Headlines

Weekly Horoscope: ನಿಮ್ಮ ರಾಶಿಗನುಗುಣವಾಗಿ ಡಿ. 21 ರಿಂದ 27ರ ವರೆಗಿನ ವಾರಭವಿಷ್ಯ ತಿಳಿಯಿರಿ

Weekly Horoscope: ನಿಮ್ಮ ರಾಶಿಗನುಗುಣವಾಗಿ ಡಿ. 21 ರಿಂದ 27ರ ವರೆಗಿನ ವಾರಭವಿಷ್ಯ ತಿಳಿಯಿರಿ


ಡಿಸೆಂಬರ್ ತಿಂಗಳ ಈ ವಾರ ಸೂರ್ಯ, ಶುಕ್ರ, ಕುಜರ ಯೋಗ ಧನುರಾಶಿಯಲ್ಲಿ ಆಗಲಿದೆ ಗುರುವಿನ ರಾಶಿಯಲ್ಲಿ ಇರುವ ಇವರು ಶುಭ ಫಲವನ್ನೇ ಕೊಡುವರು. ಉತ್ಸಾಹ ಮತ್ತು ಸರ್ಕಾರದ ಕಾರ್ಯಗಳು ಬೇಗ ಆಗಲಿವೆ. ಶಸ್ತ್ರಕ್ಕೆ ಸಂಬಂಧಿಸಿದ ಉದ್ಯೋಗಗಳು ಫಲಿತವಾಗುವುದು. ಎಲ್ಲ ಗ್ರಹಗಳೂ ಏಕಾದಶ ಸ್ಥಾನದ ಫಲವನ್ನು ಕೊಡಲಿ.

ಮೇಷ ರಾಶಿ:

ಈ ವಾರ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಇಂದ್ರಜಾಲದಂತೆ ಮಾಯ ಪರ್ವ. ಕ್ಷಣಾರ್ಧದಲ್ಲಿ ಪರಿಹಾರವನ್ನು ಮಾಡಬಲ್ಲಿರಿ. ನಿಮ್ಮ ವ್ಯವಹಾರದ ಬಗ್ಗೆ ಸಲ್ಲದ ಮಾತುಗಳನ್ನು ಕೇಳಬಹುದು. ಕಿವಿಗೆ ಹಾಕಿಕೊಳ್ಳಿ, ಚಿಂತಿಸುವ ಅವಶ್ಯಕತೆ ಇಲ್ಲ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡಬೇಕಾಗುವುದು. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ದ್ವಂದ್ವಹರೂ ನಿಮ್ಮನ್ನು ಏನೂ ಮಾಡಲಾಗದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡ ಕಡಿಮೆ ಆಗುವುದು. ಕಾರ್ತಿಕೇಯನ ಸ್ಮರಣೆ ಸದಾ ಮನದಲ್ಲಿ ನಡೆಯಲಿ.

ವೃಷಭ ರಾಶಿ:

ನ ಈ ವಾರದ ಉನ್ನತ ಅಧಿಕಾರಿಗಳು ಡಿಸೆಂಬರ್ ನಿಮ್ಮಿಂದ ಅಧಿಕ ನಿರೀಕ್ಷೆಯನ್ನು ಮಾಡುತ್ತಾರೆ. ಉದ್ಯಮಿಗಳ ಕೆಲಸದಲ್ಲಿ ಅಡೆತಡೆಗಳು ಬಂದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಮುಂದುವರಿಯಿರಿ. ಕಳೆದುಕೊಂಡಿದ್ದನ್ನು ನೀವು ಪಡೆದುಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಎಷ್ಟೋ ಹಣವನ್ನು ಕಳೆದುಕೊಂಡಿದ್ದು ಅನಂತರ ಗೊತ್ತಾಗಲಿದೆ. ಒಮ್ಮೆಲೆ ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ವ್ಯವಹಾರದಲ್ಲಿ ಗೊಂದಲ ಇಟ್ಟುಕೊಳ್ಳುವುದು ಬೇಡ. ಅಲ್ಲೇ ಪರಿಹಾರ ಮಾಡಿಕೊಳ್ಳಿ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ಮಹಾಲಕ್ಷ್ಮೀ ಸ್ತೋತ್ರವನ್ನು ಪಠಿಸಿ.

ಮಿಥುನ ರಾಶಿ:

ಮೂರನೇ ರಾಶಿಯವರು ಈ ವಾರ ವಿದೇಶದ ತಮ್ಮ ಬದುಕನ್ನು ಸ್ವಾವಲಂಬಿಯಾಗಿಸಿಕೊಳ್ಳಲು ಬಯಸುವರು. ಯಾವುದೋ ಅಸತ್ಯವಾದ ಉದ್ಯೋಗಕ್ಕೆ ಮನಸೋತು ಹಣವನ್ನು ಕಳೆದುಕೊಳ್ಳಬೇಕಾದೀತು. ವ್ಯಾಪಾರದ ನಷ್ಟವನ್ನು ಇನ್ನಾವುದರಿಂದಲೇ ತುಂಬಿಸಿಕೊಳ್ಳಿರಿ. ಈ ವಾರ ಮನೆಯ ಯಾವ ವಸ್ತುಗಳನ್ನೂ ಇತರರಿಗೆ ಕೊಡಲು ಇಚ್ಛಿಸುವುದಿಲ್ಲ. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ವಾರ ಪೂರ್ತಿ ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗ್ರತೆ ಇರಲಿ. ಈ ವಾರ ನಟರಿಗೆ ಅವಕಾಶ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲ ಸ್ಥಿತಿ. ಉಪವಾಸ ವ್ರತದಿಂದ ಮಹಾವಿಷ್ಣುವನ್ನು ಮೆಚ್ಚಿಸುವಿರಿ.

ಕರ್ಕಾಟಕ ರಾಶಿ:

ಈ ವಾರ ವರ್ತನೆಯನ್ನು ನೀವು ನಿಯಂತ್ರಿಸದಿದ್ದರೆ ತಮಾಷೆಯ ವಸ್ತುವಾಗುವುದು. ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ಈ ವಾರ ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಕೊಳ್ಳಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮಗೆ ಈ ವಾರ ನಿಯಮಿತ ಚೌಕಟ್ಟನ್ನು ಬಿಟ್ಟು ಆಚೆ ಬರಲು ಆಗದು. ನಿಮ್ಮ ಮಾತಿನಿಂದ ಕುಲಕ್ಕೆ ಅವಮಾನವಾಗಬಹುದು. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ. ಚಂಚಲವಾದ ಮನಸ್ಸು ನಿಮ್ಮ ಸಂಗಾತಿಗೆ ಇಷ್ಟವಾಗದು. ಯೋಗಗಳನ್ನು ಬೆಳೆಸಿಕೊಳ್ಳಿರಿ.

ಸಿಂಹ ರಾಶಿ:

ಐದನೆಯ ರಾಶಿಯವರಿಗೆ ಈ ವಾರ ಕಛೇರಿಯಲ್ಲಿ ಎಲ್ಲರ ಜೊತೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗುವುದು. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನಗಳನ್ನು ಮಾಡಿರಿ. ಈ ವಾರ ಪೂರ್ತಿ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ. ಕಚೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡುವ ಮನವಿಯನ್ನು ಸಲ್ಲಿಸಿ. ಯಾವುದೇ ಹೊಸ ಯೋಜನೆ ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗುವುದು. ನಿಮಗೆ ಬೇಕಾದ ವ್ಯವಸ್ಥೆ ನೀವು ಮಾಡಿಕೊಳ್ಳುವಿರಿ. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆದು ಮಾಡಬೇಕಾದ ಕಾರ್ಯಕ್ಕೆ ಪೂರ್ಣವಿರಾಮ ಕೊಡುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಮೃತ್ಯುಂಜಯನ ಸ್ಮರಣೆ ಆಗಾಗ ಬರಲಿ.

ಕನ್ಯಾ ರಾಶಿ:

ಈ ವಾರದ ಒತ್ತಡದ ನಡುವೆಯೂ ತಾಳ್ಮೆಯನ್ನು ನೀವು ಉಳಿಸಿಕೊಳ್ಳುವ ಪ್ರಯತ್ನ ಸಾಗಲಿದೆ. ಈ ವಾರ ಕಾರಣಾಂತರಗಳಿಂದ ನಿಲ್ಲಿಸಿದ್ದ ಕಾರ್ಯವನ್ನು ಅನ್ಯರ ಸಹಕಾರದಿಂದ ಪ್ರಾರಂಭಿಸುವಿರಿ. ಹಳೆಯ ವಾಹನವನ್ನು ಪಡೆದುಕೊಳ್ಳಿ. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡಬೇಕಾದೀತು. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಸೂಕ್ತ. ಕೆಲವು ಶುಭ ಸೂಚನೆಗಳು ನಿಮಗೆ ಗೊತ್ತಾಗಲಿದೆ ನಿರೀಕ್ಷೆಯೂ ಎಂದಿಗಿಂತ ಹೆಚ್ಚಿರಲಿದೆ. ಮಾತುಗಾರರು ತಾನಾಗಿಯೇ ವಾಚಾಳಿತನವನ್ನು ಕಡಿಮೆಮಾಡುತ್ತಾರೆ. ಈ ವಾರ ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ನಿಮಗೆ ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯ ಕಳೆದುಹೋಗುವುದು. ನಿಮಗೆ ಗೊತ್ತೇ ಇರುವ ಕೆಲಸವನ್ನೂ ನೀವು ಈ ವಾರ ಮಾಡಬೇಕಾದೀತು. ಎಲ್ಲದರಲ್ಲಿ ಈ ರೀತಿಯಾಗಿ ನಿಮ್ಮ ಪ್ರಯತ್ನವನ್ನು ಮುಂದುವರೆಸಿರಿ. ತಪೋರಾಮನನ್ನು ಮನಸ್ಸಿನಲ್ಲಿ ಚಿಂತಿಸಿ.

ತುಲಾ ರಾಶಿ:

ಏಳನೇಯ ರಾಶಿಯವರಿಗೆ ಈ ವಾರದ ಉನ್ನತ ಅಧಿಕಾರಿಗಳ ಜೊತೆ ಹೆಚ್ಚು ವ್ಯವಹಾರ ಮಾಡಬೇಕಾಗಿರುವ ಕಾರಣ ಅವರ ಜೊತೆ ಇರುವವರು. ಹಣಕಾಸಿನ ಬಗ್ಗೆ ವಿಶೇಷವಾಗಿ ಕಾಳಜಿ ಬೇಕು ವೆಚ್ಚ. ಈ ವಾರ ಜಾಹೀರಾತು ಇರುವವರಿಗೆ ಅವಕಾಶ ಸಿಗಬಹುದು. ವಾಗ್ಮಿಗಳೂ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಈ ವಾರ ನೀವು ಮಾಡುವ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿರಿಯರಿಂದ ಒತ್ತಾಯ ಬರಲಿದೆ. ಲೆಕ್ಕಪತ್ರದ ವಿಚಾರದಲ್ಲಿ ನಿಷ್ಠುರವಾದ ಮನೋಭಾವವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೆ ಇರುವವರಿಂದ ದೂರ ಉಳಿಯುವಿರಿ. ಪ್ರಯತ್ನಪೂರ್ವಕ ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ವೃಶ್ಚಿಕ ರಾಶಿ:

ಡಸೆಂಬರ್ ನ ಈ ವಾರ ನೀವು ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು. ಲಾಭಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳಿ. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ. ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟ ವಸ್ತು. ಪ್ರಯಾಣದಿಂದ ವಾಡವಿಡೀ ಹಿಂಸೆಯನ್ನು ಅನುಭವಿಸಬೇಕಾದೀತು. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸಿದೆ. ಈ ವಾರ ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ ನಿಮಗೆ ಅಸೂಯೆ. ಈ ವಾರದ ನಿಮ್ಮ ಇಚ್ಛಾಶಕ್ತಿಯು ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿ. ಮಹಾಕಾಳಿಯನ್ನು ಉಪಾಸನೆ ಮಾಡಿ.

ಧನು ರಾಶಿ:

ಗುರುವಿನ ಆಧಿಪತ್ಯದ ಈ ರಾಶಿಗೆ ಗುರು ದೃಷ್ಟಿಯೂ ಇದ್ದು ಈ ವಾರ ಉದ್ಯೋಗವನ್ನು ಅರಸುತ್ತಿರುವ ನೀವು ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಉತ್ತಮ ಕೆಲಸವನ್ನು ನಷ್ಟ ಮಾಡಿಕೊಂಡೆ ಎಂಬ ಭಾವ ಬರಬಹುದು. ಯಂತ್ರದ ವ್ಯಾಪಾರದಿಂದ ನಿಮಗೆ ಲಾಭವು ಅಧಿಕವಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡರು ಅನಂತರ ಬೇಸರಿಸುತ್ತಾರೆ. ಈ ವಾರ ಉದ್ಯಮದ ಕಾರಣ ಇರುವ ಸ್ಥಳದಿಂದ ದೂರ ಹೋಗಬೇಕಾಗುವುದು. ಸುಳ್ಳನ್ನಾಡಿ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದನೆ ಸಿಗಬಹುದು. ಈ ವಾರ ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಒಂದು ಕಾರ್ಯಕ್ಕೆ ವಿಘ್ನಗಳು ಬರುತ್ತಿರುವ ದೈವಜ್ಞರನ್ನು ಸೂಕ್ತ ಪರಿಹಾರವನ್ನು ಪಡೆದಿದ್ದಾರೆ. ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ತಿಳಿಯುವುದು. ಗುರುಚರಿತ್ರೆಯ ಪಠಣ ಮಾಡಿ.

ಮಕರ ರಾಶಿ:

ಹತ್ತನೇ ರಾಶಿಯವರು ಈ ವಾರ ಹಠಮಾರಿತನದಿಂದ ಮನೆಯವರ ಹೃದಯವನ್ನೂ ನೋಯಿಸುವಿರಿ. ಮೇಲಧಿಕಾರಿಗಳಿಗೆ ನೇರ ನುಡಿಯ ಪ್ರತಿಕ್ರಿಯೆಯನ್ನು ನೀಡುವುದು ಬೇಡ. ಈ ವಾರ ದೈನಂದಿನ ಬಳಕೆಯ ವಸ್ತುಗಳ ವ್ಯಾಪಾರ ಮಾಡುವವರ ಮಾರಾಟ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ವಿವಾದದಲ್ಲಿರುವ ಆಸ್ತಿಯಿಂದ ಮಾರಾಟವು ನಿಧಾನವಾಗುವುದು. ಸರ್ಕಾರದ ಕಾರ್ಯವು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಈ ವಾರ ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬರಬಹುದು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ನಿಮ್ಮ ವಾಹನಕ್ಕಾಗಿ ಬಹಳ ಖರ್ಚನ್ನು ಮಾಡುತ್ತಾರೆ. ಈ ವಾರ ಸಿಕ್ಕ ಅವಕಾಶದಲ್ಲಿ ಪ್ರೀತಿಯಿರಲಿ. ಪ್ರೀತಿಯ ವಿಷಯದಲ್ಲಿ ಬರಲಿದೆ. ದೋಷ ನಿವಾರಣೆಯ ಸಂಕಲ್ಪ ಮಾಡಿ ಗೋವಿಗೆ ದೀಪ ಬೆಳಗಿ.

ಕುಂಭ ರಾಶಿ:

ಡಿಸೆಂಬರ್ ತಿಂಗಳ ನಾಲ್ಕನೇ ವಾರ ನಿಮ್ಮ ಕಾರ್ಯದ ಅನುಭವವು ಪ್ರಯೋಜನಕ್ಕೆ ಬರಲಿದೆ, ಎಲ್ಲರೂ ನಿಮ್ಮ ಸಲಹೆಯನ್ನು ಪಡೆಯುತ್ತಾರೆ. ಕಲಾವಿದರು ಅವಕಾಶದಿಂದ ವಂಚಿತರಾಗಬೇಕಾಗುವುದು. ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಲಿದೆ. ನ್ಯಾಯಾಲಯಕ್ಕೆ ನಡೆಯುವುದು ಅಧಿಕವಾಗಿ ಇರುವುದು. ಈ ವಾರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿ ತೋರಿ ಅವರನ್ನು ಓದಿ ಪ್ರೇರಣೆ ಕೊಡಬೇಕಾಗುವುದು. ಮನೆಯ ಕೆಲಸಗಳೇ ಬಹಳ ಆಗಿರುತ್ತದೆ ಇನ್ನೊಂದು ಕಾರ್ಯಕ್ಕೆ ತಾಳ್ಮೆ ಇರಲಾರದು. ನಿಮ್ಮ ಉತ್ಸಾಹವನ್ನು ಕಸಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಆದಾಯದ ವಿಚಾರದಲ್ಲಿ ಹಿನ್ನಡೆ ಹೊಂದಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸುತ್ತದೆ. ಶನೈಶ್ಚರನಿಗೆ ನಿಮ್ಮಿಂದ ಸೇವೆ ಸಲ್ಲಲಿ.

ಮೀನ ರಾಶಿ:

ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಸಂಪೂರ್ಣ ಜಾಗರೂಕರಾಗಿರುವುದರಿಂದ ಮಾತ್ರ ಅವಕಾಶಗಳು ಸಿಗುತ್ತವೆ. ಕಛೇರಿ ಕೆಲಸವು ನಿಮ್ಮ ಸ್ವಂತ ಕೆಲಸಕ್ಕೆ ತೊಂದರೆ ಕೊಡಬಹುದು. ಈ ವಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡುತ್ತಾರೆ. ಈ ವಾರ ಒಂದಿಷ್ಟು ಆಯಾಸ ಬಿಟ್ಟರೆ, ಮತ್ತೇನೂ ಆಗದು. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ವಾರಾಂತ್ಯದಲ್ಲಿ ಸಂಗಾತಿಯ ಜೊತೆ ಭಿನ್ನಮತವನ್ನು ತಂದುಕೊಳ್ಳುವಿರಿ. ಹಿರಿಯ ಕುಟುಂಬದವರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು. ವೃದ್ಧರ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಉದ್ಯೋಗವನ್ನು ನಂಬಿ ಜೀವನ ಸಾಗಿಸುವವರಿಗೆ ಬೇಸರವಾಗಬಹುದು. ಗುರುದರ್ಶನವನ್ನು ಮಾಡಿ ತೃಪ್ತಿಯ ಭಾವ ಬರಲಿದೆ.

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *