Headlines

ದಾವಣಗೆರೆ ಬೈ ಎಲೆಕ್ಷನ್: ಬಿಎಸ್​​ವೈ ಬಣಕ್ಕೆ ತೀವ್ರ ಮುಖಭಂಗ, ಮೇಲುಗೈ ಸಾಧಿಸಿದ ಮಾಜಿ ಎಂಪಿ

ದಾವಣಗೆರೆ ಬೈ ಎಲೆಕ್ಷನ್: ಬಿಎಸ್​​ವೈ ಬಣಕ್ಕೆ ತೀವ್ರ ಮುಖಭಂಗ, ಮೇಲುಗೈ ಸಾಧಿಸಿದ ಮಾಜಿ ಎಂಪಿ


ದಾವಣಗೆರೆ ಬೈ ಎಲೆಕ್ಷನ್: ಬಿಎಸ್ ವೈ ಬಾಣಕ್ಕೆ ತೀವ್ರ ಮುಖಭಂಗ, ಮೇಲುಗೈ ಸಾಧಿಸಿದ ಮಾಜಿ ಎಂಪಿ

ದಾವಣಗೆರೆ, (ಮಾರ್ಚ್ 19): ಕರ್ನಾಟಕದ ಎರಡು ವಿಧಾನಸಭಾ ಉಪಚುನಾವಣೆಗೆ (ದಾವಣಗೆರೆ ಉಪಚುನಾವಣೆ) ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಯುಗಾದಿಯ ದಿನದಂದು, ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ದಾವಣಗೆರೆಯಲ್ಲಿ ಅಚ್ಚರಿಯ ಅಭ್ಯರ್ಥಿಯ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ ಟಿ ದಾಸಕರಿಯಪ್ಪ (ಶ್ರೀನಿವಾಸ್ ದಾಸಕರಿಯಪ್ಪ) ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಮಣೆ ಹಾಕಿದ್ದು, ರಾಜ್ಯ ಬಿಜೆಪಿ ಘಟಕಕ್ಕೆ ಕೇಂದ್ರದ ನಾಯಕರು ಅಚ್ಚರಿ ಮೂಡಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (ಬಿಎಸ್ ಯಡಿಯೂರಪ್ಪ) ವಿರೋಧಿ ಬಣದ ನಾಯಕನಿಗೆ ಟಿಕೆಟ್ ನೀಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಎಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಬಿಎಸ್ ವೈ ಬಣದ ನಾಯಕ ಪಿ ರೇಣುಕಾಚಾರ್ಯಗೆ ಮುಖಭಂಗವಾಗಿದೆ.

ಬಿಜೆಪಿ ಬಿಗ್ ಸರ್ಪ್ರೈಸ್

ಬಾಗಲಕೋಟೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿಯಲ್ಲಿ ಅಷ್ಟೊಂದು ಗೊಂದಲವಿರಲಿಲ್ಲ. ಲಿಂಗಾಯತ ಸಮುದಾಯದ ಚರಂತಿಮಠ ಅವರಿಗೆ ಟಿಕೆಟ್ ಆಗುತ್ತಿದೆ. ಆದರೆ, ದಾವಣಗೆರೆಗೆ ಬಿಜೆಪಿಯ ಎರಡು ಬಣಗಳ ಪೈಪೋಟಿ ಜೋರಾಗಿತ್ತು ಐವರ ಹೆಸರು ಕೇಳಿ ಬರುತ್ತಿತ್ತು.ಬಿಜಿ ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸ ಕರಿಯಪ್ಪ, ದೇವರಮನೆ ಶಿವಕುಮಾರ್ ಮತ್ತು ಯಶವಂತ್ ರಾವ್ ಜಾಧವ್ ಹೆಸರು ಕೇಳಿ ಬರುತ್ತಿದೆ. ಈ ಮೇಲಕ್ಕೆ, ಯುವ ನಾಯಕ ಅಜಯ್ ಕುಮಾರ್ ಅವರಿಗೆ ಟಿಕೆಟ್ ಕನ್ಫರ್ಮ್ ಎಂದು ಹೇಳಿದರು. ಆದರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್, ಈ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಅಥವಾ ಮರಾಠ ಸಮುದಾಯದ ನಾಯಕರಿಗೆ ಟಿಕೆಟ್ ಪದ್ಧತಿಯನ್ನು ಬದಿಗೊತ್ತಿ, ಇದೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡದ (ST) ನಾಯಕ ಶ್ರೀನಿವಾಸ ಟಿ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಇದರೊಂದಿಗೆ ಹೆಚ್ಚು ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಿಗ್ ಸರ್ಪ್ರೈಸ್ ನೀಡಿದೆ.

ಇದನ್ನೂ ಓದಿ: ದಾವಣಗೆರೆ ಬೈ ಎಲೆಕ್ಷನ್: ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್, ಬಿಜೆಪಿಯಲ್ಲಿ ಸಂಚಲನ

ಬಿಎಸ್ ವೈ ವಿರೋಧಿ ಬಣದ ಮೇಲುಗೈ

ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷರಾದ ಶ್ರೀನಿವಾಸ್ ಕಳೆದ ಹಲವು ಚುನಾವಣೆಗಳಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದರು. ಈ ಬಾರಿ ಪಕ್ಷೇತರರಾಗಿ ಇಂಗಿತ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡ ಹೈಕಮಾಂಡ್ ಬಂಡಾಯ ತಡೆಯಲು ಅವರಿಗೆ ಮನ್ನಣೆ ನೀಡಿದೆ. ಮುಖ್ಯವಾಗಿ ಮಾಜಿ ಮಾಜಿ ಸಿಎಂಎಸ್ ಯಡಿಯೂರಪ್ಪ ವಿರೋಧಿ ಬಣದ ಮಾಜಿ ಸಂಸದ ಸಿದ್ದೇಶ್ವರ್ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.

ಯುವ ನಾಯಕ ಅಜಯ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಬಿಎಸ್ ವೈ ಬಾಣದ ರೇಣುಕಾಚಾರ್ಯ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದರು. ಹೀಗಾಗಿ ಎಷ್ಟು ಆಗಲಿ ಯಡಿಯೂರಪ್ಪ ಸಿನಿಯರ್ ಲೀಡರ್. ಇದರಿಂದ ಹೈಕಮಾಂಡ್, ಅಜಯ್ ಕುಮಾರ್ ಅವರಿಗೆ ಮಣೆ ಹಾಕುತ್ತೆ ಎಂದು ಹೇಳಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಬಿಎಸ್ ವೈ ವಿರೋಧಿ ಸಿದ್ದೇಶ್ವರ್ ಬಾಣದ ನಾಯಕನಿಗೆ ಹೈಕಮಾಂಡ್ ಮಣೆ ಹಾಕಿರುವುದು ಅಚ್ಚರಿ ಮೂಡಿಸಿದೆ.

ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ನೇತೃತ್ವದ ಬಣ ಯರಿಯೂರಪ್ಪನವರ ವಿರೋಧಿ ಬಣವಾಗಿತ್ತು. ವಿಜಯೇಂದ್ರ ನಡೆಸುವ ಕಾರ್ಯಚಟುವಟಿಕೆಗಳಿಂದ ಸಿದ್ದೇಶ್ವರ್- ಯತ್ನಾಳ್ ಬಣ ಹಾಜರಾಗಲಿದ್ದಾರೆ. ಸಾಲದಕ್ಕೆ ಸಿದ್ದೇಶ್ವರ್ ಆಗಲಿ ಯತ್ನಾಳ್ ಬಹಿರಂಗವಾಗಿಯೇ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿರುವುದನ್ನು ಇಲ್ಲಿ ಸ್ಮರಿಸಲಾಗುತ್ತಿದೆ. ಇದೀಗ ದಾವಣಗೆರೆ ಕ್ಷೇತ್ರದ ಟಿಕೆಟ್ ವಿಚಾರದಲ್ಲೂ ಸಹ ಬಿಎಸ್‌ಪಟ್ಟವೈ ಆಪ್ತ ರೇಣುಕಾಚಾರ್ಯ ತನ್ನ ಬಣ ಟಿಕೆಟ್ ನೀಡಿದ್ದಾನೆ. ಸಾಲದಕ್ಕೆ ದೆಹಲಿಗೆ ತೆರಳಿ ನಾಯಕರನ್ನು ಭೇಟಿ ಮಾಡಿ ಬಂದಿದ್ದರು. ಆದರೆ, ಅಂತಿಮವಾಗಿ ಹೈಕಮಾಂಡ್ ಸಿದ್ದೇಶ್ವರ ಬಣದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಬಿಎಸ್‌ಐ ಬಣದ ಕ್ಯಾಪ್ಟರ್ ಎಂಪಿ ರೇಣುಕಾಚಾರ್ಯ ಲೆಕ್ಕಾಚಾರವೆಲ್ಲ ತಲೆಕೆಳಗಾಗಿವೆ.

2024 ರ ಲೋಕಸಭೆ ಚುನಾವಣೆ ವೇಳೆ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಯಡಿಯೂರಪ್ಪ, ವಿಜಯೇಂದ್ರ ಆಪ್ತ ವಲಯದ ರೇಣುಕಾಚಾರ್ಯ ಗುಂಪುಕಟ್ಟಿಕೊಂಡು ಆಯ್ಕೆಯಾಗಿದ್ದರು. ಇದು ಸಿದ್ದೇಶ್ವರ್ ಪತ್ನಿ ಸೋಲಿಗೆ ಕಾರಣವಾಯ್ತು. ಹೀಗಾಗಿ ಸಿದ್ದೇಶ್ವರ್ ಕಣ್ಣುಕೆಂಪಾಗಿಸಿದ್ದು, ಅಂದಿನಿಂದ ಸಿದ್ದೇಶ್ವರ್ ಬಿಎಸ್ ವೈ ಕುಟುಂಬ ಹಾಗೂ ರೇಣುಕಾಚಾರ್ಯ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಬಿಎಸ್ವೈ ವಿರೋಧಿ ಬಣ ಕಟ್ಟಿ ತೊಡೆತಟ್ಟಿದ್ದಾರೆ. ಇದೀಗ ರೇಣುಕಾಚಾರ್ಯ ತಮ್ಮ ಆಪ್ತ ಬಿ.ಜಿ.ಅಜಯ್ ಕುಮಾರ್ ಅವರಿಗೆ ಟಿಕೆಟ್ ತಪ್ಪಿಸುವ ಮೂಲಕ ಸಿದ್ದೇಶ್ವರ್ ದಾವಣಗೆರೆ ಬಿಜೆಪಿ ಘಟಕ ತನ್ನ ಹಿಡಿತಕ್ಕೆ ಮುಂದಾಗಿದೆ.

ಆದರೆ ಉಪಚುನಾವಣೆ ಫಲಿತಾಂಶ ಏನಾಗಲಿದೆ ಕಾದುನೋಡಬೇಕಿದೆ.



Source link

Leave a Reply

Your email address will not be published. Required fields are marked *