Headlines

ವಿಚ್ಛೇದನವಾದರೂ ಮಾಜಿ ಪತ್ನಿ , ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ

ವಿಚ್ಛೇದನವಾದರೂ ಮಾಜಿ ಪತ್ನಿ , ಮಗನಿಗೆ 4 ಕೋಟಿ ಮೌಲ್ಯದ  ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ

ವಿಚ್ಛೇದನವಾದರೂ ಮಾಜಿ ಪತ್ನಿ , ಮಗನಿಗೆ 4 ಕೋಟಿ ಮೌಲ್ಯದ  ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ

ವಿಚ್ಛೇದನದ ನಂತರವೂ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಪತ್ನಿ ನತಾಶಾ ಸ್ಟಂಕೋವಿಕ್ ಮತ್ತು ಪುತ್ರ ಅಗಸ್ತ್ಯನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ದುಬಾರಿ ಉಡುಗೊರೆ ಈಗ ಹಾರ್ದಿಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ

ಕೆಲ ದಿನಗಳಿಂದ ಹಾರ್ದಿಕ್ ಪಾಂಡ್ಯ ಸಖತ್ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ ತಮ್ಮ ಹೊಸ ಗರ್ಲ್‌ಫ್ರೆಂಡ್ ಮಹೀಕಾ ಶರ್ಮಾ ಜೊತೆ ಸುತ್ತಾಡ್ತಿರುವ ಹಾರ್ದಿಕ್ ಪಾಂಡ್ಯ ಆಕೆಯ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ಫೋಟೋಗಳು, ಆಕೆಯ ಹೆಸರಿನ ಮೊದಲ ಅಕ್ಷರವನ್ನು ಕತ್ತಿನ ಹಿಂಭಾಗದ ಮೇಲೆ ಟ್ಯಾಟೂ ಹಾಕಿಸಿಕೊಂಡ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಆಕೆಯ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸುವ ಮೂಲಕ ಹಾರ್ದಿಕ್ ಸಾಕಷ್ಟು ಸುದ್ದಿಯಲ್ಲಿದ್ದರು. ಆದರೆ ಈಗ ಹಾರ್ದಿಕ್ ಪಾಂಡ್ಯ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಹೌದು ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಪತ್ನಿ ಸೈಬೀರಿಯಾ ಮೂಲದ ನತಾಶಾ ಸ್ಟಂಕೋವಿಕ್ ಹಾಗೂ ಮಗ ಆಗಸ್ತ್ಯನಿಗಾಗಿ 4 ಕೋಟಿ ಮೌಲ್ಯದ ಲಕ್ಸುರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಲ್ಯಾಂಡ್ ರೋವರ್ ಡಿಫೆಂಡರ್‌ ಅನ್ನು ಹಾರ್ದಿಕ್ ಪಾಂಡ್ಯ ನತಾಶಾ ಹಾಗೂ ಆಗಸ್ತ್ಯಗೆ ಉಡುಗೊರೆಯಾಗಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಹಾಗೂ ನತಾಶ 2024ರ ಜುಲೈನಲ್ಲಿ ಪರಸ್ಪರ ದೂರ ಆಗಿದ್ದಾರೆ. ಹೀಗಿದ್ದೂ ಮಾಜಿ ಪತ್ನಿ ಹಾಗೂ ಮಗನಿಗೆ ಅವರು ನೀಡಿದ ಈ ದುಬಾರಿ ಉಡುಗೊರೆ ಅಚ್ಚರಿಯ ಜೊತೆಗೆ ಹಾರ್ದಿಕ್ ಅವರ ದೊಡ್ಡತನಕ್ಕೆ ಕಾರಣವಾಗಿದೆ. ಅನೇಕರು ಹಾರ್ದಿಕ್ ಅವರನ್ನು ಕಾಮೆಂಟ್‌ಗಳಲ್ಲಿ ಹೊಗಳುತ್ತಿದ್ದಾರೆ.

ನಿಜವಾಗಿ ಈ ಉಡುಗೊರೆಯನ್ನು ಹಾರ್ದಿಕ್ ಅವರು ಮಾಜಿ ಪತ್ನಿಗಾಗಿ ನೀಡಿದ್ದಲ್ಲ, ಬದಲಾಗಿ ಪುತ್ರ ಅಗಸ್ತ್ಯನ ಮೇಲಿನ ಪ್ರೀತಿಗಾಗಿ ನೀಡಿದ್ದಾರೆ. ಅಗಸ್ತ್ಯನನ್ನು ಅವರ ಮಾಜಿ ಪತ್ನಿ ನತಾಶಾ ನೋಡಿಕೊಳ್ಳುತ್ತಿರುವುದರಿಂದ ಈಗ ಅವರೇ ಮಗನ ಜೊತೆಗೆ ಬಂದು ಈ ದುಬಾರಿ ಉಡುಗೊರೆಯನ್ನು ಸ್ವೀಕರಿಸಿದ್ದಾರೆ. ಮುಂಬೈ ಲ್ಯಾಂಡ್ ರೋವರ್ ಸಂಸ್ಥೆ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ಕ್ಷಣದ ಫೋಟೋ ವೀಡಿಯೋಗಳನ್ನು ಪೋಸ್ಟ್ ಮಾಡಿದೆ.

ಫೋಟೋಗಳಲ್ಲಿ ಆಗಸ್ತ್ಯ ಹಾಗೂ ನತಾಶಾ ಸ್ಟಂಕೋವಿಕ್ ಇಬ್ಬರು ಜೊತೆಯಾಗಿ ಈ ಲಕ್ಸುರಿ ಕಾರನ್ನು ಸ್ವೀಕರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ತಮ್ಮ ಡಿಫೆಂಡರ್ ಖರೀದಿಸಲು ನವನೀತ್ ಮೋಟಾರ್ಸ್ ಅನ್ನು ಆಯ್ಕೆ ಮಾಡಿಕೊಂಡರು. ನಂಬಿಕೆಯ ಮೇಲೆ ನಿರ್ಮಿಸಲಾದ ಸಂಬಂಧ. ಶ್ರೇಷ್ಠತೆಯಲ್ಲಿ ಆಧಾರವಾಗಿರುವ ನಿರ್ಧಾರ. ಲ್ಯಾಂಡ್ ರೋವರ್ ಡಿಫೆಂಡರ್‌ನ್ನು ಮುಂಬೈನಲ್ಲಿ ಅಗಸ್ತ್ಯ ಪಾಂಡ್ಯ ಮತ್ತು ಶ್ರೀಮತಿ ಸ್ಟಾಂಕೋವಿಕ್ ಅವರಿಗೆ ವಿತರಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಸುಮಾರು 4 ಕೋಟಿ ರೂ. ಮೌಲ್ಯದ ಐಷಾರಾಮಿ ಎಸ್‌ಯುವಿ, ಲ್ಯಾಂಡ್ ರೋವರ್ ಡಿಫೆಂಡರ್ ಇದಾಗಿದೆ.

ಹಾರ್ದಿಕ್ ಅವರ ನಿರ್ಧಾರಕ್ಕೆ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನತಾಶಾ ಮಗನ ಜೊತೆಗೆ ಈ ಕಪ್ಪು ಲ್ಯಾಂಡ್ ರೋವರ್ ಡಿಫೆಂಡರ್‌ನೊಂದಿಗೆ ಪೋಸ್ ನೀಡಿದ್ದಾರೆ. ಈ ಐಷಾರಾಮಿ ವಾಹನಕ್ಕೆ ಕಸ್ಟಮೈಸೇಶನ್ ಮತ್ತು ರೂಪಾಂತರವನ್ನು ಅವಲಂಬಿಸಿ 3 ಕೋಟಿಯಿಂದ 4 ಕೋಟಿ ರೂ.ಗಳವರೆಗೆ ವೆಚ್ಚವಾಗುತ್ತದೆ. ನತಾಶಾ ಹಾಗೂ ಹಾರ್ದಿಕ್ ಜುಲೈ 2024 ರಲ್ಲಿ ಅಧಿಕೃತವಾಗಿ ಬೇರ್ಪಟ್ಟಿದ್ದು, ಮಗ ಆಗಸ್ತ್ಯನನ್ನು ಇಬ್ಬರು ನೋಡಿಕೊಳ್ಳುತ್ತಾರೆ. ಆದರೆ ಹಾರ್ದಿಕ್ ಹೆಚ್ಚಾಗಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವುದರಿಂದ ಹೆಚ್ಚಿನ ಸಮಯವನ್ನು ಆಗಸ್ತ್ಯ ಅಮ್ಮನ ಜೊತೆಗೆ ಕಳೆಯುತ್ತಾನೆ.

ಹಾರ್ದಿಕ್ ಇತ್ತೀಚೆಗೆ ಮಹಿಕಾ ಶರ್ಮಾ ಅವರೊಂದಿಗಿನ ಓಡಾಟ ಡೇಟಿಂಗ್ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆದರೂ ತಮ್ಮ ಮಗನಿಗೆ ತಾನು ಯಾವುದೇ ರೀತಿಯಲ್ಲಿ ಕಡಿಮೆ ಮಾಡಿಲ್ಲ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನವನ್ನು ಅವರು ಮುಂದುವರೆಸುವ ಜೊತೆಗೆ ಆತನೂ ತನ್ನ ಪ್ರಮುಖ ಆದ್ಯತೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮಹಿಕಾ ಶರ್ಮಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ವೀಡಿಯೋ ಫೋಟೋಗಳು ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿವೆ. ಮತ್ತೊಂದೆಡೆ ಅಭಿಮಾನಿಗಳು ಕೂಡ ಹಾರ್ದಿಕ್ ಅವರು ಮಾಜಿ ಪತ್ನಿ ಮಗನಿಗೆ ನೀಡಿದ ಉಡುಗೊರೆ ನೋಡಿ ಭಾವುಕರಾಗಿದ್ದಾರೆ.

Source link

Leave a Reply

Your email address will not be published. Required fields are marked *