Headlines

ಬಿಸ್ನೆಸ್​ನಲ್ಲಿ ಭಾರೀ ಹೊಡೆತ ತಿಂದ ನಟಿ ದೀಪಿಕಾ ಪಡುಕೋಣೆ; ಕೋಟಿ ಕೋಟಿ ನಷ್ಟ

ಬಿಸ್ನೆಸ್​ನಲ್ಲಿ ಭಾರೀ ಹೊಡೆತ ತಿಂದ ನಟಿ ದೀಪಿಕಾ ಪಡುಕೋಣೆ; ಕೋಟಿ ಕೋಟಿ ನಷ್ಟ


ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಲವು ಸಿನಿಮಾಗಳು ಅವರು ಹೊರ ಬಂದಿರೋದು ಚರ್ಚೆಗೆ ಕಾರಣ. ಈ ಮಧ್ಯೆ ದೀಪಿಕಾ ಪಡುಕೋಣೆ (ದೀಪಿಕಾ ಪಡುಕೋಣೆ) ಅವರು ಬಿಸ್ನೆಸ್ ನಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅವರ ಒಡೆತನದ ಸ್ಕಿನ್ ಕೇರ್ ಕಂಪನಿ ನಷ್ಟದಲ್ಲಿದೆ. ಈ ಬಗ್ಗೆ ಪ್ರಸಾರ ವರದಿಯಾಗಿದೆ.

ದೀಪಿಕಾ ಪಡುಕೋಣೆ ಅವರು ’82°E’ ಹೆಸರಿನ ಬ್ರ್ಯಾಂಡ್ ನಟ. 2024ರಲ್ಲಿ ಕಂಪನಿ 21.2 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಅದು ಈಗ 14.7 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ವಿಶೇಷ ಎಂದರೆ ನಷ್ಟದಲ್ಲೂ ಇಳಿಕೆ ಕಂಡುಬಂದಿದೆ. 2024ರಲ್ಲಿ 23 ಕೋಟಿ ನಷ್ಟ ಆದರೆ ಈ ವರ್ಷ 12.3 ಕೋಟಿ ರೂಪಾಯಿ ನಷ್ಟ ಆಗಿದೆ.

2024ರಲ್ಲಿ 82°E ಕಂಪನಿ 47 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಈ ವರ್ಷ ಸಾಕಷ್ಟು ಕಾಸ್ಟ್ ಕಟಿಂಗ್ ಮಾಡಿದ್ದು, ಈ ಮೂಲಕ ಖರ್ಚನ್ನು 25 ಕೋಟಿಗೆ ಇಳಿಸಲಾಗಿದೆ. ಇದರಿಂದ ನಷ್ಟ ತಗ್ಗಿದೆ. 2024ರಲ್ಲಿ ಬ್ರ್ಯಾಂಡ್‌ಗೆ ಸಾಕಷ್ಟು ಮಾರ್ಕೆಟಿಂಗ್ ಮಾಡಲಾಗಿದೆ. ಇದನ್ನು 2025ರಲ್ಲಿ ಕಡಿಮೆ ಮಾಡಲಾಗಿದೆ.

ದೀಪಿಕಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಇದನ್ನು ಪ್ರಚಾರ ಮಾಡಿದರು. ಆದರೆ, ಬ್ರ್ಯಾಂಡ್ ನಷ್ಟ ಅನುಭವಿಸುವುದು ತಪ್ಪಿಲ್ಲ. 82°E ಬ್ರ್ಯಾಂಡ್ನ ಉತ್ಪನ್ನಗಳು ಸಾಕಷ್ಟು ದುಬಾರಿಯಾಗಿವೆ.ಈ ಸಂಸ್ಥೆಗೆ ಸಾಕಷ್ಟು ದೊಡ್ಡ ಸ್ಪರ್ಧೆ ಇದ್ದು,ಇದರಲ್ಲಿ ಗೆಲುವು ಕಾಣೋದು ಅಷ್ಟು ಸುಲಭದಲ್ಲಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿನಿಮಾದಿಂದ ಹೊರ ನಡೆದ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರು ದಿನಕ್ಕೆ 8 ಗಂಟೆ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ‘ಸ್ಪಿರಿಟ್’ ಸಿನಿಮಾದಿಂದ ಹೊರಕ್ಕೆ ಬಂದರು. ಜೊತೆಗೆ, ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಿಂದಲೂ ಅವರು ದೂರವಾಗಿದ್ದಾರೆ. ಇದು ಸಿನಿಮಾಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *