14

Image Credit : Getty
ಪಾತಾಳಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ
ನವದೆಹಲಿ: ಇಲ್ಲಿನ ವಾಯುಗುಣಮಟ್ಟ (ಎಕ್ಯುಐ) ಭಾನುವಾರ ಮತ್ತಷ್ಟು ಪಾತಾಳಕ್ಕೆ ಕುಸಿದಿದ್ದು, ಭಾನುವಾರ ಸರಾಸರಿ ವಾಯುಗುಣಮಟ್ಟ ಸೂಚ್ಯಂಕವು 459ಕ್ಕೆ ಕುಸಿದಿದೆ. ದಿಲ್ಲಿಯ ವಿವಿಧ ಪ್ರದೇಶಗಳ ಪೈಕಿ ಬವಾನಾ ಎಂಬಲ್ಲಿ 497ಕ್ಕೆ ಕುಸಿತ ಕಂಡಿದೆ.
24
Image Credit : Getty
ಗೋಚರತೆ ಬೆಳಗ್ಗೆ 100 ಮೀ.ಗೆ ಕುಸಿತ
ಎಕ್ಯುಐ 400ಕ್ಕಿಂತ ಹೆಚ್ಚು ದಾಖಲಾದರೆ ‘ಅತಿ ಗಂಭೀರ’ ಎಂದು ಪರಿಗಣಿಸಲಾಗುತ್ತದೆ ಹಾಗೂ ಒಬ್ಬ ವ್ಯಕ್ತಿ ದಿನಕ್ಕೆ 23 ಸಿಗರೇಟು ಸೇದುವುದಕ್ಕೆ ಸಮನಾಗಿರುತ್ತದೆ.
ಹೊಗೆ ಮಿಶ್ರಿತ ವಾತಾವರಣದಿಂದ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಸರಾಗವಾಗಿ ಉಸಿರಾಡುವುದಕ್ಕೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಗೋಚರತೆ ಬೆಳಗ್ಗೆ 100 ಮೀ.ಗೆ ಕುಸಿದ ಕಾರಣ ದಿಲ್ಲಿ ಸುತ್ತಲಿನ ಹರ್ಯಾಣ ಹಾಗೂ ಉತ್ತರ ಪ್ರದೇಶದ ಕೆಲವೆಡೆ ವಾಹನ ಅಪಘಾತ ಸಂಭವಿಸಿವೆ.
34
Image Credit : Asianet News
ನಿರ್ಬಂಧಗಳು ಜಾರಿಯಲ್ಲಿ
ಈಗಾಗಲೇ ದೆಹಲಿಯಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಿದ್ದು, ಶಾಲೆಗಳಿಗೆ ಹೈಬ್ರಿಡ್ ಪದ್ಧತಿಯಲ್ಲಿ ತರಗತಿಗಳನ್ನು ನಡೆಸಲು ಸೂಚನೆ ಹೊರಡಿಸಲಾಗಿದೆ. ಅನಗತ್ಯ ಕಟ್ಟಡ ಕಾಮಗಾರಿ, ಗಣಿಗಾರಿಕೆ, ಕಲ್ಲು ಕ್ವಾರಿ, ಡೀಸೆಲ್ ವಾಹನಗಳ ಚಾಲನೆಯನ್ನು ನಗರದಲ್ಲಿ ನಿಷೇಧಿಸಲಾಗಿದೆ.
44
Image Credit : Social Media
ಬವಾನಾದಲ್ಲಿ ಅತ್ಯಂತ ಕನಿಷ್ಠ
ದೆಹಲಿಯ ಒಳಗಿರುವ ಬವಾನಾದಲ್ಲಿ ಭಾನುವಾರ ಬೆಳಗ್ಗೆ 7 ಗಂಟೆ ಹೊತ್ತಿಗೆ ಗಾಳಿ ಗುಣಮಟ್ಟ ಸೂಚ್ಯಂಕವು 497ಕ್ಕೆ ಕುಸಿದು ಅತ್ಯಂತ ಗಂಭೀರ ಹಂತಕ್ಕೆ ತಲುಪಿತ್ತು. ಅದೇ ರೀತಿ ನರೆಲಾ ಎಂಬಲ್ಲಿ 492, ಒಕ್ಲಾ 2ನೇ ಹಂತದಲ್ಲಿ 474 ದಾಖಲಾಗಿತ್ತು. ಇವೆಲ್ಲವೂ ಅತ್ಯಂತ ಗಂಭೀರ ಹಂತದ್ದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ