
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಈ ದಿನ ನೀವು ನಿರೀಕ್ಷಿಸುವ ರೀತಿಯಲ್ಲಿ ವೃತ್ತಿಜೀವನದಲ್ಲಿ ತಿರುವು ಬರುವ ಸಾಧ್ಯತೆಯಿದೆ. ಮನೆಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಇದು ಉತ್ತಮ ದಿನವಾಗಿರುತ್ತದೆ. ಸಮಾರಂಭ- ಗೆಟ್ ಟು ಗೆದರ್ ಗೆ ಆಹ್ವಾನ ಬರಬಹುದು. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆ ಅವಶ್ಯ; ಹೊಸ ಸಾಲ ತೆಗೆದುಕೊಳ್ಳುವ ನಿರ್ಧಾರ ಸಾಧ್ಯವಾದಷ್ಟೂ ಬೇಡ. ಅನಿರೀಕ್ಷಿತವಾಗಿ ವಾಹನದ ರಿಪೇರಿ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ಬರಬಹುದು. ಪ್ರೀತಿಯಲ್ಲಿ ಇರುವವರಿಗೆ ಜತೆಯಾಗಿ ಸಮಯ ಕಳೆಯುವಂಥ ಯೋಗ ಇದ್ದು, ಭವಿಷ್ಯದಲ್ಲಿನ ಯೋಜನೆಗಳ ಬಗ್ಗೆ ತುಂಬ ಘನವಾದ ಚರ್ಚೆಯನ್ನು ನಡೆಸಲಾಯಿತು. ಅದು ಆತ್ಮೀಯವಾದ ಸಂಭಾಷಣೆ ಆಗಲಿದೆ. ಜೊತೆಗೆ ಹಿರಿಯರೊಬ್ಬರಿಂದ ಪರಿಚಯ ಆಗುವ ಹೊಸ ಕಲಿಕಾ ವಿಧಾನ ಉತ್ಸಾಹವನ್ನು ನೀಡುತ್ತದೆ. ಯೋಗ–ಧ್ಯಾನ ಮಾಡುವುದರಿಂದ ಮನೋಬಲ ಹೆಚ್ಚುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮಗೆ ಬಹಳ ದಿನಗಳಿಂದ ಬಾಕಿ ಉಳಿದುಹೋಗಿದ್ದ ಮಾಹಿತಿ ಅಥವಾ ಹಣ ನಿಮ್ಮ ಕಡೆ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಮಹತ್ವ ಸಿಗುತ್ತದೆ. ಮನೆ ಬದಲಾವಣೆ ಎಂದಿರುವವರು ಅಥವಾ ಮನೆಯ ಜಾಗಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ. ನವ ವಿವಾಹಿತರಲ್ಲಿ ಸಂಗಾತಿಯೊಂದಿಗೆ ದೂರ ಪ್ರಯಾಣಕ್ಕೆ ತೆರಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ವಿದ್ಯಾರ್ಥಿಗಳು ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾ ಇದ್ದಲ್ಲಿ, ನೀವು ಮಾಡುವ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಸಿಗುವ ಸೂಚನೆ ದೊರೆಯುತ್ತದೆ. ಆರೋಗ್ಯದಲ್ಲಿ ಕೆಲವು ಏಳುಪೇರು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ತಲೆಸುತ್ತು– ಕಣ್ಣಿನ ರೆಪ್ಪೆ ಭಾರವಾದಂತೆ ಆಗುವುದು ಈ ರೀತಿ ತೊಂದರೆ ಆಗಬಹುದು, ಹೂಡಿಕೆಯ ಬಗ್ಗೆ ಮುಖ್ಯವಾದ ತೀರ್ಮಾನಗಳನ್ನು ಈ ದಿನ ತೆಗೆದುಕೊಳ್ಳದಿರುವುದು ಉತ್ತಮ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನೀವು ದಿನವನ್ನು ಆರಂಭಿಸುವ ರೀತಿಯೇ ಉತ್ಸಾಹಭರಿತವಾಗಿ ಇರುತ್ತದೆ. ನಿಮ್ಮ ಮನಸ್ಸಿಗೆ ಅನಿಸಿದಂಥ ಕೆಲವು ಕೆಲಸಗಳನ್ನು ತಕ್ಷಣವೇ ಪೂರ್ಣ ಮಾಡುವುದಕ್ಕೆ ಆದ್ಯತೆಯನ್ನು ನೀಡಿ. ಆದರೆ ಮುಖ್ಯವಾದ ವಿಚಾರವೊಂದರ ಬಗ್ಗೆ ತಕ್ಷಣವೇ ನಿರ್ಧಾರ ಹೇಳಬೇಕು ಎಂಬ ಒತ್ತಡ ಹೇರಿದ ಮೇಲೆ ಅದಕ್ಕಾಗಿ ಕೇಳಿ. ಉದ್ಯೋಗಕ್ಕೆ ಸಣ್ಣದಾಗಿ ನಿಮ್ಮ ಸಹೋದ್ಯೋಗಿಗಳ ಜೊತೆಗೆ–ಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಯಾರನ್ನೋ ಸಮಾಧಾನ ಮಾಡಬೇಕು- ಮನವೊಲಿಸುವ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸನ್ನು ವ್ಯರ್ಥವಾಗಿ ವೆಚ್ಚ ಮಾಡುವುದಕ್ಕೆ ಹೋಗಬೇಡಿ. ಕುಟುಂಬದಲ್ಲಿನ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮನಸ್ಸಿಗೆ ತೃಪ್ತಿ- ಸಮಾಧಾನ ದೊರೆಯಲಿದೆ. ಸ್ನೇಹಿತರು ನೀಡುವ ಸಲಹೆಯನ್ನು ಅಳವಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿ. ಕತ್ತು–ಭುಜದ ನೋವು ಸಣ್ಣ ಪ್ರಮಾಣದಲ್ಲಿಯಾದರೂ ತೊಂದರೆ ಮಾಡಬಹುದು. ವಾಹನ ಓಡಿಸುವಾಗ ಎಚ್ಚರಿಕೆ ಅಗತ್ಯ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಈ ದಿನ ನಿಧಾನವಾಗಿ ಶುರುವಾಯಿತು ಎಂದೆನಿಸಿದರೂ ಮಧ್ಯಾಹ್ನದಿಂದ ನಿಮ್ಮ ಚಟುವಟಿಕೆ. ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದೆ, ಹೊಸ ಕೆಲಸ- ಕಾರ್ಯಗಳಿಗೆ ಗಮನ ನೀಡಲು ಅವಕಾಶ ದೊರೆಯಲಿದೆ. ಒಂದು ಕೆಲಸ ಮಾಡಿಕೊಟ್ಟಿದ್ದೀರಿ, ಹಿಂದಿನ ಬಾಕಿ ಬಿಲ್ಗಳು ಉಳಿದುಹೋಗಿವೆ ಎಂದಾದಲ್ಲಿ ಅದರ ವಸೂಲಾತಿಗೆ ಏನು ಮಾಡಬೇಕು ಎಂಬ ಬಗ್ಗೆ ನಿಮ್ಮ ಗಮನ ನೀಡಲಾಯಿತು. ಇನ್ನು ನೀವು ಬೇರೆಯವರಿಗೆ ಕೊಡಬೇಕಾದ ಹಣ ಉಳಿದು ಹೋಗಿದ್ದರೆ ಸಮಯಕ್ಕೆ ಸಿಗುವುದು ಒಳ್ಳೆಯದು. ಕುಟುಂಬದಲ್ಲಿ ಮಕ್ಕಳ ವಿಚಾರವಾಗಿ ಸಂತಸದ ಸುದ್ದಿ ಬರುತ್ತದೆ. ಸಂಗಾತಿಗೆ ಚಿಕ್ಕ- ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ. ನಿಮ್ಮ ಹಳೆಯ ಸ್ನೇಹಿತರು ಮತ್ತೆ ಸಂಪರ್ಕಕ್ಕೆ ಬರಲಿದ್ದಾರೆ. ಒಂದು ವೇಳೆ ಗ್ಯಾಜೆಟ್ಗಳ ಖರೀದಿ ಮಾಡಬೇಕು ಎಂದಿದ್ದಲ್ಲಿ ಆತುರ ಮಾಡುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಒಂದಲ್ಲಾ ಒಂದು ಕಾರಣಕ್ಕಾಗಿ ನೀವು ಮಾಡಬೇಕು ಎಂದುಕೊಂಡ ಕೆಲವು ಕೆಲಸಗಳು ವಿಳಂಬವಾಗುವ ಸಾಧ್ಯತೆಯಿದೆ. ಹಾಗಂತ ಆತುರ ಮಾಡುವ ಅಗತ್ಯವಿಲ್ಲ. ಹಣಕಾಸಿನ ವಿಷಯದಲ್ಲಿ ಎಲ್ಲರೂ ಸಲಹೆ ನೀಡುವದನ್ನು ಪಾಲಿಸಬೇಕು. ಒಂದು ವೇಳೆ ಅವು ಪ್ರಯೋಜನಕ್ಕೆ ಬಾರದು ಎಂದೆನಿಸಿದರೆ ಕೇಳಿಸಿಕೊಳ್ಳುವ ಅಗತ್ಯವೂ ಇಲ್ಲ. ಮನೆಯಲ್ಲಿ ಇರುವ ಮಹಿಳಾ ಕುಟುಂಬ ಸದಸ್ಯರಿಗೆ ಆರೋಗ್ಯದ ವಿಚಾರಕ್ಕೆ ನೀವು ಹೆಚ್ಚಿನ ಗಮನವನ್ನು ನೀಡುತ್ತೀರಿ. ಒಂದು ವೇಳೆ ನೀವೇನಾದರೂ ಪ್ರೀತಿಯಲ್ಲಿ ಇದ್ದೀರಿ ಅಂತಾದಲ್ಲಿ ಸಂಗಾತಿಯ ಕಾಳಜಿಯ ಮಾತುಗಳಿಂದ ಸಂತೋಷ ಆಗಲಿದೆ. ಉದ್ಯೋಗದಲ್ಲಿ ಹಿರಿಯ ಸಹೋದ್ಯೋಗಿಗಳ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳುವ ಯೋಗ ಇದೆ. ವ್ಯಾಪಾರಿಗಳಿಗೆ ಹೊಸ ಒಪ್ಪಂದದ ಚರ್ಚೆ ಯಶಸ್ವಿಯಾಗಲಿದೆ. ಸ್ನೇಹಿತರ ಜೊತೆಗೆ ಅನವಶ್ಯಕ ವಾದ- ವಿವಾದ ಮಾಡಿಕೊಳ್ಳಬೇಡಿ. ಆಹಾರದಲ್ಲಿ ವಿಪರೀತ ಸಿಹಿ– ವಿಪರೀತ ಕಾರದ ಪದಾರ್ಥ ಎರಡೂ ಬೇಡ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಕೆಲಸಕ್ಕೆ ಹೆಚ್ಚಿನ ಒತ್ತಡ ನಿಮ್ಮ ಮೇಲೆ ಬೀಳಲಿದೆ. ಮೇಲಿಂದ ಮೇಲೆ ಫೋನ್ ಕಾಲ್ಗಳು, ಕೆಲವು ತಾಂತ್ರಿಕ ಸಮಸ್ಯೆಗಳನ್ನು ನೀವೇ ಪರಿಹರಿಸಬೇಕು ಎಂದು ಕೇಳಿಕೊಳ್ಳುವುದು ಬಿಡುವಿಲ್ಲದಷ್ಟು ಕೆಲಸಗಳು ಮೈ ಮೇಲೆ ಬರುವಂತೆ ಮಾಡುತ್ತವೆ. ಹೂಡಿಕೆ ವಿಚಾರಗಳಲ್ಲಿ ದಿಢೀರ್ ನಿರ್ಧಾರಗಳನ್ನು ಮಾಡುವುದಕ್ಕೆ ಹೋಗಬೇಡಿ. ಸ್ವಲ್ಪ ಹಣವನ್ನು ಕೈಯಿಂದ ಕಳೆದುಕೊಳ್ಳುವಂತೆ ಆಗುತ್ತದೆ. ನಿಮಗೆ ಕುಟುಂಬದ ಸದಸ್ಯರು ಯಾರ ಮೇಲಾದರೂ ಆಕ್ಷೇಪ ಇದ್ದಲ್ಲಿ ಅದನ್ನು ನಯವಾಗಿ ಹೇಳಿ ಮುಗಿಸಲು ಪ್ರಯತ್ನಿಸಿ. ನಿಮ್ಮ ಕೆಲವು ಸ್ನೇಹಿತರು ಅನಿರೀಕ್ಷಿತವಾಗಿ ದೊಡ್ಡ ಸಹಾಯವನ್ನು ಮಾಡಲಿದ್ದಾರೆ. ಸಂಗಾತಿಯ ಆರೋಗ್ಯ ವಿಚಾರ ಪ್ರಾಮುಖ್ಯವನ್ನು ಪಡೆಯಲಿದೆ. ಆರಂಭದ ಕೆಲವು ಬೆಳವಣಿಗೆಗಳು ಚಿಂತೆಗೆ ಕಾರಣ ಆಗಲಿವೆ. ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್- ಅಸೈನ್ ಮೆಂಟ್ ಗಳನ್ನು ಏಕಾಗ್ರತೆಯಿಂದ ಪೂರ್ಣಗೊಳಿಸುವ ಕಡೆಗೆ ಲಕ್ಷ್ಯ ನೀಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ಕಾರ್ಯನಿರ್ವಹಣೆ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ಇದರಿಂದ ನಿಮಗೂ ಸಂತೋಷ- ಸಮಾಧಾನ ದೊರೆಯಲಿದೆ. ಉದ್ಯೋಗ ಮೇಲಧಿಕಾರಿಗಳಿಂದ ಪ್ರೋತ್ಸಾಹ ದೊರೆಯಲಿದೆ. ಉದ್ಯೋಗ- ವೃತ್ತಿ- ವ್ಯವಹಾರ- ವ್ಯಾಪಾರದಲ್ಲಿ ನಿಮ್ಮ ಮಾತಿಗೆ ತೂಕ ಸಿಗುವ ದಿನ ಇದಾಗಿದೆ. ಕುಟುಂಬದಲ್ಲಿ ಮುಖ್ಯವಾಗಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾದ ವಿಷಯಗಳು ಚರ್ಚೆ ಆಗಲಿವೆ. ಅಲರ್ಜಿ– ಚರ್ಮದ ಸಮಸ್ಯೆಗಳು ಪದೇ ಪದೇ ಕಾಣಿಸುತ್ತಾ ತೊಂದರೆ ನೀಡುತ್ತಾ ಇದ್ದಲ್ಲಿ ಅಂಥವುಗಳಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ದಿನ ಇದು. ಹಣಕಾಸು ವಿಚಾರದಲ್ಲಿ ಹರಿವು ಚೆನ್ನಾಗಿರುತ್ತದೆ. ದೂರದ ಸಂಬಂಧಗಳಿಂದ ಸಂತಸದ ಸುದ್ದಿ ಬರುವ ಸಾಧ್ಯತೆ ಇದೆ. ಪ್ರೀತಿಯಲ್ಲಿ ಇರುವವರು ಈ ಬಗ್ಗೆ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಿ, ಮದುವೆಗೆ ಒಪ್ಪಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸಂತೋಷ ಹಾಗೂ ವಿಶ್ವಾಸ ಎರಡೂ ಹೆಚ್ಚುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಈ ದಿನ ಕೆಲವು ಹೊಸ ಕೆಲಸ- ಕಾರ್ಯಗಳನ್ನು ಪ್ರಾರಂಭಿಸಲಾಗಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಪದೋನ್ನತಿ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ ಎಂಬ ಮಾಹಿತಿ ದೊರೆಯಲಿದೆ. ಅಥವಾ ಮುಖ್ಯವಾದ ಕೆಲವು ಹೊಸ ಜವಾಬ್ದಾರಿಗಳನ್ನು ನಿಮಗೆ ವಹಿಸಲಿದ್ದಾರೆ. ಕುಟುಂಬದ ಸದಸ್ಯರ ಹಿರಿಯರಾದವರ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ಮಾಡುವುದು ಅವಶ್ಯ ಇರುತ್ತದೆ. ನಿಮ್ಮ ಬಳಿ ಉಳಿತಾಯ- ಹೂಡಿಕೆ ಹಣವನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವುದಕ್ಕೆ ಇದು ಸೂಕ್ತ ದಿನವಾಗಿದೆ. ತಾವೊಬ್ಬರೇ ಹೋಗುವಾಗ ಜತೆಯಲ್ಲಿ ನೀವೂ ಬಂದರೆ ಅನುಕೂಲವಾಗುತ್ತದೆ ಎಂದು ನಿಮ್ಮ ಸ್ನೇಹಿತರು ಹೇಳುವುದರಿಂದ ದಿಢೀರ್ ಪ್ರಯಾಣಕ್ಕೆ ತೆರಳುವಂತೆ ಆಗಲಿದೆ. ಶೀತ- ಜ್ವರದ ಬಾಧೆ ಅಲ್ಪ ಪ್ರಮಾಣದಲ್ಲಿಯಾದರೂ ಕಾಡಲಿದೆ. ಸಂಜೆ ಕೆಲವು ಮನರಂಜನಾ ಕಾರ್ಯಕ್ರಮದಲ್ಲಿ ಭಾಗೀ ಆಗುವಂಥ ಯೋಗ ಇದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಈ ದಿನ ನಿಮ್ಮ ಸಂಪರ್ಕ ವಲಯವನ್ನು ವಿಸ್ತರಿಸುವಂಥ ಅವಕಾಶಗಳು ಹೆಚ್ಚಾಗಿವೆ. ಹೊಸ ವ್ಯಕ್ತಿಗಳ ಪರಿಚಯವಾಗಿ, ಅವರಿಂದ ದೀರ್ಘಾವಧಿಗೆ ದೊಡ್ಡ ಅನುಕೂಲಗಳು ಆಗುವ ಸುಳಿವು ಸಿಗಲಿದೆ. ನೀವು ತೊಡಗಿಸಿಕೊಂಡಿರುವ ವ್ಯವಹಾರದಲ್ಲಿ ಆಗುವ ಬೆಳವಣಿಗೆಯಿಂದ ನಿಮಲ್ಲಿ ಹೊಸ ಚೈತನ್ಯ ಮೂಡಲಿದೆ. ಭಾವನಾತ್ನಕ ಕ್ಷಣಗಳಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ, ಮಿತವ್ಯಯದ ಕಡೆಗೆ ಹೆವ್ವು ನೀಡುವುದು ಅಗತ್ಯ. ನಿಮ್ಮ ಯಾವುದೇ ಕೆಲಸಕ್ಕೆ ಸಂಗಾತಿಯಿಂದ ಪ್ರೋತ್ಸಾಹ ದೊರೆಯಲಿದೆ. ವಿಮರ್ಶಾತ್ಮಕವಾಗಿ ನಿಮ್ಮ ಸ್ನೇಹಿತರು ಹೇಳುವಂಥ ಅಭಿಪ್ರಾಯಗಳನ್ನು ಗೌರವಿಸಿ. ಹೀಗೆ ಮಾಡುವುದರಿಂದ ನಿಮ್ಮ ಮುಂದಿನ ಯೋಜನೆಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಎದೆಯುರಿ- ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಇನ್ನು ಮನೆಯ ಕೆಲಸ- ಕಾರ್ಯಗಳಲ್ಲಿ ಹಲವಾರು ರೀತಿಯಲ್ಲಿ ಸಹಕಾರ ದೊರೆಯಲಿದೆ. ಈ ಹಿಂದೆ ಆದ ಘಟನೆಗಳ ಬಗ್ಗೆ ಪ್ರಸ್ತಾವ ಮಾಡುವುದರಿಂದ ಸ್ವಲ್ಪ ಬೇಸರ ಕಾಡಬಹುದು.
ಲೇಖನ- ಎನ್.ಕೆ.ಸ್ವಾತಿ