Headlines

ದೆಹಲಿ ಸ್ಫೋಟ: ಐ20 ಕಾರಿನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು, ಕೆಂಪುಕೋಟೆ ಬಳಿ ಬಂದಿದ್ಹೇಗೆ?

ದೆಹಲಿ ಸ್ಫೋಟ: ಐ20 ಕಾರಿನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು, ಕೆಂಪುಕೋಟೆ ಬಳಿ ಬಂದಿದ್ಹೇಗೆ?


ನವಂಬರ್, (ನವೆಂಬರ್ 11): ರಾಷ್ಟ್ರರಾಜಧಾನಿ ನವೀನ ಕೆಂಪು ಕೋಟೆ ಬಳಿ ಐ20 ಕಾರು ಸ್ಫೋಟಗೊಂಡಿದೆ, (ದೆಹಲಿ ಕಾರ್ ಬ್ಲಾಸ್ಟ್) ಘಟನೆಯಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಯಾಗಿದೆ. ಇನ್ನು ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿತು? ಕಾರಿನ ಹಿಂದುಗಡೆ ಅಳವಡಿಸಿದ್ದ ಸಿಎನ್‌ಜಿಯಿಂದ ಸ್ಫೋಟ ಸಂಭವಿಸಿತ್ತಾ? ಹೀಗೆ ನಾನಾ ರೀತಿಯ ವರದಿಗಳು ಪ್ರಕಟವಾದವು. ಆದರೆ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಯಾವ ಕಾರಿನಲ್ಲಿ ಈ ಕೃತ್ಯ ನಡೆದಿದೆ ಎನ್ನುವುದನ್ನು ಪತ್ತೆ ಹಚ್ಚಲಾಗಿದೆ.

ಸ್ಫೋಟ ನಡೆದ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು (ದೆಹಲಿ ಪೊಲೀಸ್) ಮೊದಲು ರಸ್ತೆಯಲ್ಲಿರುವ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಐ20 (i20)ನಿಂದ ಈ ಕೃತ್ಯ ನಡೆದಿದೆ ಎಂದು ಗೊತ್ತಾಗಿದೆ. ಐ20 ಕಾರಿನಿಂದ ಸ್ಫೋಟ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆ ಇಡೀ ದಿನ ಈ ಕಾರು ಎಲ್ಲೆಲ್ಲಿ ಕಾಣಿಸಿಕೊಂಡಿದೆ. ದೆಹಲಿಗೆ ಎಲ್ಲಿಂದ ಪ್ರವೇಶಿಸಿದೆ ಎಂಬ ಮಾಹಿತಿಯನ್ನು ಕಲೆಹಾಕಲು ಮತ್ತಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದೆ. ಆಗ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ದೆಹಲಿ ಸ್ಫೋಟದ ಕುರಿತು ಪ್ರಧಾನಿ ಮೋದಿ: ದೆಹಲಿ ನಿಗೂಢ ಸ್ಫೋಟ, ಸಂಚುಕೋರರನ್ನು ಸುಮ್ಮನೆ ಬಿಡುವುದಿಲ್ಲ, ಪ್ರಧಾನಿ ಮೋದಿ ಪ್ರತಿಜ್ಞೆ

ಸ್ಫೋಟಗೊಂಡ ದಿನ ಸೋಮವಾರ ಅಂದರೆ(ನವೆಂಬರ್ 10) ಬೆಳ್ಳಗ್ಗೆಯಿಂದ ಸಂಜೆಯವರಿಗೆ ವಾಹನ ಸಂಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸುಮಾರು 11 ಗಂಟೆಗಳ ಹಿಂದೆ ಫರಿದಾಬಾದ್‌ನಿಂದ ದೆಹಲಿಯ ಕೆಂಪು ಕೋಟೆಗೆ ಹೊರಟು ದಾರಿಯ ಅನೇಕ ಸ್ಥಳಗಳನ್ನು ಪರಿಶೀಲಿಸಲಾಗಿದೆ.

ಕಾರು ಎಲ್ಲಿಂದ ಬಂತು?

  • ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ 7:30 ಗಂಟೆಗೆ ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಯ ಹೊರಗೆ ಕಾರು ಬಂದಿದೆ.
  • ನಂತರ ಬೆಳಿಗ್ಗೆ 8:13ಕ್ಕೆ ಕಾರು ಬದರ್ಪುರ್ ಟೋಲ್ ದಾಟಿ ದೆಹಲಿಯನ್ನು ಪ್ರವೇಶಿಸಿದೆ.
  • ಬೆಳಿಗ್ಗೆ 8:20ಕ್ಕೆ ಓಖ್ ಕೈಗಾರಿಕಾ ಪ್ರದೇಶದ ಬಳಿಯ ಪೆಟ್ರೋಲ್ ಪಂಪ್ ಬಳಿ ಕಾರು ಕಾಣಿಸಿಕೊಂಡಿತು
  • ಮಧ್ಯಾಹ್ನ 3:19 ಕ್ಕೆ ಕಾರು ಕೆಂಪು ಕೋಟೆ ಸಂಕೀರ್ಣದ ಬಳಿಯ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಲು ಮೂರು ಗಂಟೆಗಳ ಕಾಲ ಅಲ್ಲಿಯೇ ನಿಂತಿತ್ತು.
  • ಸಂಜೆ 6:22 ಕ್ಕೆ, ಕಾರು ಪಾರ್ಕಿಂಗ್ ಸ್ಥಳದಿಂದ ಹೊರಬಂದು ಕೆಂಪು ಕೋಟೆಯ ಕಡೆಗೆ ಹೋಗಲಾಯಿತು.
  • ಕೇವಲ 24 ನಿಮಿಷಗಳ ನಂತರ ಸಂಜೆ 6:52 ಗಂಟೆಗೆ ಕಾರು ಚಲಿಸುತ್ತಿರುವಾಗ ಭಾರಿ ಸ್ಫೋಟ ಸಂಭವಿಸಿದೆ.

8 ಶಂಕಿತರ ಬಂಧನ

ಇನ್ನು ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಶಂಕಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಮುಜಮ್ಮಿಲ್, ಇತರೆ ವೈದ್ಯರು ಸೇರಿದಂತೆ 8 ಶಂಕಿತರನ್ನ ಬಂಧಿಸಿದ್ದಾರೆ. ಜೈಶ್ ಎ ಮೊಹಮ್ಮದ್, ಅನ್ಸರ್ ಘಜ್ವಲ್ ಅವರೊಂದಿಗೆ ಸಂಪರ್ಕ ಹೊಂದಿರುವ ಅನುಮಾನಗಳು ಕಂಡುಬಂದಿದ್ದು, ಈ ಬಗ್ಗೆ ತನಿಖೆ ಚುರುಕುಗೊಂಡಿದೆ.

ಮೂರು ಗಂಟೆಗಳ ಕಾಲ ಸುನೆಹ್ರಿ ಮಸೀದಿ ಪಾರ್ಕಿಂಗ್ ಜಾಗದಲ್ಲಿ ಆತ ಕಾರನ್ನು ಪಾರ್ಕ್ ಮಾಡಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆ. ಉದ್ದೇಶಪೂರ್ವಕವಾಗಿಯೇ ಕಾರನ್ನು ಪಾರ್ಕ್ ಮಾಡಿದ್ದಾನೋ ಅಥವಾ ಬೇರೆ ಕಡೆ ಸ್ಫೋಟ ಮಾಡಲು ಆ ಜಾಗದಲ್ಲಿ ಕಾರು ನಿಲ್ಲಿಸಿದ್ದಾನೋ? ಅಥವಾ ಸ್ನೇಹಿತರು ಸಿಕ್ಕಿಬಿದ್ದಿದ್ದಕ್ಕೆ ಸಿಟ್ಟಾಗಿಯೇ ಸ್ಪೋಟ ಮಾಡಲು ತೆಗೆದುಕೊಂಡ ನಿರ್ಧಾರ ಈಗ ತನಿಖೆಯಿಂದ ಬೆಳಕಿಗೆ ಬರಬೇಕಿದೆ.



Source link

Leave a Reply

Your email address will not be published. Required fields are marked *