Headlines

ನೀವು ಲಿಫ್ಟ್ ಬಳಸಬಾರದು: ಭಾರವಾದ ಪಾರ್ಸೆಲ್ ಹೊತ್ತು 6ನೇ ಮಹಡಿಗೆ ಮೆಟ್ಟಿಲ ಮೂಲಕ ಸಾಗಿದ ಡೆಲಿವರಿ ಬಾಯ್

ನೀವು ಲಿಫ್ಟ್ ಬಳಸಬಾರದು: ಭಾರವಾದ ಪಾರ್ಸೆಲ್ ಹೊತ್ತು 6ನೇ ಮಹಡಿಗೆ ಮೆಟ್ಟಿಲ ಮೂಲಕ ಸಾಗಿದ ಡೆಲಿವರಿ ಬಾಯ್


ಡೆಲಿವರಿ ಬಾಯ್ ಒಬ್ಬರು ಭಾರವಾದ ಪಾರ್ಸೆಲ್ ಹೊತ್ತು ನೇ ಮಹಡಿ ತನಕ ಮೆಟ್ಟಿಲುಗಳನ್ನು ಹತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದೀಗ ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರವೊಂದರ ವಸತಿ ಸಂಕೀರ್ಣದಲ್ಲಿ (ಹೌಸಿಂಗ್ ಸೊಸೈಟಿ), ಡೆಲಿವರಿ ಬಾಯ್ ಒಬ್ಬರಿಗೆ ಲಿಫ್ಟ್ ಬಳಸಲು ಅಲ್ಲಿನ ಭದ್ರತಾ ಸಿಬ್ಬಂದಿ ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಈ ಡೆಲಿವರಿ ಬಾಯ್ ಮೆಟ್ಟಿಲಿನಲ್ಲಿ ಹತ್ತಿಕೊಂಡೆ ಬಂದಿದ್ದಾರೆ. ಪಾರ್ಸೆಲ್ ತಲುಪುವುದು ಅನಿವಾರ್ಯವಾಗಿ ಅತ್ಯಂತ ಭಾರವಾದ ಪಾರ್ಸೆಲ್ ಅನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು 6ನೇ ಮಹಡಿಯವರೆಗೆ ಮೆಟ್ಟಿಲುಗಳ ಮೂಲಕ ಹೋಗು.

ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಭಾರವಾದ ಪರ್ಸೆಲ್‌ಗಳನ್ನು ಬೆನ್ನು ಮೇಲೆ ಏರಿಸಿಕೊಂಡು ಮೆಟ್ಟಿಲಿನಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ಹೋಗಿದ್ದಾರೆ. ಅವರು 6ನೇ ಮಹಡಿಯ ಫ್ಲಾಟ್‌ಗೆ ತಲುಪಿದಾಗ, ಅವರ ಸ್ಥಿತಿ ಅತ್ಯಂತ ಕೆಟ್ಟದ್ದಾಗಿತ್ತು ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮನೆಯ ಒಳಗಿನ ವ್ಯಕ್ತಿಯೊಬ್ಬರು “ಆರಾಮ್ ಸೇ” (ನಿಧಾನವಾಗಿ) ಎಂದು ಹೇಳುವುದು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಹಂಚಿಕೊಂಡವರು ಇದನ್ನು “ಅಮಾನವೀಯ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಬ್ಬಾ ! ಒಂದು ತೆಂಗಿನ ತೋಟದಲ್ಲಿ 28 ಲಕ್ಷ ರೂ ಗಳಿಸಬಹುದಂತೆ; ಹೇಗೆ? ಇಲ್ಲಿದೆ ವಿಡಿಯೋ

ಎಕ್ಸ್ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೊ ⁇ ಶ ವ್ಯಕ್ತಪಡಿಸಿದ್ದು, “ಡೆಲಿವರಿ ಮಾಡುವವರಿಗೆ ಲಿಫ್ಟ್ ಬಿಡದ ಇಂತಹ ಸೊಸೈಟಿ ನಿಯಮಗಳು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಕೆಲಸಗಾರರನ್ನು ಗೌರವದಿಂದ ಕಾಣದ ವಸತಿ ಸಂಕೀರ್ಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹೇಳಿದವರು ಯಾರೇ ಆಗಿರಲಿ, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:27 pm, ಸೋಮ, 2 ಫೆಬ್ರವರಿ 26





Source link

Leave a Reply

Your email address will not be published. Required fields are marked *