ಟೆಗಳಲ್ಲಿ ಅತಿ ಹೆಚ್ಚು ಶೇ 70 ರಿಂದ 80ರಷ್ಟು ಮತದಾನವಾಗಿದೆ. ಕಳೆದ 2023 ಚುನಾವಣೆಯಲ್ಲಿ ಶೇ 69.48ರಷ್ಟು ಮತದಾನವಾಗಿತ್ತು. ಆದರೆ ಈ ಸಲ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಹೊಸದಾಗಿ 20397 ಮತದಾರ ಸೇರ್ಪಡೆ ಆಗುತ್ತಿದೆ. ಈ ಉಪ ಚುನಾವಣೆಯಲ್ಲಿ ಮತದಾನದಿಂದ 72141 ಜನರು ದೂರ ಉಳಿದಿದ್ದಾರೆ. 117690 ಮಹಿಳೆಯಲ್ಲಿ 79823ಮಹಿಳೆಯರು ಮತದಾನ ಮಾಡಿದ್ದಾರೆ. ಇನ್ನು 11339 ಪುರುಷರಲ್ಲಿ 78290 ಪುರುಷರು ತಮ್ಮ ಹಕ್ಕು ಚಲಾಯಿಸಿದ್ದಾರೆ. 43 ಇತರ ಮತದಾರರಲ್ಲಿ 18 ಜನ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಕಿಚ್ಚು ಹೊತ್ತಿಸಿದ ದಾವಣಗೆರೆ ದಂಗಲ್, ಪಕ್ಷದ ವಿರುದ್ಧ ಜಮೀರ್ ಷಡ್ಯಂತ್ರ ರೂಪಿಸಿದ್ರಾ?
ಮುಸ್ಲಿಮರು ಹೆಚ್ಚಿರುವ ಮತಗಟ್ಟೆಯಲ್ಲಿ 56 ಸಾವಿರ ಮತದಾನ
ಈಗ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಅವರು ತಮಗೆ ಟಿಕೆಟ್ ಕೇಳಿದ್ರು. ಆದರೆ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ಮೊಮ್ಮಗ ಸಮರ್ಥ ಶಾಮನೂರು ಗೆ ಟಿಕೆಟ್ ನೀಡಿತ್ತು. ಸಿಎಂ ಮತ್ತು ಡಿಸಿಎಂ ತಲಾ ಮೂರು ದಿನ ಇಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ನಡೆಸಿದರು. ಮುಸ್ಲಿಂ ಮುಖಂಡರ ಮನವೊಲಿಸಿ ಕಣದಿಂದ ಹಿಂದೆ ಸರಿಸಿದ್ದು, ಕೆಲ ಗೊಂದಲಗಳ ನಡುವೆ ಮತದಾನ ಮುಗಿದಿದೆ. ಇನ್ನು ಅಂಕಿ-ಸಂಖ್ಯೆಗಳ ಲೆಕ್ಕಾಚಾರಕ್ಕೆ ಹೋದ್ರೆ ಮುಸ್ಲಿಂ ಮತದಾರರು ಹೆಚ್ಚಿರುವ ಮತಗಟ್ಟೆಯಲ್ಲಿ ಬರೋಬರಿ 56 ಸಾವಿರ ಮತದಾನವಾಗಿದೆ. ಈ ಮತ ಬುಟ್ಟಿಗೆ ಎಸ್ ಪಿಐ ಮತ್ತು ಮುಸ್ಲಿಂ ಪಕ್ಷೇತರರು ಕೈ ಹಾಕಿದ್ದಾರೆ ಎಂಬ ಚರ್ಚೆ ನಡೆದಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿ ಅಸಮಾಧಾನಗೊಂಡಿದ್ದ ಮುಸ್ಲಿಮರ ಮತಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ. ಕೇಸರಿ ಪಡೆ ಇದೇ ಮೊದಲು ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸಿದ್ದು. ಜೊತೆಗೆ ಬಹುತೇಕ ಸಭೆಗಳಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡು ಪ್ರಚಾರ ನಡೆಸಿದೆ. ಹೀಗಾಗಿ ಮುಸ್ಲಿಮರ ಮತಗಳ ವಿಭಜನೆಯಾಗಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಅಲ್ಪಸಂಖ್ಯಾತರ ಮತಕ್ಕೆ ಇತರರು ಕೈ ಹಾಕಿದ್ದಾರೆ ಎಂದು ಚುನಾವಣೆ ಬಳಿಕ ಕಾಂಗ್ರೆಸ್ ಮುಖಂಡ ನೀಡುತ್ತಿರುವ ಹೇಳಿಕೆ ಸಂಶಯಕ್ಕೆ ಕಾರಣವಾಗಿದೆ.
ಗೆಲುವಿನ ಉತ್ಸಾಹದಲ್ಲಿ ಬಿಜೆಪಿ
ಕಳೆದ 2023 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿಜಿ ಅಜಯಕುಮಾರ 56416 ಅಂದ್ರೆ ಶೇ. 38.50ರಷ್ಟು ಮತಪಡೆದಿದ್ದು. ಗೆಲುವು ಕಂಡಿದ್ದ ಶಾಮನೂರು ಶಿವಶಂಕರಪ್ಪ 84298 ಮತ ಅಂದ್ರೆ 57.60 ರಷ್ಟು ಓಟ್ ಪಡೆದು 27888 ಮತಗಳಿಂದ ಗೆದಿದ್ದರು. ಆದರೆ, ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮಾಜ ಮತಗಳ ವಿಭಜನೆ, ಇದು ಬಿಜೆಪಿಗೆ ಪ್ಲಸ್ ಆಗಿ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಕೇಸರಿ ಪಡೆ ನಾಯುಕರದ್ದು. .
ಕಾಂಗ್ರೆಸ್ ಲೆಕ್ಕಾಚಾರವೇನು?
ಇನ್ನೊಂದೆಡೆ ಕಾಂಗ್ರೆಸ್ ನಾಯಕರ ಲೆಕ್ಕಾಚಾರವೇ ಬೇರೆ ಇದೆ. ಕಳೆದ ಚುನಾವಣೆಗಳನ್ನು ನೋಡಿದಾಗ ಮೇಲ್ಜಾತಿಯ ಜನ ಇರುವ ಮತಗಟ್ಟೆಯಲ್ಲಿ ಸಹ ಕಾಂಗ್ರೆಸ್ ಮತಗಳಿಸಿತ್ತು. ಇದು ಈ ಸಲವೂ ಮುಂದುವರಿಯುವ ಸಾಧ್ಯತೆಯಿದೆ. ಮೇಲಾಗಿ ಶಾಮನೂರು ಶಿವಶಂಕರಪ್ಪ ವೀರಶೈವ ಸಮಾಜದ ಅಧ್ಯಕ್ಷ. ಹೀಗಾಗಿ ವೀರಶೈವದ ಮತಗಳ ಸಾಲಿಡ್ ಆಗಿ ಕಾಂಗ್ರೆಸ್ ಬಿದ್ದಿವೆ. ಇನ್ನು ಅಹಿಂದ ವರ್ಗದ ಮತಗಳು ಸಹ ತಮ್ಮ ಪರವಾಗಿ ಬಿದ್ದಿವೆ. ಹಾಗೆಯೇ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗಿಲ್ಲ. ಅಲ್ಪ ಸ್ವಲ್ಪ ಇರಬಹುದು. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರದ ಬದಲಿಗೆ ಗೆಲುವಿನ ಲೀಡ್ ಕಡಿಮೆಯಾಗಹುದು ಎನ್ನುವ ಕಾಂಗ್ರೆಸ್ಸಿಗರ ಲೆಕ್ಕಾಚಾರ
ಏನೇ ಆಗಲಿ ಹಿಂದೆಂದು ಕಂಡರಿಯದ ಸ್ಪರ್ಧೆ ಈ ಸಲ ಆಗಿದೆ. ಜಿದ್ದಾಜಿದ್ದಿ ಸ್ವಲ್ಪ ಜಾಸ್ತಿಯೇ ಇತ್ತು. ಅವರು ಮತ ಕಿತ್ತರೇ, ಆ ಪ್ರದೇಶದಲ್ಲಿ ಇವರು ಸ್ವಲ್ಪ ಜಾಸ್ತಿ ತೆಗೆದುಕೊಂಡರೆ ನಮಗೆ ಅನುಕೂಲ ಎಂಬ ಮಾತುಗಳೇ ಬರುತ್ತಿವೆ. ಹೀಗಾಗಿ ಎರಡು ಪಕ್ಷಗಳ ಮುಖಂಡರಲ್ಲಿ ಗೆಲುವಿನ ವಿಶ್ವಾಸ ಅಂತಿದೆ.