ಬೆಂಗಳೂರು, ಅ.22: ದೀಪಾವಳಿ ಹಬ್ಬದ ಸಂಭ್ರಮ ಮುಗಿದ ನಂತರ ಬೆಂಗಳೂರಿನ ಕೆ.ಆರ್. ಭಾರೀ ಪ್ರಮಾಣದ ಕಸದ ರಾಶಿ ಬಿದ್ದಿದ್ದು ಗಬ್ಬು ನಾತ ಬರುತ್ತಿದೆ . ಹಬ್ಬದಂದು ಮಾರಾಟವಾದ ಹೂವು, ಹಣ್ಣು, ತರಕಾರಿ, ಬಾಳೆ ಕಂದು, ಮಾವಿನ ತೋರಣ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳು ರಸ್ತೆ ಬದಿಯಲ್ಲಿ ಮತ್ತು ಮಧ್ಯದಲ್ಲಿ ರಾಶಿರಾಶಿಯಾಗಿ ಬಿದ್ದಿವೆ. ಈ ಕಸದ ರಾಶಿಯಿಂದಾಗಿ ಮಾರುಕಟ್ಟೆ ಪ್ರದೇಶವು ಗಬ್ಬು ನಾರುತ್ತಿದೆ, ಜನರಿಗೆ ಕಷ್ಟದಾಯಕವಾಗಿದೆ. ವಿಶೇಷವಾಗಿ ರಸ್ತೆಗಳ ಮೇಲೆ ಬಿದ್ದಿರುವ ಕಸದಿಂದ ಸವಾರರು ಮತ್ತು ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಎರಡು ದಿನಗಳಲ್ಲಿ ಬೆಂಗಳೂರಿನ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಗಾರ್ಬೇಜ್ ಸಿಟಿಯಾಗಿ ಮಾರ್ಪಟ್ಟಿದೆ. ಹಬ್ಬದ ಸಾಮಗ್ರಿಗಳನ್ನು ಮಾರಾಟ ಮಾಡಿದ ನಂತರ ಜನರಿಂದ ಆಗುವ ಎಚ್ಚರಿಕೆಯು ಈ ರೀತಿಯ ನೈರ್ಮಲ್ಯದ ಸಮಸ್ಯೆಗೆ ಪ್ರಮುಖವಾಗಿದೆ. ಮಾರುಕಟ್ಟೆ ಪ್ರದೇಶಗಳಲ್ಲಿನ ಈ ಅಸಮರ್ಪಕ ಕಸ ನಿರ್ವಹಣೆಯು ನಗರದ ಸೌಂದರ್ಯ ಮತ್ತು ಆರೋಗ್ಯಕ್ಕೆ ಧಕ್ಕೆ ತರುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ