Headlines

ದೆಹಲಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ಜಾಗೃತಿ ಮೂಡಿಸಲು ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ

ದೆಹಲಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ಜಾಗೃತಿ ಮೂಡಿಸಲು ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ


ದೆಹಲಿ,ಡಿ.15: ದೆಹಲಿಯಲ್ಲಿ ವಾಯು ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಟಿಡಿಪಿ ಸಂಸದ ಅಪ್ಪಲನಾಯ್ಡು ಕಲ್ಲಿಸೆಟ್ಟಿ , ಮಾಸ್ಕ್ ಧರಿಸಿಕೊಂಡು ಸಂಸತ್ತಿಗೆ ಸೈಕಲ್ ನಲ್ಲಿ ಬಂದಿದ್ದಾರೆ. ದೆಹಲಿಯಲ್ಲಿ ಕಳಪೆ ಗಾಳಿಯ ಗುಣಮಟ್ಟದಿಂದ ಆರೋಗ್ಯದ ಪರಿಣಾಮವನ್ನು ಎದುರಿಸುವ ಕಾರಣ, ವಾಹನಗಳ ಬದಲಿಗೆ ಸೈಕಲ್ ಬಳಸಿ ಎಂದು ಮನವಿ ಮಾಡಲಾಗಿದೆ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಇದರಿಂದ ಸಾರ್ವಜನಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಮೂಲಕ ಈ ಜನರು ಹಾಗೂ ನಮ್ಮ ಸಂಸದರು, ರಾಜಕಾರಣಿಗಳನ್ನು ಎಚ್ಚರಿಸಿದ್ದಾರೆ. ವಾಹನ ಬಳಸುವ ಬದಲು ಸಂಸತ್ತಿಗೆ ಸೈಕಲ್ ನಲ್ಲಿ ಬನ್ನಿ, ಹಾಗೂ ವಾತಾವರಣದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವೆ ಎಂದು ಹೇಳಿದ್ದಾರೆ. ಇನ್ನು ಬೆಂಗಳೂರಿನಲ್ಲೂ ಕೂಡ ಒಂದು ವಾರದಿಂದ ಗಾಳಿಯ ಗುಣಮಟ್ಟದಲ್ಲಿ ವ್ಯಾತ್ಯಾಸ ಕಂಡು ಬಂದಿದೆ. ಶನಿವಾರದಂದು ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 206ಕ್ಕೆ ಇಳಿಕೆಯಾಗಿದೆ. ಇಂದು ಬೆಳಿಗ್ಗೆ ಗಾಳಿಯ ಗುಣಮಟ್ಟ 165 ಇತ್ತು. ಇದೀಗ 105ಕ್ಕೆ ಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *