ನಟಿ ದೀಪಿಕಾ ಪಡುಕೋಣೆ ಅವರು ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರು ಹಾಕುವ ಷರತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ಇತ್ತೀಚೆಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ 2’ ಚಿತ್ರದಿಂದ ಹಾಗೂ ‘ಸ್ಪಿರಿಟ್’ ಚಿತ್ರದಿಂದ ಹೊರ ಹೋದರು. ಈಗ ಅವರಿಗೆ ಮತ್ತೊಂದು ಅವಕಾಶ ಕಳೆದು ಹೋಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ದೀಪಿಕಾ ಪಡುಕೋಣೆ ಅವರು ಸಿನಿಮಾದಲ್ಲಿ ನಟಿಸಲು ಸಾಧ್ಯವೇ ಇಲ್ಲ. ಅವರು ದಿನದಲ್ಲಿ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ‘ಕಲ್ಕಿ 2898 ಎಡಿ’ ಹಾಗೂ ‘ಸ್ಪಿರಿಟ್ ಚಿತ್ರದಿಂದ ಹೊರ ಹೋದರು. ಅವರಿಗೆ ಈ ಮಧ್ಯೆ ಒಂದು ಹಾಲಿವುಡ್ ಆಫರ್ ಕೂಡ ಕೈ ತಪ್ಪಿತ್ತು.
ಅವರಿಗೆ ಇಂಗ್ಲಿಷ್ ನ ಕಾಮಿಡಿ ಸೀರಿಸ್ ‘ವೈಟ್ ಲೋಟಸ್’ ಆಫರ್ ಬಂದಿತ್ತು. ಮಗು ಜನಿಸಿದ ಕೂಡಲೇ ಈ ಆಫರ್ ಬಂದಿತ್ತು. ಹೀಗಾಗಿ, ಅವರಿಗೆ ಆಡಿಷನ್‌ಗೆ ತೆರಳಲು ಸಾಧ್ಯವಾಗಿಲ್ಲ. ಅಮೆರಿಕದ ಪ್ರಸಿದ್ಧ ಬ್ಲ್ಯಾಕ್ ಕಾಮಿಡಿ ಸರಣಿ ಇದಾಗಿದೆ. ಮೈಕ್ ವೈಟ್ ಇದನ್ನು ನಿರ್ದೇಶಿಸುತ್ತಿದೆ.
ದೀಪಿಕಾ ಪಡುಕೋಣೆ ಮಗು ಜನಿಸುವುದಕ್ಕೂ ಯಾವುದೇ ಷರತ್ತುಗಳಿಲ್ಲದೆ ಕೆಲಸ ಮಾಡುತ್ತಾ ಸಾಗುತ್ತಲೇ ಇರುತ್ತಾರೆ. ಅವರು ಈಗ ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾಗೆ ನಾಯಕಿ ಆಗಿದ್ದಾರೆ. ಪ್ಲ್ಯಾನ್ ಪ್ರಕಾರವೇ ಎಲ್ಲವೂ ನಡೆದರೆ ದೀಪಿಕಾ ಅವರು ಈ ಚಿತ್ರದ ಮೂಲಕ ದೊಡ್ಡ ಕಂಬ್ಯಾಕ್ ಮಾಡಲಿದ್ದಾರೆ. ಅವರು ದೊಡ್ಡ ಬ್ರೇಕ್ ತೆಗದುಕೊಂಡಿದ್ದು, ಅವರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಇದನ್ನೂ ಓದಿ: ಪೌರಾಣಿಕ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ನಾಯಕ ಯಾರು?
ಎಲ್ಲ ನಟಿಯರ ಕರಿಯರ್ ನಲ್ಲೂ ಏರಿಳಿತ ಸಾಮಾನ್ಯ. ಅದೇ ರೀತಿ ದೀಪಿಕಾ ಪಡುಕೋಣೆ ಜೀವನದಲ್ಲೂ ಇದೆ ಎಂದು ಅನೇಕರು ಮಾತನಾಡುತ್ತಿದ್ದಾರೆ. ಅವರು ಪ್ರಸ್ತುತ ಮಗುವಿನಲ್ಲಿ ಬ್ಯೂಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.