ಇಂಡಿಗೋ ಎಫೆಕ್ಟ್​​: ಏರ್​ಲೈನ್ಸ್​ಗಳಿಂದ ಪ್ರಯಾಣಿಕರ ಸುಲಿಗೆಗೆ ದೆಹಲಿ ಹೈಕೋರ್ಟ್​​ ಕಿಡಿ; ಕೇಂದ್ರಕ್ಕೆ ಚಾಟಿ

ಇಂಡಿಗೋ ಎಫೆಕ್ಟ್​​: ಏರ್​ಲೈನ್ಸ್​ಗಳಿಂದ ಪ್ರಯಾಣಿಕರ ಸುಲಿಗೆಗೆ ದೆಹಲಿ ಹೈಕೋರ್ಟ್​​ ಕಿಡಿ; ಕೇಂದ್ರಕ್ಕೆ ಚಾಟಿ


ದೆಹಲಿ, ಡಿಸೆಂಬರ್ 10: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆ ಕೇಂದ್ರ ಸರ್ಕಾರವನ್ನು ದೆಹಲಿ ಅಧಿಕ ತರಾಟೆಗೆ ತೆಗೆದುಕೊಂಡಿದೆ. ವಿಮಾನ ಪ್ರಯಾಣ ದರ 40 ಸಾವಿರ ಆಗಲು ಹೇಗೆ ಸಾಧ್ಯ? ಅದನ್ನು ತಡೆಯಲು ಯಾಕೆ ಆಗಲಿಲ್ಲ ಎಂಬ ಪ್ರಶ್ನೆ ಮಾಡಿರುವ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರಿದ್ದ ಪೀಠ, ಪರಿಸ್ಥಿತಿಯನ್ನ ಆತಂಕಕಾರಿ ಎಂದಿದೆ.

ಬಿಕ್ಕಟ್ಟು ಸಂದರ್ಭದಲ್ಲಿ ಇತರ ವಿಮಾನಯಾನ ಸಂಸ್ಥೆಗಳಿಗೆ ಲಾಭ ಪಡೆಯಲು ಹೇಗೆ ಅನುಮತಿಸಲಾಗಿದೆ? ಅದು 35-40 ಸಾವಿರ ಹಣ ಕೊಟ್ಟು ಹೇಗೆ ಹೋಗಲು ಸಾಧ್ಯ? ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಿಟ್ಟಿದ್ದೀರಿ. ಇಂತಹ ಪರಿಸ್ಥಿತಿಯು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಎಂದು ಕೇಂದ್ರದ ನಡೆ ಬಗ್ಗೆ ದೆಹಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಇಂಡಿಗೋ ಹಾರಾಟ ವ್ಯತ್ಯಯ; ಕೆಂಪೇಗೌಡ ಏರ್‌ಪೋರ್ಟ್ ಆವರಣದ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರೂ. ನಷ್ಟ

ಇಂಡಿಗೋ ವಿಮಾನಗಳು ಹಾರಾಟ ವ್ಯತ್ಯಯದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿರುವ ನಡುವೆ ಉಳಿದ ವಿಮಾನಯಾನ ಸಂಸ್ಥೆಗಳು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿವೆ. ಟಿಕೆಟ್ ದರವನ್ನು ಮನಬಂದಂತೆ ಏರಿದ ಪರಿಣಾಮ ದುಪ್ಪಟ್ಟು ಹಣ ಕೊಟ್ಟು ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿತ್ತು. ಬಸ್‌ಗಳ ದರವೂ ಗಗನಮುಖಿಯಾದ ಕಾರಣ ಪ್ರಯಾಣಿಕರು ಈ ಬಗ್ಗೆ ಕಿಡಿ ಕಾರಿದ್ದರು. ಇದೆ ವಿಚಾರವಾಗಿ ಈಗ ದೆಹಲಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇಂಡಿಗೋ ವಿಮಾನಗಳ ಹಾರಾಟದಲ್ಲಿ ಚೇತರಿಕೆ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ಇಂಡಿಗೋ ಏರ್‌ಲೈನ್ಸ್ ವಿಮಾನಗಳ ಸಂಚಾರದಲ್ಲಿ ಯಶಸ್ವಿಯಾಗಿದೆ. ಇಂದು 58 ವಿಮಾನಗಳ ಹಾರಾಟ ಮಾತ್ರ ಕ್ಯಾನ್ಸಲ್ ಆಗಿವೆ. ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ 26 ವಿಮಾನಗಳು ಮತ್ತು ಆಗಮಿಸಬೇಕಿದ್ದ 32 ಇಂಡಿಗೋ ಫ್ಲೈಟ್ಸ್ ರದ್ದಾಗಿವೆ. ನಿನ್ನೆ ಒಟ್ಟು 121 ಇಂಡಿಗೋ ವಿಮಾನಗಳು ಹಾರಾಟ ಕ್ಯಾನ್ಸಲ್ ಆಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 2:00 pm, ಬುಧವಾರ, 10 ಡಿಸೆಂಬರ್ 25



Source link

Leave a Reply

Your email address will not be published. Required fields are marked *