
ದಾವಣಗೆರೆ, ಏಪ್ರಿಲ್ 01: ದಾವಣಗೆರೆ ದಕ್ಷಿಣ ಚುನಾವಣೆಗೆ (ದಾವಣಗೆರೆ ದಕ್ಷಿಣ ಉಪಚುನಾವಣೆ) ಸಿಎಂ, ಡಿಸಿಎಂ, ಮಾಜಿ ಸಿಎಂಗಳು ಎಂಟ್ರಿಯಿಂದಾಗಿ ಭಾರೀ ರಂಗು ಪಡೆಯುತ್ತಿದೆ. ಬಿರುಬಿಸಿಲಿನಲ್ಲೂ ಮತಬೇಟೆಗೆ ಇಳಿದಿದ್ದು ಗೆಲುವಿಗಾಗಿ ಭರ್ಜರಿ ಭಾಷಣ ಮಾಡುತ್ತಿದ್ದಾರೆ. ನಮ್ಮದು ಹಿಂದುಳಿದವರ, ಬಡವರ ಹಾಗೂ ಮುಸ್ಲಿಂ ಪರವಾದ ಪಕ್ಷ. ಪಕ್ಷೇತರರಿಗೆ ಮತ ನೀಡಬೇಡಿ ಬಿಜೆಪಿ ಗೆಲ್ಲುತ್ತದೆ ಎಂಬ ಸಿಎಂ ಸಂದೇಶ ನೀಡಿದ್ದು, ಅಲ್ಪ ಸಂಖ್ಯಾತರ ಬಗ್ಗೆ ಕಾಂಗ್ರೆಸ್‌ಗೆ ಆತಂಕ ಶುರುವಾಗಿದೆ.
ಸಮರ್ಥ್ ಗೆಲ್ಲಿಸುವಂತೆ ಕರೆ ನೀಡಿದ ಸಿಎಂ ಸಿದ್ದರಾಮಯ್ಯ
ದಾವಣಗೆರೆ ಬೈ ಎಲೆಕ್ಷನ್ ಮುಂದಿನ ಚುನಾವಣೆಗೆ ದಿಕ್ಸೂಚಿ ಅಂತಲೇ ಕರೆಯಲಾಗುತ್ತಿದ್ದು, ಭಾರೀ ಪ್ರಚಾರ ನಡೆಯುತ್ತಿದೆ. ಚುನಾವಣೆಗೆ ಕೆಲವೇ ದಿನ ಉಳಿದಿದೆ. ಈ ಹಿನ್ನಲೆ ದಕ್ಷಿಣದಲ್ಲಿ ಘಟಾನುಘಟಿಗಳ ದಂಡು ಬಿಡುಬಿಟ್ಟಿದೆ. ಮಂಗಳವಾರ ಡಿಸಿಎಂ ಡಿಕೆ ಶಿವಕುಮಾರ್ ಗೇಮ್ ಪ್ಲಾನ್ ಮಾಡಿದರೆ, ಇಂದು ಸಿಎಂ ಸಿದ್ದರಾಮಯ್ಯ, ಸಮರ್ಥ್ ಪರ ಗ್ರೌಂಡ್‌ಗೆ ಇಳಿದು ಹೋದರೆಲ್ಲಾ ಬೆಂಕಿಯ ಭಾಷಣ ಮಾಡಿದ್ದಾರೆ. ನಾಗನೂರು, ಶಿರಮಗೊಂಡನಹಳ್ಳಿ, ತುರ್ಚಗಟ್ಟದಲ್ಲಿ ರೋಡ್ ಶೋ ನಡೆಸಿದ್ದರು. ಸಿಎಂಗೆ ಮಹಿಳೆಯರು ಆರತಿ ಬೆಳಗಿದರು. ಕಂಬಳಿ ಹೊದಿಸಿ ಸನ್ಮಾನಿಸಿದರು. ಬಳಿಕ ಹದಡಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿ ಸಮರ್ಥ್ ಗೆಲ್ಲಿಸುವಂತೆ ಕರೆ ನೀಡಿದರು.
ಬಿಜೆಪಿ ವಿರುದ್ಧ ಸಿಎಂ ಕೆಂಡ
ಇನ್ನು ಬಿಜೆಪಿ ವಿರುದ್ಧ ಕೆಂಡಕಾರಿದ ಸಿಎಂ, ನಾನು ಅಣ್ಣಾರಾಮಯ್ಯ, ನಾನು ಕೊಟ್ಟ ಬಜೆಟ್ ಕೇಂದ್ರ ಬಜೆಟ್ ಗಿಂತ ಚೆನ್ನಾಗಿದೆ. ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಎಲ್ಲವನ್ನೂ ಹೇಳಲಾಗಿದೆ. ಜಮೀರ್ ಅಹ್ಮದ್ ಏಪ್ರಿಲ್ 5 ರಂದು ಪ್ರಚಾರಕ್ಕೆ ಬರ್ತಾರೆ ಅಂದರು. ನಮ್ಮದು ದಲಿತ ಹಿಂದುಳಿದವರು ಹಾಗೂ ಮುಸ್ಲಿಂ ಪರ ಇರುವ ಪಕ್ಷ. ಪಕ್ಷೇತರರಿಗೆ ಮತ ಹಾಕಬೇಡಿ, ಬಿಜೆಪಿ ಗೆದ್ದು ಬಿಡುತ್ತದೆ. ಸಿಎಂರ ಈ ಮಾತು ಸದ್ಯ ಹತ್ತಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
ಇತ್ತ ಬಿಜೆಪಿಯೂ ಸಂಘಟನಾತ್ಮಕವಾಗಿ ಹೆಜ್ಜೆ ಇಡುತ್ತಿದೆ. ಎಲ್ಲಾ ನಾಯಕರು ಒಗ್ಗಟ್ಟಿನ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ. ಮಾಜಿ ಸಿಎಂ ಎಸ್ ಬಿ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಶ್ರೀನಿವಾಸ್ ಪರ ಆರ್ಯ ವೈಶ್ಯ ಸಮಾಜದ ಸಭೆ ನಡೆಸಿ ಮತಬೇಟೆ ನಡೆಸಿದರು. ಬಳಿಕ, ಬಸವರಾಜ್ ಬೊಮ್ಮಾಯಿ ಪೇಟೆಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ರಾಜ್ಯ ಸರ್ಕಾರಕ್ಕೆ ದಾವಣಗೆರೆ ಎಂಬ ದಕ್ಷಿಣದ ಜನ ಪಾಠ ಕಲಿಸುತ್ತಾರೆ ಸಂದೇಶ ರವಾನಿಸಿದರು.
ಇದನ್ನೂ ಓದಿ: ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಒಟ್ಟಾರೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಸಮೀಪಿಸುತ್ತಿದ್ದಂತೆ, ಡಿಸಿಎಂ, ಮಾಜಿ ಸಿಎಂ ಆದಿಯಾಗಿ ಘಟಾನುಘಟಿ ನಾಯಕರು ದಾವಣಗೆರೆಯಲ್ಲಿ ಸಿಎಂ ಬಿಡುಬಿಟ್ಟು ಗೆಲುವಿಗಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಸಚಿವ ಜಮೀರ್ ಅಹ್ಮದ್ ಪ್ರಚಾರಕ್ಕೆ ಬರುತ್ತಾರೆ ಇಲ್ವಾ ಎಂಬ ಚರ್ಚೆ ಕೂಡ ಶುರುವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.