Headlines

ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ,ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್

ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ,ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್

ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ,ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್

ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ, ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್, ಗುರೂಜಿ ಜೈಲು ಸೇರಿದ್ದರೂ ಪ್ರಭಾವ ಬಳಸಿ ತನ್ನ ವಿರುದ್ಧ ಸಾಕ್ಷ್ಯ ಸಿಗದಂತೆ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

ರಾಸಲೀಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಾಸಿಕ್ ಗುರೂಜಿ ಅಶೋಕ್ ಖಾರಟ್ ತನಿಖೆಯಲ್ಲಿ ಹಲವು ಸ್ಪೋಟಕ ಮಾಹಿತಿಗಳು ಹೊರಬಂದಿದೆ. 100ಕ್ಕೂ ಹೆಚ್ಚು ಮಹಿಳೆಯನ್ನು ಆಧಾತ್ಮಿಕ, ಪೂಜೆ ಹೆಸರಿನಲ್ಲಿ ಬಳಸಿಕೊಂಡ ಅಶೋಕ್ ಖಾರಟ್ ಇದೀಗ ಜೈಲಿನಲ್ಲಿದ್ದರೂ ತನ್ನ ವಿರುದ್ದ ಸಾಕ್ಷ್ಯ ಸಿಗದಂತೆ ಮಾಡುವ ಪ್ರಯತ್ನ ಮಾಡುತ್ತಿದ್ದಾರಾ ಅನ್ನೋ ಅನುಮಾನ ಹೆಚ್ಚಿಸಿದೆ. ಅಶೋಕ್ ಖಾರಟ್‌ನ ಆಪ್ತನಾಗಿದ್ದ ಜಿತೇಂದ್ರ ಶಿಲ್ಕೆ ಹಾಗೂ ಆತನ ಪತ್ನಿ ಅನುರಾಧ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಇವರ ಪುತ್ರ 14 ವರ್ಷದ ಸುಜಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಶೋಕ್ ಖಾರಟ್ ಆಪ್ತ 50 ವರ್ಷದ ಜಿತೇಂದ್ರ ಶಿಲ್ಕೆ, ಪತ್ನಿ 45 ವರ್ಷದ ಅನುರಾಧ ಹಾಗೂ ಪುತ್ರ ಸುಜಿತ್ ಕಾರಿನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿಯಾಗಿದೆ. ತಮ್ಮ ಪಾಡಿಗೆ ಹೋಗುತ್ತಿದ್ದ ಕಾರಿಗೆ ಬಂದು ಟ್ರಕ್ ಡಿಕ್ಕಿಯಾಗಿದೆ. ಅತೀ ವೇಗವಾಗಿ ಬಂದ ಟ್ರಕ್ ಡಿಕ್ಕಿಯಾಗಿ ಶಿಲ್ಕೆ ಹಾಗೂ ಅನುರಾಧ ಸ್ಥಳದಲ್ಲೇ ಮೃತಪಟ್ಟರೆ, ಪುತ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ.

ಛತ್ರಪತಿ ಸಂಭಾಜಿ ನಗರದಿಂದ ಶಿರಡಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಅರೆಸ್ಟ್ ಆಗಿರುವ ಅಶೋಕ್ ಗುರೂಜಿಯ ಟ್ರಸ್ಟ್‌ನಲ್ಲಿ ಉಪಾಧ್ಯಕ್ಷನಾಗಿದ್ದ ಶಿಲ್ಕೆ ದೇವಸ್ಥಾನ ಹಾಗೂ ಇತರ ಟ್ರಸ್ಟ್‌ಗಳ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಅಶೋಕ್ ಖಾರಟ್ ರಾಸಲೀಲೆ ಪ್ರಕರಣದಲ್ಲಿ ಶಿಲ್ಕೆ ಪಾತ್ರ ಇರಲಿಲ್ಲ. ಆದರೆ ಅಶೋಕ್ ಖಾರಟ್ ವಿರುದ್ಧ ಶಿಲ್ಕೆ ಸಾಕ್ಷ್ಯ ನುಡಿಯುವ ಸಾಧ್ಯತೆ ಇದೆ ಅನ್ನೋ ಆತಂಕ ಕಾಡಿತ್ತು. ಕಾರಣ ಟ್ರಸ್ಟ್‌ನಲ್ಲಿನ ಹಣ ವರ್ಗಾವಣೆ, ಹಣದ ವ್ಯವಹಾರಗಳ ಕುರಿತು ಅಕ್ರಮಕ್ಕೆ ಶಿಲ್ಕೆ ಅನುಮತಿ ನೀಡುತ್ತಿರಲಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಹಲವು ಈ ಬಾರಿ ಈ ರೀತಿಯ ಪ್ರಯತ್ನಗಳು ನಡೆದಿತ್ತು. ಹೀಗಾಗಿ ಈ ದಾಖಲೆ ಹಾಗೂ ಸಾಕ್ಷ್ಯಗಳು ತನಗೆ ಮತ್ತಷ್ಟು ಮುಳ್ಳಾಗುವ ಸಾಧ್ಯತೆಯಿಂದ ಉದ್ದೇಶಪೂರ್ವಕವಾಗಿ ಅಪಘಾತ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಪಘಾತ ಹಾಗೂ ಸೋವು ನೋವಿನ ಕುರಿತು ಎನ್‌ಸಿಪಿ(ಎಸ್‌ಪಿ) ಶಾಸಕ ರೋಹಿತ್ ಪವಾರ್ ಧ್ವನಿ ಎತ್ತಿದ್ದಾರೆ. ಶಿಲ್ಕೆ ಹಾಗೂ ಕುಟಂಬದ ಕಾರು ಅಪಘಾತ ಮಾಹಿತಿ ಆಘಾತ ತಂದಿದೆ. ನಿಧಾನವಾಗಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಿಲ್ಕೆ ಪುತ್ರ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದಿದ್ದಾರೆ. ಇದೇ ವೇಳೆ ಈ ಅಪಘಾತ ಅನುಮಾನ ಹುಟ್ಟಿಸುವಂತಿದೆ. ಈ ಅಪಘಾತದ ಹಿಂದೆ ಜೈಲು ಸೇರಿರುವ ಅಶೋಕ್ ಖಾರಟ್ ಕೈವಾಡವಿದೆಯಾ ಅನ್ನೋದು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಪಘಾತದ ಹಿಂದೆ ಷಡ್ಯಂತ್ರ

Source link

Leave a Reply

Your email address will not be published. Required fields are marked *