ಹೊಸದಿಲ್ಲಿ, ನವೆಂಬರ್ 30: ಮೈಮೇಲೆ ಇತ್ತೀಚೆಗೆ ಇಲ್ಲದವರಂತೆ ಕಾರು ಚಾಲನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿದೆ, ಅಪಘಾತಅಪಘಾತ) ಪ್ರಕರಣಗಳು ಕೂಡ ಏರಿಕೆಯಾಗಿದೆ. ದೆಹಲಿಯ ವಸಂತ್ ಕುಂಜ್ ಬಳಿ ಫುಟ್ ಪಾತ್ ಮೇಲೆ ಮಲಗಿದ್ದ ಮೂವರು ಮೇಲೆ ಬಿಎಂಡಬ್ಲ್ಯೂ ಕಾರು ಹರಿದಿರುವ ಘಟನೆ ವರದಿಯಾಗಿದೆ. ಮೂವರೂ ಸಾವುಬದುಕಿನ ನಡುವೆ ಹೋರಾಡುತ್ತಿದ್ದರು, ಆಸ್ಪತ್ರೆಗೆ ದಾಖಲಿಲಸಾಗಿದೆ.
ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಆಂಬಿಯನ್ಸ್ ಮಾಲ್ ಬಳಿ ನಡೆದ ಈ ಘಟನೆ, ನಿವಾಸಿಗಳನ್ನು ಬೆಚ್ಚಿಬೀಳಿಸಿದೆ, ನೈಋತ್ಯ ದೆಹಲಿಯ ಈ ಪ್ರದೇಶದ ರಸ್ತೆ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಿಯಂತ್ರಣ ತಪ್ಪಿ ಕಾರು ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಮೂವರ ಮೇಲೆ ಹರಿದಿದೆ. ಅಪಘಾತದ ಮೊದಲು ಚಾಲಕ ನಿಯಂತ್ರಣ ಕಾಯ್ದುಕೊಳ್ಳಲು ಕಷ್ಟಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿದ್ದರೆ, ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.
ಪೊಲೀಸ್ ಕಾರಿ ಚಾಲಕನನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ, ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕಾರು ಹಿಮಾಚಲ ಪ್ರದೇಶದ ನೋಂದಣಿಯನ್ನು ಹೊಂದಿದ್ದು, ಇದು ಹೊರ ರಾಜ್ಯಕ್ಕೆ ಸೇರಿದ್ದು ಎಂಬುದು ಕಂಡುಬಂದಿದೆ. ವೈದ್ಯಕೀಯ ಪರೀಕ್ಷೆಗಳು ಬಾಕಿ ಉಳಿದಿರುವ ಕಾರಣ, ಮದ್ಯಪಾನ ಮಾಡಿದ್ದರೇ ಎಂಬುದಕ್ಕೆ ದೃಢಪಟ್ಟಿಲ್ಲ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆ, ಇದಕ್ಕೆ ಕಾರಣ ಇಲ್ಲಿದೆ ನೋಡಿ
ವಸಂತ್ ಕುಂಜ್ನಲ್ಲಿರುವ ಆಂಬಿಯನ್ಸ್ ಮಾಲ್ನ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳೀಯ ಆ ಪ್ರದೇಶವನ್ನು ಸುತ್ತುವರೆದಿದೆ, ವಿಧಿವಿಜ್ಞಾನವನ್ನು ನಿಯೋಜಿಸಿದ್ದರು.
ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆ
ಬೆಂಗಳೂರು ಎಲ್ಲದರಲ್ಲೂ ಮುಂದು ಎಂದು ಮತ್ತೆ ಸಾಬೀತು ಮಾಡುತ್ತಿದೆ, ಯಾವುದೇ ಕೊಲೆ, ಆತ್ಮಹತ್ಯೆ, ಆತ್ಮಹತ್ಯೆಯಲ್ಲೂ ಬೆಂಗಳೂರು ಮುಂದಿದೆ. ಇದೀಗ ಈ ಸಾಲಿಗೆ ಪಾದಚಾರಿಗಳ ಸಾವಿನ ಸಂಖ್ಯೆ ಕೂಡಿದೆ. ಇದೊಂದು ಅಘಾತಕಾರಿ ವಿಚಾರ ಎಂದು ಹೇಳಬಹುದು. ರಾಷ್ಟ್ರೀಯ ದಾಖಲೆಗಳ ಬ್ಯೂರೋನ (NCRB) ವರದಿಯ ಪ್ರಕಾರ ಆಕಸ್ಮಿಕ ಸಾವು, ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ರಾಜಧಾನಿ ಇಂತಹ ಪ್ರಕರಣದಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ.
ಇದೀಗ ಪಾದಚಾರಿಗಳ ಸಂಖ್ಯೆಯಲ್ಲೂ ಅಗ್ರಸ್ಥಾನವನ್ನು ಹೊಂದಿದೆ. NCRB ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಬೆಂಗಳೂರಿನಲ್ಲಿ 292 ಪಾದಚಾರಿ ಸಾವುಗಳು ದಾಖಲಾಗಿವೆ, ಇದು ಭಾರತದ 53 ಪ್ರಮುಖ ನಗರಗಳಲ್ಲಿ ಸಂಭವಿಸಿದ ಸಾವುಗಳಲ್ಲಿ ಶೇಕಡಾ 9.48 ರಷ್ಟಿದೆ ಎಂದು ಹೇಳಲಾಗಿದೆ. ಇದೀಗ ಈ ವರದಿ ಪ್ರಕಾರ ಬೆಂಗಳೂರು ಅತಿ ಹೆಚ್ಚು ಪಾದಚಾರಿಗಳ ಸಾವಿನ ನಗರವಾಗಿದೆ. ಇದು ರಸ್ತೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಹೇಳಲಾಗುತ್ತದೆ.
ಸಂಚಾರಿ ಪಾದಚಾರಿಗಳ ಸಾವಿನ ಸಂಖ್ಯೆ ಏರಿಕೆಗೆ ಕಾರಣ ಏನು. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ, ಕಳಪೆ ಲೇನ್ ಶಿಸ್ತು, ಮೂಲಸೌಕರ್ಯ ಕೊರತೆಗಳು ಮತ್ತು ಹೆಚ್ಚುತ್ತಿರುವ ಅಪಘಾತದಲ್ಲಿ ಈ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ನಂತರ, ಅಹಮದಾಬಾದ್ (236) ಮತ್ತು ಜೈಪುರ (201) ಪಾದಚಾರಿಗಳ ಸಾವಿನ ಸಂಖ್ಯೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ.ರಾಜ್ಯ ಮಟ್ಟದಲ್ಲಿ, ಕರ್ನಾಟಕವು 2,386 ಪಾದಚಾರಿ ಸಾವುಗಳನ್ನು ದಾಖಲಿಸಿದೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಸ್ಥಾನದಲ್ಲಿ, ಬಿಹಾರ (3,462) ಮತ್ತು ತಮಿಳುನಾಡು (4,577) ನಂತರ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ