ನವದೆಹಲಿ, ನವೆಂಬರ್ 14: ದೆಹಲಿಯಲ್ಲಿ ನವೆಂಬರ್ 10 ರಂದು ನಿಗೂಢ ಸ್ಫೋಟವೊಂದು ಸಂಭವಿಸಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ಹಿಂದಿದ್ದ ಡಾ. ಉಮರ್ ನಬಿ ಮನೆಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಯಿತು. ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಆತನ ಮನೆ ಇತ್ತು. ಈ ಉಮರ್ ಮೊನ್ನೆ ತಾನಿದ್ದ ಕಾರಣವನ್ನೇ ಸ್ಫೋಟಿಸಿಕೊಂಡಿದ್ದ, ಆ ಸ್ಫೋಟದಲ್ಲಿ ತಾನೂ ಸಾವನ್ನಪ್ಪಿದ್ದ. ಡಿಎನ್ಎಯಿಂದ ಅದು ಆತನಲ್ಲೇ ಮೃತದೇಹ ಎಂಬುದು ಕೂಡ ದೃಢಪಟ್ಟಿದೆ. ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿದೆ 10 ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಸಾವನ್ನಪ್ಪಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ