ದಾವಣಗೆರೆ, ನವೆಂಬರ್ 14: ಕ್ಷುಲಕ ಕಾರಣಕ್ಕೆ ಜಗಳವಾಡಿ ಕೋರ್ಟ್ ಸುತ್ತಾಡಿ ಸುಸ್ತಾಗಿದ್ದವರು, ಪ್ರತ್ಯೇಕ ಆಗಬೇಕು ಎಂಬ ಸಂಕಲ್ಪ ಮಾಡಿಯೇ ನ್ಯಾಯವಾದಿಗಳ ಮೂಲಕ ಕೇಸ್ ನಡೆಸುತ್ತಿದ್ದವರು ಅಲ್ಲಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಬೇರೆಯಾಗಬೇಕು ಎಂದುಕೊಂಡಿದ್ದವರೆಲ್ಲಾ ವೈಮನಸ್ಸು ಬಿಟ್ಟು ಒಂದಾಗಿದ್ದಾರೆ. ದಾವಣಗೆರೆ (ದಾವಣಗೆರೆ) ನಗರದ ಕೌಟುಂಬಿಕ ನ್ಯಾಯಾಲಯದ (ಕುಟುಂಬ ನ್ಯಾಯಾಲಯ) ಆವರಣ ಒಂದು ರೀತಿಯಲ್ಲಿ ಸಾಮೂಹಿಕ ವಿವಾಹದ ಕಲ್ಯಾಣ ಮಂಟಪವಾಗಿ ಕಾಣಿಸುತ್ತದೆ. ವಕೀಲರೇ ಇಲ್ಲಿ ಎರಡು ಕಡೆಯ ಬೀಗರು. ನ್ಯಾಯಮೂರ್ತಿಗಳೇ ಒಂದು ರೀತಿಯಲ್ಲಿ ಪ್ರಧಾನ ಪರೋಹಿತರು! ಇವರೇ ವಧು-ವರರಿಗೆ ಶುಭ ಹಾರೈಸುತ್ತಿದ್ದರು. ಮದುವೆ ನಡೆಸಿಕೊಡುತ್ತಿದ್ದರು. ಅಂದಹಾಗೆ, ಬೇರೆಯಾಗಬೇಕು ಎಂದುಕೊಂಡಿದ್ದ ಬರೋಬ್ಬರಿ 8 ಜೋಡಿಗಳು ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ತೀಚೆಗೆ ಮತ್ತೆ ಒಂದಾಗಿವೆ.
ಇದರೊಂದಿಗೆ, ಕಳೆದ ಎರಡು ವರ್ಷಗಳಲ್ಲಿ ಬರೋಬರಿ 180 ಜೋಡಿಗಳನ್ನು ಒಂದಾಗಿಸಿದ ಹೆಗ್ಗಳಿಕೆ ಈ ನ್ಯಾಯಾಲಯದ್ದಾಗಿದೆ. ನ್ಯಾಯಾಲಯದಲ್ಲಿ ವಕೀಲರು ಹಾಗೂ ನ್ಯಾಯಮೂರ್ತಿಗಳ ಮಾನವೀಯತೆಗೆ ಹಿಡಿದ ಕೈಗನ್ನಡಿ ಇದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜೋಡಿಗಳ ಒಂದು ಮಾಡಿ ಸುಮ್ಮನಿರಲ್ಲ ಕೋರ್ಟ್!
ಬೇರೆಯಾಗಲು ಹೊರಟ ಜೋಡಿಗಳನ್ನು ಮತ್ತೆ ಒಂದುಮಾಡುವುದಷ್ಟೇ ಅಲ್ಲದೆ, ಪ್ರತಿ ತಿಂಗಳು ಆ ಜೋಡಿಗಳ ಬಗ್ಗೆ ಕೋರ್ಟ್ ಮೇಲಿವಿಚಾರಣೆ ನಡೆಸುತ್ತದೆ. ಆ ಜೋಡಿ ಒಂದು ವರ್ಷದವರೆಗೆ ಒಂದಾಗಿ ಚೆನ್ನಾಗಿ ಸಹಬಾಳ್ವೆ ನಡೆಸಿದರೆ ಅಲ್ಲಿಗೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
ಈ ನ್ಯಾಯಾಲಯದಲ್ಲಿ ನಾಲ್ಕು ಸಲ ಲೋಕ ಅದಾಲತ್ ನಡೆಯುತ್ತಿದೆ. ಈ ವೇಳೆ, ವಕೀಲರು ಹಾಗೂ ನ್ಯಾಯಮೂರ್ತಿಗಳು ಪ್ರತ್ಯೇಕವಾದ ಪತಿ-ಪತ್ನಿಯರನ್ನು ಕರೆದು ಆತ್ಮೀಯವಾಗಿ ಮಾತಾಡುತ್ತಾರೆ. ಮನವರಿಕೆ ಮಾಡಿಕೊಡುತ್ತಾರೆ.
ಮಹಾವೀರ ಮ ಕರೆಣ್ಣವರ, ಹಿರಿಯ ಸಿವಿಲ್ ನ್ಯಾಯಧೀಶರು
ಇಷ್ಟೇ ಅಲ್ಲದೆ, ದಾವಣಗೆರೆ ನಗರದ ರಾಮ್ ನಗರದಲ್ಲಿ ಇರುವ ರಾಜ್ಯ ಮಹಿಳಾನಿಯರಲ್ಲಿ ಅನಾಥ ಹಾಗೂ ಹತ್ತಾರು ಕಾರಣಕ್ಕೆ ಮನೆ ಬಿಟ್ಟು ಬಂದ ಹೆಣ್ಣು ಮಕ್ಕಳ ರಾಜ್ಯ ಸರ್ಕಾರ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಮದುವೆ ಮಾಡುತ್ತಿದೆ. ಇಂತಹ 40ಕ್ಕೂ ಹೆಚ್ಚು ಅನಾಥ ಹೆಣ್ಣು ಮಕ್ಕಳಿಗೆ ಗಂಡು ಹುಡುಕಿ ಮದುವೆ ಮಾಡಲಾಗಿದೆ. ಇದರಲ್ಲಿ ಸಹ ಕೋರ್ಟ್ ಪಾತ್ರ ಮಹತ್ವದ್ದಾಗಿದೆ. ಇತ್ತೀಚಿಗೆ ಇಬ್ಬರು ವಿಶೇಷ ಚೇತನ ಯುವಕ ಯುವತಿಗೆ ಮದ್ವೆ ಮಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ – ದಾವಣಗರೆ ಮಧ್ಯೆ ಕೆಎಸ್ ಆರ್ ಟಿಸಿ ಫ್ಲೈಬಸ್ ಸೇವೆಗೆ ಚಾಲನೆ
ಒಟ್ಟಿನಲ್ಲಿ, ನ್ಯಾಯಾಲಯದಿಂದಾಗಿ ಕಳೆದ 2 ವರ್ಷಗಳಲ್ಲಿ ಮತ್ತೆ ಒಂದಾದ 180 ಜೋಡಿಗಳ ಮೇಲೆ ಶೇ 99ರಷ್ಟು ಜೋಡಿಗಳು ಮತ್ತೆ ನೆಮ್ಮದಿಯ ಬದುಕು ಸಾಗಿಸುತ್ತಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:36 am, ಶುಕ್ರ, 14 ನವೆಂಬರ್ 25