Video: ದೆಹಲಿಗಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ

Video: ದೆಹಲಿಗಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ


ಬೆಂಗಳೂರು, ಡಿಸೆಂಬರ್ 28: ರಾಷ್ಟ್ರ ರಾಜಧಾನಿ ಯಾವುದೆಂದು ಕೇಳಿದ್ರೆ ಮೊದಲು ನೆನಪಿಗೆ ಬರೋದೇ ದೆಹಲಿ. ಆದರೆ ದೆಹಲಿಯ ಯುವತಿಯು (ಯುವತಿ) ಬೆಂಗಳೂರನ್ನು (ಬೆಂಗಳೂರು) ದೇಶದ ರಾಜಧಾನಿಯಾಗಿ ಮಾಡಬೇಕು ಎಂದು ಹೇಳಿದ್ದಾಳೆ. ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಉತ್ತಮ ಗುಣಮಟ್ಟದ ಜೀವನ, ವಾಯುಗುಣಮಟ್ಟ, ಸುರಕ್ಷತೆ ಹಾಗೂ ರಸ್ತೆ ಈ ಎಲ್ಲವನ್ನು ಹತ್ತಿರದಿಂದ ಗಮನಿಸಿ ಈ ಮಾತನ್ನು ಹೇಳಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಮೃದ್ಧಿ ಮಖಿಜಾ (simridhimakhija) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದೆಹಲಿ ಮೂಲದ ಯುವತಿಯೊಬ್ಬಳು ಬೆಂಗಳೂರಿನ ಜೀವನದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು. ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಂತೆ ಹೇಳಿಕೊಂಡಿದ್ದಾಳೆ. ತನ್ನ ಹೆತ್ತವರನ್ನು ಕಾಣಲು ದೆಹಲಿಗೆ ಹೋದ ನಂತರ ತನ್ನ ಈ ಆಲೋಚನೆಗಳು ಮತ್ತಷ್ಟು ಬಲಗೊಂಡವು. ದೆಹಲಿಯ ಗಾಳಿಯು ಕೆಟ್ಟದಾಗಿರುವಂತೆ ಅನಿಸಿತು. ಉಸಿರಾಟವಾಯಿತು.ಅಕ್ಷರಶಃ ಗ್ಯಾಸ್ ಚೇಂಬರ್‌ನಲ್ಲಿ ಕಷ್ಟವಾಯಿತು. ಆದರೆ ಬೆಂಗಳೂರಿನಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ ಎಂದಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ನಗರವು ರಾತ್ರಿ ಕೂಡ ಮಹಿಳೆಯರಿಗೆ ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗ ನನಗೆ ಒಂದೊಳ್ಳೆ ಅನುಭವವಾಯಿತು. ದೆಹಲಿಯಲ್ಲಿ ಇಂತಹ ಅನುಭವವಾಗಲ್ಲ. ಬೆಂಗಳೂರಿಗೆ ಹೆಚ್ಚು ಆದ್ಯತೆ ಕೊಡಲು ಇದು ಕೂಡ ಪ್ರಮುಖವಾಗಿದೆ ಎಂದು ಹೇಳಿದ್ದಾಳೆ.

ದೆಹಲಿಗಿಂತ ಬೆಂಗಳೂರಿನ ಮೂಲಸೌಕರ್ಯ, ನಗರ ವ್ಯವಸ್ಥೆ ಮತ್ತು ರಸ್ತೆಗಳು ಉತ್ತಮವಾಗಿವೆ. ಪಾದಚಾರಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಭಾರತಕ್ಕೆ ಬರುವ ವ್ಯವಸ್ಥೆ ಏಕೆ ಕಲುಷಿತಗೊಂಡ ದೆಹಲಿಗೆ ಬರಬೇಕು?. ಬೆಂಗಳೂರಿಗೆ ಬಂದ ಉತ್ತಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಹಬ್ಬದ ದಿನ ಬೆಂಗಳೂರಿಗೆ ಬರುವಾಗ ಖಾಲಿ, ಆದರೆ ಹೊರಗೆ ಹೋಗುವಾಗ ಹೇಗಿರುತ್ತದೆ ನೋಡಿ?

ಈ ವಿಡಿಯೋ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ನೀವು ಹೇಳುವುದನ್ನು ನಾವು ಒಪ್ಪುತ್ತೇವೆ ಎಂದರೆ, ಮತ್ತೊಬ್ಬರು ನಾನು ಬೆಂಗಳೂರಿಗ. ಈ ಯುವತಿ ಹೇಳುವಂತೆ ಬೆಂಗಳೂರು ಅಷ್ಟೇನು ಚೆನ್ನಾಗಿಲ್ಲ. ನೀವು ಹೈದರಾಬಾದ್, ಚೆನ್ನೈ, ಪುಣೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದರು. ಇತರರು, ಪ್ರಾಮಾಣಿಕ ಅಭಿಪ್ರಾಯ ಹೇಳಿದ್ದೀರಾ, ನೀವು ಗಮನಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:07 pm, ಭಾನುವಾರ, 28 ಡಿಸೆಂಬರ್ 25





Source link

Leave a Reply

Your email address will not be published. Required fields are marked *