ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೇಧಿ!

ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೇಧಿ!


ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೋಧಿ!

ದೇವನಹಳ್ಳಿ, ಮಾರ್ಚ್ 29: ತಾಲ್ಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನ ಪ್ರಸಾದ ಸೇವಿಸಿದ ಭಕ್ತರಲ್ಲಿ ಫುಡ್ ಪಾಯಿಸನ್ ಆಗಿರುವುದು ಕಂಡುಬಂದಿದೆ. ನಿನ್ನೆ (ಮಾರ್ಚ್ 28) ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಯಿತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ಸಂಸ್ಥೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಉಳಿದವರಿಗೆ ಬೆಟ್ಟೇನಹಳ್ಳಿಯಲ್ಲೇ ವೈದ್ಯಕೀಯ ಸೇವೆ ಒದಗಿಸಲಾಗಿದೆ.

 

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 



Source link

Leave a Reply

Your email address will not be published. Required fields are marked *