
ದಾವಣಗೆರೆ, (ಏಪ್ರಿಲ್ 09): ಕಾಂಗ್ರೆಸ್ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚನಾವಣೆ (ದಾವಣಗೆರೆ ದಕ್ಷಿಣ ಉಪಚುನಾವಣೆ) ಎದುರಾಗಿದ್ದು, ಇಂದು (ಏಪ್ರಿಲ್ 09) ಮತದಾನ ನಡೆದಿದೆ. ಮತದಾರರು ಸಹ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಆಯ್ಕೆ ಮಾಡುತ್ತಿದ್ದಾರೆ. ಸಂಜೆ 5ರವರೆಗೆ ದಾವಣಗೆರೆ ದಕ್ಷಿಣದಲ್ಲಿ ಶೇಕಡಾ 63.04% ಮತದಾನವಾಗಿದೆ. ಇದರ ಮಧ್ಯೆ ಮಹತ್ವದ ಸಂದೇಶವೊಂದು ಮೊಳಗಿದೆ.ಯಾರು ಮತದಾನ ಮಾಡಿಲ್ಲವೋ ಅವರು ಹೋಗಿ ಮತದಾನ ಮಾಡಿ ಎಂದು ಸಾರ್ವಜನಿಕ ಮೈಕ್‌ನಲ್ಲಿ ಸಂದೇಶ ಕಳುಹಿಸಲಾಗಿದೆ. ದಾವಣಗೆರೆಯ ಆಜಾದ್‌ನಗರದ ಮಿಲ್ಲತ್ ಕಾಲೇಜು ಬಳಿಯಿರುವ ಸಾರ್ವಜನಿಕ ಮೈಕ್ ಮೂಲಕ ಸಂದೇಶ ನೀಡಲಾಯಿತು, ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ, ಎಲ್ಲರೂ ಮತದಾನ ಮಾಡಿ. ಮತದಾನ ಮಾಡಿದವರನ್ನು ಕರೆದುಕೊಂಡು ಹೋಗಿ ವೋಟ್ ಹಾಕಿ ಎಂದು ಮೈಕ್ ನಲ್ಲಿ ಹೇಳಿರುವುದು ವಿಶೇಷ.