Operation Crystal Fortress: 262 ಕೋಟಿ ರೂ. ಮೌಲ್ಯದ ಮೆಥಾಂಫೆಟಮೈನ್ ವಶಪಡಿಸಿಕೊಂಡ NCB, ದೆಹಲಿ ಪೊಲೀಸರು

Operation Crystal Fortress: 262 ಕೋಟಿ ರೂ. ಮೌಲ್ಯದ ಮೆಥಾಂಫೆಟಮೈನ್ ವಶಪಡಿಸಿಕೊಂಡ NCB, ದೆಹಲಿ ಪೊಲೀಸರು


ದೆಹಲಿ, ನ.24: ರಾಷ್ಟ್ರ ರಾಜಧಾನಿಯಲ್ಲಿ ಅತಿದೊಡ್ಡ ಮಾದಕ ವಸ್ತುಗಳು (ದೆಹಲಿ ಡ್ರಗ್ ಬಸ್ಟ್) NCB (ಮಾದಕ ದ್ರವ್ಯ ಬ್ಯೂರೋ) ಮತ್ತು ದೆಹಲಿ ನಿಯಂತ್ರಣ ಜಂಟಿ ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ 262 ಕೋಟಿ ರೂ. ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ (ಮೆಥ್ / ಐಸ್) ಜಪ್ತಿ ಮಾಡಲ್ಪಟ್ಟಿದೆ. NCB ಹಾಗೂ ದೆಹಲಿ ಪೊಲೀಸರು, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ದೆಹಲಿಯ ತೋಟದ ಮನೆಯೊಂದಕ್ಕೆ ಕೂಡ ದಾಳಿಯನ್ನು ಮಾಡಲಾಗಿತ್ತು. ಈ ವೇಳೆ ಭಾರೀ ಮೌಲ್ಯದ ಔಷಧಗಳು ಸಿಕ್ಕಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾಲ್ಯಾಂಡ್ ಮೂಲದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಇನ್ನು ಈ ಕಾರ್ಯಚರಣೆಯಲ್ಲಿ ಉತ್ತರ ಪ್ರದೇಶದ ಅಮರೋಹಾದ ಮಂಗ್ರೌಲಿ ಗ್ರಾಮದ ನೋಯ್ಡಾ ಸೆಕ್ಟರ್ -5ರ ನಿವಾಸಿ 25 ವರ್ಷದ ಶೇನ್ ವಾರಿಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ, ಇದೀಗ ಈ ಕಾರ್ಯಚರಣೆ ವೇಗ ಸಿಕ್ಕಿದೆ. ಮಾರಾಟ ವ್ಯವಸ್ಥಾಪಕ ಎಂದು ವಾರಿಸ್, ನಕಲಿ ಸಿಮ್ ಕಾರ್ಡ್‌ಗಳು, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾದ, ಇದರ ಜೊತೆಗೆ ವಿದೇಶಿ ಮೂಲದ ಕಿಂಗ್‌ಪಿನ್‌ನೊಂದಿಗೆ ಸಂಪರ್ಕವನ್ನು ಕೂಡ ಹೊಂದಿರುವುದಾಗಿ ಹೇಳಲಾಗಿದೆ. ನ.20ರಂದು ಶೇನ್ ವಾರಿಸ್ ಅವರನ್ನು ಬಂಧಿಸಲಾಗಿದೆ. ವೇಳೆ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ ವಿಚಾರಣೆ.

ಇನ್ನು ಪೋರ್ಟರ್ ಡೆಲಿವರಿ ರೈಡರ್ ಮೂಲಕ ಎಸ್ಟರ್ ಕಿನಿಮಿ ಎಂಬ ಮಹಿಳೆ ಈ ಮಾದಕ ವಸ್ತುಗಳನ್ನು ಸಾಗಿಸಿದ್ದಾಳೆ ಎಂದು ಹೇಳಲಾಗಿದೆ. ಈ ಮಹಿಳೆಗೆ ವಾರಿಸ್ ತನ್ನ ಸಂಪರ್ಕ ಸಂಖ್ಯೆಗಳು, ವಿಳಾಸ ಮತ್ತು ಇತರ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಬ್ಬರು ಸೇರಿ ವಿದೇಶಕ್ಕೆ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಛತ್ತರ್ಪುರದ ದಾಳಿಯಲ್ಲಿ 328 ಕೆಜಿ ಮೆಥ್ ಪತ್ತೆ:

ವಾರಿಸ್ ನೀಡಿದ ಮಾಹಿತಿ ನೀಡಿದ ಎನ್‌ಸಿಬಿ ತಂಡ ನವೆಂಬರ್ 20 ರ ರಾತ್ರಿ ಛತ್ತರ್‌ಪುರ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್ ವೊಂದರ ಮೇಲೆ ದಾಳಿ ನಡೆಸಿತು. ಈ ವೇಳೆ 328.54 ಕೆಜಿ ಉತ್ತಮ ಗುಣಮಟ್ಟದ ಮೆಥಾಂಫೆಟಮೈನ್ ಇದೆ. ವಾರಿಸ್ ವಿದೇಶಕ್ಕೆ ಈ ಮಾದಕ ವಸ್ತುಗಳನ್ನು ಸಾಗಿಸುವ ಜಾಲದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಹೇಳಲಾಗಿದೆ. ಯಾವೆಲ್ಲ ದೇಶಕ್ಕೆ ಈ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಹಾಗೂ ಅದಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೀಗ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್

ಇನ್ನು ಈ ಕಾರ್ಯಚರಣೆಗೆ ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್ ಎಂದು ಹೆಸರಿಡಲಾಗಿದೆ. ಆಪರೇಷನ್ ಕ್ರಿಸ್ಟಲ್ ಫೋರ್ಟ್ರೆಸ್ ಮೂಲಕ ಮಾದಕ ವಸ್ತುಗಳ ಅಕ್ರಮ ಸಾಗಣೆ, ಅದರ ಉತ್ಪಾದನೆಯನ್ನು ತಡೆಯಲು ದೇಶಾದ್ಯಂತ ಕಾರ್ಯಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎನ್‌ಸಿಬಿ ಪ್ರಕಾರ ಈ ಜಾಲಕ್ಕಾಗಿ, ಸುರಕ್ಷಿತ ಸ್ಥಳ ಲೇಯರ್ಡ್ ಹ್ಯಾಂಡ್ಲರ್‌ಗಳು, ಕೊರಿಯರ್‌ಗಳು ಮತ್ತು ದೊಡ್ಡ ದೊಡ್ಡ ಮನೆಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ದೆಹಲಿ ಪ್ರತಿಭಟನೆಯಲ್ಲಿ ಮಾವೋವಾದಿ ನಾಯಕ ಮಾದ್ವಿ ಹಿಡ್ಮಾ ಪರ ಪೋಸ್ಟರ್

ಈ ಜಾಲವನ್ನು ಭೇದಿಸದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್‌ಸಿಬಿ ಮತ್ತು ದೆಹಲಿ ಪೊಲೀಸ್ ತಂಡವನ್ನು ಅಭಿನಂದಿಸಿದರು. ಮಾದಕ ವಸ್ತುಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರವು ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ದೆಹಲಿಯಲ್ಲಿ 262 ಕೋಟಿ ರೂ. ಮೌಲ್ಯದ 328 ಕೆಜಿ ಮೆಥಾಮ್‌ಟಮೈನ್ ಅನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸುವ ಮೂಲಕ ಈ ಕಾರ್ಯಚರಣೆಗೆ ವೇಗ ನೀಡಲಾಗಿದೆ. ಪ್ರಧಾನಿ ಮೋದಿ ಅವರ ಮಾದಕ ವಸ್ತು ಭಾರತ ಎಂಬ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಈ ನಾಗರಿಕರು ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಮಾಹಿತಿ ಮಾನಸ್ ರಾಷ್ಟ್ರೀಯ ಮಾದಕ ದ್ರವ್ಯ ಸಹಾಯವಾಣಿ – 1933 ರಲ್ಲಿ ವರದಿ ಮಾಡುವಂತೆ ಎನ್ಸಿಬಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *