ದಾವಣಗೆರೆ, ನವೆಂಬರ್ 7: ದಾವಣಗೆರೆ ಜಿಲ್ಲೆಯ ಹೂವಿನಮಡು ಗ್ರಾಮದಲ್ಲಿ ಅಮವಾಸ್ಯೆ ಹಾಗೂ ಹುಣ್ಣಿಮೆ ಬಂದರೆ ಯಾರೂ ಕೂಡ ಮನೆಯಿಂದ ಹೊರ ಬರುತ್ತಿಲ್ಲ. ಕಳೆದೊಂದು ವರ್ಷದಿಂದ ಹತ್ತಕ್ಕೂ ಹೆಚ್ಚು ಮನೆಗಳ ಮುಂದೆ ಮಂತ್ರಿಸಿದ ನಿಂಬೆಹಣ್ಣು ಇಡಲಾಗಿದೆ. ಕಾರು, ಬೈಕ್ ಹಾಗೂ ಟ್ರ್ಯಾಕ್ಟರ್‌ಗಳ ಕೆಳಗೆ ವಾಮಾ ಮಾಡಲಾಗುತ್ತಿದೆ ಎಬಂಬ ಆರೋಪ ಕೇಳಿಬಂದಿದೆ. ಅಮವಾಸ್ಯೆ- ಹುಣ್ಣಿಮೆಗೆ ಕೆಲವರ ಮನೆಯಲ್ಲಿ ಜನ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಕೌಟುಂಬಿಕ ಕಲಹ ಆಗಿರಬಹುದು.
ಬುದ್ಧವಾರ ಹುಣ್ಣಿಮೆ ಇತ್ತು. ಹೀಗಾಗಿ ವಾಮಾಚಾರ ಮಾಡುವವರನ್ನು ಪತ್ತೆ ಹಚ್ಚಲು ಕೆಲ ಯವಕರು ರಾತ್ರಿಯಿಡೀ ಕಾದಿದ್ದರು. ಈ ವೇಳೆ ಗ್ರಾಮದ ರಾಜಪ್ಪ ಎಂಬಾತ ಈ ಕೃತ್ಯ ಎಸಗುತ್ತಿರುವುದನ್ನು ನೋಡಿದ್ದಾಗ ಜನರು ಆರೋಪಿಸಿದ್ದಾರೆ. ಕೆಲವರ ಜತೆ ಜಮೀನು ವಿವಾದವಿದ್ದು, ರಾಜಪ್ಪ ಹೀಗೆ ಮಾಡುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಈ ಬಗ್ಗೆ ಹದಡಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ಮಾಟ-ಮಂತ್ರದಿಂದ ಕಾಪಾಡಪ್ಪ ಭಗವಂತ’ ಎಂದು ಜನ ಸಿಕ್ಕ ಸಿಕ್ಕ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಆರೋಪಿಯನ್ನ ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ