Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ವೈದ್ಯಕೀಯ ಪರೀಕ್ಷೆಗಳಿಗೆ ಹೆಚ್ಚಿನ ಖರ್ಚು ಆಗಲಿದೆ. ಫಾಲೋಅಪ್ ಪರೀಕ್ಷೆಗಳನ್ನು ಮಾಡಬೇಕಿತ್ತು, ಆದರೆ ನಾನಾ ಕಾರಣಗಳಿಗೆ ಮಾಡಿಸದೆ ಹಾಗೆಯೇ ಇದ್ದುಬಿಟ್ಟಿದ್ದಿರಿ ಅಂತಾ ಪರಿತಪಿಸುವಂತೆ ಆಗಲಿದೆ. ಸರ್ಕಾರದ ಮಟ್ಟದಲ್ಲಿ ತುಂಬ ಮುಖ್ಯವಾದ ಹುದ್ದೆಯನ್ನು ನಿರ್ವಹಿಸುತ್ತಾ ಇರುವವರಿಗೆ ನಿಯೋಜನೆಯ ಮೇಲೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. ನೀವು ಬಹಳ ಸಮಯದಿಂದ ಹುಡುಕುತ್ತಾ ಇದ್ದ ದಾಖಲೆಗಳು- ಮುಖ್ಯ ಮಾಹಿತಿಗಳನ್ನು ತಿಳಿದುಕೊಂಡ ವ್ಯಕ್ತಿಯ ಬಗ್ಗೆ ವಿವರಗಳು ತಿಳಿದುಬರುತ್ತವೆ, ಮನಸ್ಸಿನಲ್ಲಿ ಸಮಾಧಾನ ಮೂಡುತ್ತದೆ. ಊಟ- ತಿಂಡಿ, ನಿದ್ರೆ ಸಮಯಕ್ಕೆ ಸರಿಯಾಗಿ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಕೆಲಸದ ಒತ್ತಡದ ಕಾರಣಕ್ಕೆ ಇವುಗಳ ನಿರ್ಲಕ್ಷ್ಯದಿಂದ ಬೇರೆ ರೀತಿಯ ತೊಂದರೆಗಳನ್ನು ಅನುಭವಿಸುವಂತೆ ಆಗಲಿದೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಮೂಗು ತೂರಿಸುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನೀವು ಹೇಗೆ ಕಾಣಿಸಿಕೊಳ್ಳಬೇಕು, ವೃತ್ತಿಪರವಾಗಿ- ಉದ್ಯೋಗದ ದೃಷ್ಟಿಯಿಂದ ಹೇಗೆ ಆಕರ್ಷಕವಾಗಿ ಪ್ರಸೆಂಟೇಷನ್ ಇರಬೇಕು ಎಂಬ ಆಲೋಚನೆಯನ್ನು ಮಾಡಬೇಕಾಗಿದೆ. ಈ ಯಾರಿಗೆ ಸಹಾಯ ಮಾಡಿದ್ದಿರಿ, ಅಂಥವರು ಈಗ ನಿಮ್ಮ ಅಗತ್ಯಕ್ಕೆ ಹಿಂದೆ ನೆರವು ನೀಡಲಿದ್ದಾರೆ. ಮನೆಯ ಮಟ್ಟಿಗೆ ಕಾರ್ಯಕ್ರಮ ಮಾಡಲೇಬೇಕು ಎಂಬುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕಾಗಿ ಖರ್ಚು- ವೆಚ್ಚಕ್ಕೆ ಹಣ ಹೊಂದಾಣಿಕೆಯೊಂದಿಗೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕೆಲವು ಕಡೆಯಿಂದ ನಕಾರಾತ್ಮಕ ಉತ್ತರ ಬರಲಿದೆ, ಇದರಿಂದ ಮಾನಸಿಕವಾಗಿ ಕುಗ್ಗಬೇಕಿಲ್ಲ. ಏಕೆಂದರೆ ಬಹಳ ಹಿಂದೆ ನೀವು ಪ್ರಯತ್ನ ಪಟ್ಟು, ಆಗ ಯಾವುದೇ ಉತ್ತರ ದೊರೆಯದಿದ್ದ ಸಂಸ್ಥೆಯಿಂದ ಈಗ ಹೊಸದಾಗಿ ಆಫರ್ ಬರಬಹುದು. ನಿಮ್ಮಲ್ಲಿ ಕೆಲವರಿಗೆ ಖಿನ್ನತೆ ಕಾಡಬಹುದು, ಅದರಲ್ಲಿಯೂ ಮಕ್ಕಳು ಕೇಳಿದ್ದನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಹೀಗಾಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸಂಗೀತ – ನೃತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆತ್ಮವಿಶ್ವಾಸ ಹೆಚ್ಚಾಗುವಂಥ ದಿನ ಇದಾಗಿದೆ. ಪ್ರತಿಷ್ಠಿತ ವೇದಿಕೆಯೊಂದರಲ್ಲಿ ಪ್ರದರ್ಶನ ನೀಡುವುದಕ್ಕೆ ಅವಕಾಶ ಹುಡುಕಿಕೊಂಡು ಬರಲಿದೆ. ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ದೊಡ್ಡ ಮೊತ್ತದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ಮನೆ ನಿರ್ಮಾಣಕ್ಕಾಗಿ ಆರ್ಕಿಟೆಕ್ಟ್ ಭೇಟಿ ಮಾಡಿ, ಚರ್ಚೆ ನಡೆಸಿದೆ. ದಿನಸಿ ಅಂಗಡಿ ನಡೆಸುತ್ತಾ ಇರುವವರಿಗೆ ರಿನೋವೇಶನ್, ಅಲಂಕಾರಕ್ಕಾಗಿ ಹಣ ಹೂಡಿಕೆ ಎಂಬ ಆಲೋಚನೆ ಬರಲಿದೆ. ವಾಹನ ಚಾಲನೆ ಮಾಡುವಾಗ ವೇಗದ ಡ್ರೈವಿಂಗ್ ಬೇಡ. ತೆರಳಬೇಕಾದ ಸ್ಥಳದಲ್ಲಿ ಹತ್ತು ನಿಮಿಷ ಮುಂಚಿತವಾಗಿಯೇ ಇರುವಂತೆ ಯೋಜನೆ ಮಾಡಿಕೊಳ್ಳುವುದು ಒಳ್ಳೆಯದು. ಶೀತ- ಕೆಮ್ಮು- ಕಫದ ಸಮಸ್ಯೆ ಇರುವವರಿಗೆ ಅನಾರೋಗ್ಯ ಸಮಸ್ಯೆ ಉಲ್ಬಣಿಸಿದೆ, ಕಿರಿಕಿರಿ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಅನಿರೀಕ್ಷಿತವಾಗಿ ಆದಾಯ ಬರುವ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವಾಗಿಯೇ ಬೇಡವೆಂದು ಬಿಟ್ಟಂಥ ಕೆಲಸಗಳನ್ನು ಪೂರ್ಣ ಮಾಡಲು ಈ ಹಿಂದಿಗಿಂತ ಹೆಚ್ಚಿನ ಹಣವನ್ನು ನೀಡುವುದಾಗಿ ಹುಡುಕಿಕೊಂಡು ಬರಲಿದೆ. ಮಕ್ಕಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಕೆಲವು ವ್ಯವಸ್ಥೆಗಳನ್ನು ಮಾಡಿಕೊಡಲು. ನಿಮಗೆ ಈ ದಿನ ಸಿಗುವ ಅತಿ ಸಣ್ಣ ಅವಕಾಶವನ್ನು ಸಹ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಲಕ್ಷ್ಯವನ್ನು ನೀಡಿ. ಕಮ್ಯುನಿಕೇಷನ್ ಗ್ಯಾಪ್ ಬಾರದ ರೀತಿಯಲ್ಲಿ ನೋಡಿಕೊಳ್ಳುವುದು ಸಹ ಬಹಳ ಮುಖ್ಯ ವಸ್ತು. ನೀವೇ ಹೇಳಿದ ವಿಚಾರವನ್ನು “ನಾನು ಹಾಗೆ ಹೇಳಿಲ್ಲ, ಅರ್ಥದಲ್ಲಿ ಹೇಳಿಲ್ಲ” ಎಂದು ವಾದ ಹೂಡುತ್ತಾ ಪಟ್ಟು ಹಿಡಿಯಬೇಡಿ. ವಾಹನಗಳ ಖರೀದಿಗಾಗಿ, ಮುಖ್ಯವಾಗಿ ಸೆಕೆಂಡ್ ಹ್ಯಾಂಡ್ ವಾಹನ ಕೊಳ್ಳಬೇಕು ಎಂದಿರುವವರು ಹಣವನ್ನು ಖರ್ಚು ಮಾಡಿದ್ದಾರೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಇಷ್ಟು ಕಾಲ ಯಾವ ವಿಚಾರದಲ್ಲಿ ನಿರ್ಧಾರ ಮಾಡುವುದಕ್ಕೆ ಹಿಂಜರಿಕೆ ಆಗುತ್ತಿದೆಯೋ ಆ ಬಗ್ಗೆ ಸ್ಪಷ್ಟ ತೀರ್ಮಾನ ಮಾಡಿಕೊಳ್ಳಲಾಗಿದೆ. ಉದ್ಯೋಗದಿಂದ ಬಿಡುವುದು ಬಹಳ ಕಾಲ ಆಯಿತು ಎಂದಿದ್ದಲ್ಲಿ ಮತ್ತೆ ಕೆಲಸ ಹುಡುಕುವುದಕ್ಕೆ ಶುರು ಮಾಡಿದೆ. ಬಾಡಿಗೆ ಮನೆಯಲ್ಲಿ ವಾಸ ಇರುವವರು ಬದಲಾವಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ತಾತ್ಕಾಲಿಕವಾಗಿ ನಿರ್ಧಾರವನ್ನು ಮುಂದಕ್ಕೆ ಹಾಕಿದರು. ನೀವು ಯಾವ ಮಾತನ್ನು ಕೇಳಿಸಿಕೊಳ್ಳಬಾರದು, ಆಡಿಸಿ ಕೊಳ್ಳಬಾರದು ಎಂದುಕೊಳ್ಳುತ್ತಾ ಇರುತ್ತೀರೋ ಅಂಥವರನ್ನು ನಿಮ್ಮ ಆಪ್ತರು ಆಡುವ ಮೂಲಕ ಕಿರಿಕಿರಿ ಮಾಡುತ್ತಾರೆ. ನಿಮಗೆ ಆದಾಯ ಬರುವಂಥ ರೆಫರೆನ್ಸ್‌ಗಳನ್ನು ಕುಟುಂಬ ಸದಸ್ಯರೇ ಮಾಡಲಿದ್ದಾರೆ, ಇದು ದೀರ್ಘಾವಧಿಯವರೆಗೆ ಸಹಾಯ ಆಗುವಂಥ ಆರ್ಡರ್‌ಗಳು, ಅವಕಾಶಗಳನ್ನು ತರಬಹುದು. ಈ ದಿನ ಸಾಧ್ಯವಾದಾಗ ಹತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡುವುದಕ್ಕೆ ಆದ್ಯತೆ ನೀಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ವೃತ್ತಿನಿರತರು, ಉದ್ಯೋಗಿಗಳು ವಿರಾಮ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರುತ್ತೀರಿ. ದೀರ್ಘ ಕಾಲದ ರಜಾ ಅವರು ಕುಟುಂಬದ ಸದಸ್ಯರೊಂದಿಗೆ ನಾಲ್ಕಾರು ದಿನ ಪ್ರವಾಸಕ್ಕೆ ತೆರಳಲು ತರಾತುರಿಯಲ್ಲಿ ಕೊನೆ ಕ್ಷಣದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಲೇವಾದೇವಿ ವ್ಯವಹಾರ ಮಾಡುತ್ತಿರುವವರಿಗೆ ತುರ್ತಾಗಿ ಹಣ ಹೊಂದಿಸಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಮೊದಮೊದಲಿಗೆ ತುಂಬ ನಯವಾಗಿ ಮಾತನಾಡುತ್ತಾ, ನೀವು ಹೇಳಿದಂತೆಯೇ ನಡೆದುಕೊಳ್ಳುತ್ತೇನೆ ಎಂದೆನ್ನುತ್ತಿದ್ದ ವ್ಯಕ್ತಿಯೊಬ್ಬರು ನಿಮ್ಮ ಫೋನ್ ಕಾಲ್ ಕೂಡ ರಿಸೀವ್ ಮಾಡುತ್ತಿಲ್ಲ ಎಂಬ ಸಂಗತಿ ಆತಂಕ ಸೃಷ್ಟಿಸಲಿದೆ. ಸ್ನೇಹಿತರು- ನಿಮಗೆ ಸಲಹೆ ನೀಡುವುದಕ್ಕೆ ಬಂದಲ್ಲಿ ಸಿಟ್ಟಿನಲ್ಲಿ ಉತ್ತರಿಸಲು ಹೋಗಬೇಡಿ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಸದ್ಯದಲ್ಲೇ ನಡೆಯಬೇಕಾದ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಗಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಾನು ಮಾಡಿದ್ದು ಎಂದು ಹೇಳುವ ಮುನ್ನ ಅದರ ಪರಿಣಾಮಗಳ ಬಗ್ಗೆ ಸಾವಿರ ಬಾರಿ ಯೋಚಿಸುವುದು ಒಳ್ಳೆಯದು. ಏಕೆಂದರೆ ಈ ವಿಚಾರವು ಹಲವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಡಲಿದೆ. ನೀವು ನಿಜ ಹೇಳುತ್ತಿದ್ದೀರೋ ಇಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ ಬೇರೆಯವರಿಗೆ ಅದು ಇಷ್ಟವಾಗುತ್ತೋ ಇಲ್ಲವೋ ಎಂದು ಯೋಚಿಸುವಂತೆ ಆಗಲಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರೇ ಆದರೂ ಆದಾಯದಲ್ಲಿ ಇಳಿಕೆ ನಿಮ್ಮಲ್ಲಿ ಒಂದು ಬಗೆಯ ಆತಂಕವನ್ನು ಸೃಷ್ಟಿಸಲಿದೆ. ಜ್ಯೋತಿಷಿಗಳು, ಪುರೋಹಿತರು, ಅಧ್ಯಾತ್ಮ ಚಿಂತಕರಿಗೆ, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ, ಲೆಕ್ಕ ಪರಿಶೋಧಕರಿಗೆ ಒಬ್ಬರಲ್ಲ ಒಬ್ಬ ವ್ಯಕ್ತಿಯಿಂದ ಮನಸ್ಸಿಗೆ ಬೇಸರ ಆಗುವಂಥ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ನಕ್ಕು ಮನಸ್ಸು ಹಗುರ ಮಾಡಿಕೊಳ್ಳೋಣ ಎಂದುಕೊಂಡ ಬಹಳ ಆಪ್ತರಾದ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹಕ್ಕು- ಬಾಧ್ಯತೆಗಳ ವಿಚಾರ ತುಂಬ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಲಿವೆ. ಕುಟುಂಬದ ಸದಸ್ಯರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂಬ ಭಾವನೆ ಮೂಡುವಂತೆ ಕೆಲವು ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ಇತರರಿಂದ ನಿಂದನೆ- ಬಯ್ಗುಳ ಕೇಳಿಸಿಕೊಂಡ ನಂತರವೂ ನೀವು ಯಾವುದೇ ಸಮಜಾಯಿಷಿ ಅಥವಾ ಸಮರ್ಥನೆ ನೀಡಬಾರದು ಎಂಬುದು ಎದುರಿಗೆ ಇರುವವರ ನಿರೀಕ್ಷೆ ಆಗಿರುತ್ತದೆ. ದೇವರ ಪೂಜಾ ಕಾರ್ಯಕ್ರಮ, ಜಾತ್ರೆ, ವಾರ್ಷಿಕೋತ್ಸವ ಇಂಥವುಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಸ್ವಲ್ಪ ಸಮಾಧಾನ- ತೃಪ್ತಿ ಸಿಗಲಿದೆ. ಇದೇ ಕೊನೆ ಎಂದು ನೀವು ಮಾಡಿದ ಪ್ರಯೋಗ ಯಶಸ್ಸು ಕಾಣಲಿದೆ. ಬಾರ್- ರೆಸ್ಟೋರೆಂಟ್, ಹೋಟೆಲ್, ಪೆಟ್ರೋಲ್ ಬಂಕ್, ಕಲ್ಲು ಕ್ವಾರಿ ವ್ಯವಹಾರ ಮಾಡುವ ಪ್ರಯತ್ನ ಮಾಡುತ್ತಾ ಇರುವವರಿಗೆ ಲೈಸೆನ್ಸ್ ಮೊದಲಾದ ವಿಚಾರಗಳಿಗೆ ಸ್ಪಷ್ಟ ಚಿತ್ರಣವೊಂದು ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಇತರರ ಬಗ್ಗೆ ದಯೆ- ಕಾರುಣ್ಯ, ಅಂತಃಕರಣದಿಂದ ನಡೆದುಕೊಳ್ಳಲು ಆದ್ಯತೆಯನ್ನು ನೀಡಿ. ಉದ್ಯೋಗ ಸ್ಥಳದಲ್ಲಿ ಆಯ್ಕೆಯಾದರು ಆ ಹುದ್ದೆಯಲ್ಲಿ ಮುಂದುವರಿಯಬೇಕಾ ಅಥವಾ ಕೆಲಸದಿಂದ ತೆಗೆಯಬೇಕಾ ಎಂಬ ಪ್ರಶ್ನೆಯನ್ನು ನಿಮ್ಮಿಂದ ಕೇಳಿ, ಆ ನಿರ್ಧಾರವನ್ನು ನಿಮಗೇ ಬಿಟ್ಟರೆ ತುಂಬ ಎಚ್ಚರಿಕೆಯಿಂದ ತೀರ್ಮಾನ. ದೀರ್ಘಾವಧಿಗೆ ಪ್ರಯೋಜನ ಆಗುವಂಥ ಕೆಲಸಗಳಿಗೆ ಹೆಚ್ಚು ಸಮಯವನ್ನು ಮೀಸಲಿಡುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧ್ಯಾತ್ಮ ಜೀವನದಲ್ಲಿ ತುಂಬ ದೊಡ್ಡ ಬದಲಾವಣೆ ತರುವಂಥ ಘಟನೆ ಈ ದಿನ. ಅದು ಅಂಥ ವ್ಯಕ್ತಿಯೊಬ್ಬರ ಭೇಟಿ ಇರಬಹುದು, ಅಂಥದ್ದೊಂದು ಪ್ರವಚನ ಕೇಳಿಸಿಕೊಳ್ಳುವಂಥ ಅವಕಾಶ ಇರಬಹುದು, ಅಥವಾ ನಿಮ್ಮ ಜೀವನದಲ್ಲಿ ನಡೆದ ಘಟನೆಯಿಂದಾಗಿ ಮಾರ್ಪಾಡು ಆಗಲಿದೆ. ಚಿನ್ನ- ಬೆಳ್ಳಿ ಇಂಥ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡಿರುವವರು ಸ್ವಲ್ಪ ಮೊತ್ತವನ್ನಾದರೂ ಹಿಂಪಡೆಯುವುದಕ್ಕೆ ತೀರ್ಮಾನ ಮಾಡಿದ್ದಾರೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *