
30, ಮಾರ್ಚ್ 30: ಮಕ್ಕಳನ್ನು ಎಷ್ಟೇ ಮುದ್ದಿನಿಂದ ಬೆಳೆಸಿದರೂ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಕಲಿಸುವುದು ಪ್ರತಿಯೊಬ್ಬರ ಪೋಷಕರ ಜವಾಬ್ದಾರಿ. ಬಾಲಕನೊಬ್ಬ ಕಾರಿನಿಂದ ವಾಟರ್ ಬಲೂನ್ ಎಸೆದ ಪರಿಣಾಮ ಅದು ಬೈಕ್ ಸವಾರನಿಗೆ ತಾಕಿ, ಅವರು ಆಯತಪ್ಪಿ ಫ್ಲೈಓವರ್ ಗೋಡೆಗೆ ಡಿಕ್ಕಿ ಹೊಡೆದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋವನ್ನು ಮೊದಲು ದಿವ್ಯಾ ಟಂಡನ್ ಅವರು ಶೇರ್ ಮಾಡಿದ್ದರು.
ಮಾಡಿದ ಒಂದು ತಪ್ಪಿನಿಂದ ಜೀವವೇ ಹೋಗುವ ಸಾಧ್ಯತೆ ಇತ್ತು. ಮಾರ್ಚ್ 27 ರಂದು ನಡೆದ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕಿಯ ಪೋಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ