ಹಾಳಾದ ಟ್ರಾನ್ಸ್ಫಾರ್ಮರ್, ಕತ್ತಲಲ್ಲಿ ಅಡುಗೆ ಮಾಡುತ್ತಿರುವ ಮಹಿಳೆ
ದೇವನಹಳ್ಳಿ, ಫೆಬ್ರವರಿ 19: ಅದು ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಅವರ ಸ್ವಕ್ಷೇತ್ರದ ಕುಗ್ರಾಮ. ದಲಿತರೇ ವಾಸಿಸುವ ಆ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್‌ಫರ್ ಸುತ್ತು ಹೋಗಿದೆ. ಹೀಗಾಗಿ 15 ದಿನಗಳಿಂದ ವಿದ್ಯುತ್ (ವಿದ್ಯುತ್ ಕಡಿತ)ಇಲ್ಲಿದೆ ಕತ್ತಲಲ್ಲಿ ಜೀವನ ಕಳೆಯಿದೆ. ಬೆಸ್ಕಾಂ (ಬೆಸ್ಕಾಂ) ಕಚೇರಿಗೆ ಅಲೆದು ಅಲೆದು ಸುಸ್ತಾದ ಗ್ರಾಮಸ್ಥರು ಇದೀಗ ಕರೆಂಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಬೆಸ್ಕಾಂ ವಿರುದ್ಧ ಆಕ್ರೋಶ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಸುಮಾರು 30 ಮನೆಗಳಿದ್ದು, 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ದಲಿತರೇ ವಾಸಿಸುವ ಈ ಕುಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್ ಸುತ್ತುಹೋಗಿದೆ. ಅಂದಿನಿಂದ ಇಂದಿನವರೆಗೆ ರಾತ್ರಿ ಹೊತ್ತಿನಲ್ಲಿ ಗ್ರಾಮದಲ್ಲಿ ಕರೆಂಟ್ ಇಲ್ಲದೆ ಜನ ಕಗ್ಗತ್ತಲಿನಲ್ಲಿ ಇದ್ದು ಹೈರಾಣಾಗಿದ್ದಾರೆ. ಜೊತೆಗೆ ಹಾವು, ಚೇಳುಗಳ ಭಯ ಸೇರಿದಂತೆ ಮತ್ತೊಂದೆಡೆ ಕಳ್ಳರ ಕಾಟ. ಕುರಿಗಳ ಕಳ್ಳತನ ಮಾಡುತ್ತಿದ್ದಾರೆ ಅಂತ ಜನ ಜಾಗರಣೆ ಮಾಡಿದ್ದಾರೆ. ವಿದ್ಯುತ್ ಸಮಸ್ಯೆ ಸರಿಪಡಿಸಿದ ಬೆಸ್ಕಾಂ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಾಯಿಯ ಫೋಟೋ ಶೂಟ್ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ
ರಾಜ್ಯದಲ್ಲಿ ಗೃಹಜ್ಯೋತಿ ಜಾರಿಯಲ್ಲಿದ್ದು, ಈ ಗ್ರಾಮದಲ್ಲಿ ನಿರಂತರ 24 ಗಂಟೆಗಳ ಕಾಲ ವಿದ್ಯುತ್ ನೀಡಲಾಯಿತು. ಆದರೆ 25 ಕೆವಿ ಟ್ರಾನ್ಸ್‌ಫಾರ್ಮರ್ ಗ್ರಾಮದ 30 ಮನೆಗಳಿಗೆ ವಿದ್ಯುತ್ ಒದಗಿಸಿದಲ್ಲದೆ ಕೆಲವರು ಬೋರ್ವೆಲ್‌ಗೂ ಇದೆ ಟ್ರಾನ್ಸ್‌ಫರ್ಮರ್ ಬಳಸುತ್ತಿದ್ದರಂತೆ. ಹೀಗಾಗಿ ಟ್ರಾನ್ಸ್ಫಾರ್ಮರ್ ಸುತ್ತುಹೋಗಿ 15 ದಿನಗಳಿಂದ ಕತ್ತಲಲ್ಲೇ ಜನ ವಾಸ ಮಾಡಲಾಗಿದೆ. ಕೆಲ ಮನೆಯ ವಿದ್ಯಾರ್ಥಿಗಳು ಕರೆಂಟ್ ಇಲ್ಲದೆ ಇದ್ದಾರಂತೆ.
ಇನ್ನು ಟ್ರಾನ್ಸ್ ಫಾರ್ಮರ್ ಸರಿಪಡಿಸಿ ಗ್ರಾಮಕ್ಕೆ ಕರೆಂಟ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳು ಬಳಿ ಅಲೆದು ಅಲೆದು ಸುಸ್ತಾದ ಜನ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇನ್ನು ನಾಳೆ ಒಳಗೆ ಗ್ರಾಮಕ್ಕೆ ಕರೆಂಟ್ ಬಾರದೇ ಹೋದರೆ ವಿಜಯಪುರ ಬೆಸ್ಕಾಂ ಬಳಿ ಗ್ರಾಮಸ್ಥರಿಂದ ಅಡುಗೆ ಮಾಡಿ ಅಲ್ಲಿಯೇ ವಾಸ ಮಾಡುವ ಎಚ್ಚರಿಕೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ
ಒಟ್ಟಾರೆ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮದ ಜನ ಹೈರಾಣಾಗಿದ್ದು, ಬೆಸ್ಕಾಂ ಇಲಾಖೆ ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ. ಈ ವರ್ಷ ಆದಷ್ಟು ಬೇಗ ಬೆಸ್ಕಾಂ ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್ ಅಳವಡಿಸಿ ಕಗ್ಗತ್ತಲಲ್ಲಿಂದ ಕೂಡಿರುವ ಗ್ರಾಮಕ್ಕೆ ಬೆಳಕು ನೀಡುವ ಕೆಲಸ ಮಾಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.