ಹೀಗೂ ಮಾಡಬಹುದು ರುಚಿಯಾದ ಎಗ್‌ರೈಸ್; ವಿಶೇಷ ಮತ್ತು ವಿಭಿನ್ನ ಟೇಸ್ಟಿಯ ಅಮ್ಮನ ರೆಸಿಪಿ

ಹೀಗೂ ಮಾಡಬಹುದು ರುಚಿಯಾದ ಎಗ್‌ರೈಸ್; ವಿಶೇಷ ಮತ್ತು ವಿಭಿನ್ನ ಟೇಸ್ಟಿಯ ಅಮ್ಮನ ರೆಸಿಪಿ

ಹೀಗೂ ಮಾಡಬಹುದು ರುಚಿಯಾದ ಎಗ್‌ರೈಸ್; ವಿಶೇಷ ಮತ್ತು ವಿಭಿನ್ನ ಟೇಸ್ಟಿಯ ಅಮ್ಮನ ರೆಸಿಪಿ
ಸಂಜೆ ಅಥವಾ ರಾತ್ರಿ ಊಟಕ್ಕೆ ವಿಭಿನ್ನವಾದ ಎಗ್‌ರೈಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ, ಅನ್ನ ಮತ್ತು ಮಸಾಲೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ, ನಂತರ ಮೊಟ್ಟೆಯೊಂದಿಗೆ ಬೆರೆಸಿ ರುಚಿಕರವಾದ ಎಗ್‌ರೈಸ್ ತಯಾರಿಸಬಹುದು.
ಸಂಜೆ ಅಥವಾ ರಾತ್ರಿ ಊಟಕ್ಕೆ ಏನಾದ್ರೂ ಮಾಡಬೇಕು ಅಂತ ಯೋಚಿಸುತ್ತಿದ್ರೆ ಇಂದು ನಾವು ಹೇಳುವ ರೀತಿಯಲ್ಲಿ ಎಗ್ ರೈಸ್ ಮಾಡ್ಕೊಳ್ಳಿ. ಸಾಮಾನ್ಯವಾಗಿ ಮಾಡುವ ವಿಧಾನಕ್ಕಿಂತ ಸ್ಪಲ್ಪ ವಿಭಿನ್ನವಾಗಿ ಈ ರೆಸಿಪಿ ಮಾಡಬಹುದಾಗಿದೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ರುಚಿಯಾದ ಎಗ್‌ರೈಸ್ ಮಾಡಿಕೊಳ್ಳಬಹುದು.

ಅನ್ನ: ಒಂದು ಕಪ್, ಮೊಟ್ಟೆ: ಎರಡು, ಹಸಿಮೆಣಸಿನಕಾಯಿ: 2, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, ಬೆಳ್ಳುಳ್ಳಿ-ಶುಂಠಿ ಪೇಸ್ಟ್: 1 ಟೀ ಸ್ಪೂನ್, ಅರಿಶಿಣ: ಚಿಟಿಕೆ

ಎಣ್ಣೆ: 4 ರಿಂದ 5 ಟೀ ಸ್ಪೂನ್, ಚಿಕ್ಕ ಗಾತ್ರದ ಒಂದು ಈರುಳ್ಳಿ, ನಿಂಬೆರಸ: 2 ಟೀ ಸ್ಪೂನ್, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು

ಮೊದಲಿಗೆ ಅಗಲವಾದ ಪಾತ್ರೆಗೆ ತಯಾರಿಸಿಕೊಂಡಿರುವ ಅನ್ನವನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಅಚ್ಚಖಾರದ ಪುಡಿ, ನಿಂಬೆರಸ ಸೇರಿಸಿಕೊಂಡು ಮಿಕ್ಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ಇದೀಗ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಳ್ಳಿ. ಪಾತ್ರೆ ಬಿಸಿಯಾಗ್ತಿದ್ದಂತೆ ಎಣ್ಣೆ ಹಾಕಿಕೊಳ್ಳಬೇಕು.

ಎಣ್ಣೆ ಬಿಸಿಯಾದ ಬಳಿಕ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿಕ, ಈರುಳ್ಳಿ ಸೇರಿಸಿ ಎರಡ್ಮೂರು ನಿಮಿಷ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಅ ಬಳಿಕ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಸೇರಿಸಿಕೊಳ್ಳಿ. ಆನಂತರ ಎರಡು ಮೊಟ್ಟೆಗಳನ್ನು ಒಡೆದು ಬಾಣಲೆಗೆ ಹಾಕಿಕೊಳ್ಳಿ. ಮೊಟ್ಟೆ ಚೆನ್ನಾಗಿ ಬೇಯುತ್ತಿದ್ದಂತೆ ಮಸಾಲೆಯೊಂದಿಗೆ ಮಿಕ್ಸ್ ಮಾಡುತ್ತಾ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು.

ಇದನ್ನೂ ಓದಿ: ಏನೇ ಮಾಡಿದ್ರೂ ಬೋಂಡಾ ಆಗ್ತಿದೆಯಾ ಉದ್ದಿನ ವಡೆ? ಎಣ್ಣೆಗೆ ಹಾಕೋ ಮುನ್ನ ಒಂದು ವಸ್ತು ಸೇರಿಸಿ

ಇದೀಗ ಕೊನೆಯದಾಗಿ ಅಚ್ಚಖಾರದ ಪುಡಿ ಮತ್ತು ನಿಂಬೆರಸದೊಂದಿಗೆ ಸೇರಿಸಿಕೊಂಡಿರುವ ಅನ್ನವನ್ನು ಬಾಣಲೆಗೆ ಹಾಕಿ ಎಲವನ್ನು ಮಿಕ್ಸ್ ಮಾಡಿಕೊಂಡ್ರೆ ವಿಶೇಷ ಮತ್ತು ವಿಭಿನ್ನ ರುಚಿಯುಳ್ಳ ಎಗ್‌ರೈಸ್ ಸವಿಯಲು ಸಿದ್ಧವಾಗುತ್ತದೆ. ಕೊನೆಗೆ ಕೋತಂಬರಿ ಸೇರಿಸಿಕೊಂಡ್ರೆ ನೋಡಲು ಸಹ ಸುಂದರವಾಗಿ ಕಾಣಿಸುತ್ತದೆ.

ಇದನ್ನೂ ಓದಿ: ಬ್ಯಾಚುಲರ್‌ ಫೇವರಿಟ್ ಬಾಯಲ್ಲಿ ನೀರೂರಿಸುವ ಎಗ್ ರೈಸ್ ರೆಸಿಪಿ

Source link

Leave a Reply

Your email address will not be published. Required fields are marked *