Headlines

ಚೀಪ್ ಚಿನ್ನದ ಆಸೆಗೆ ಬಿದ್ದ ವ್ಯಕ್ತಿ ಕಳೆದುಕೊಂಡಿದ್ದು 20 ಲಕ್ಷ ರೂ!

ಚೀಪ್ ಚಿನ್ನದ ಆಸೆಗೆ ಬಿದ್ದ ವ್ಯಕ್ತಿ ಕಳೆದುಕೊಂಡಿದ್ದು 20 ಲಕ್ಷ ರೂ!


ಚೀಪ್ ಚಿನ್ನದ ಆಸೆಗೆ ಬಿದ್ದ ವ್ಯಕ್ತಿ ಕಳೆದುಕೊಂಡಿದ್ದು 20 ಲಕ್ಷ ರೂ!

ದೇವನಹಳ್ಳಿ, ಮಾರ್ಚ್ 05: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ವ್ಯಕ್ತಿಯನ್ನು ಕರೆಸಿಕೊಂಡು 20 ಲಕ್ಷ ರೂ. ಹಣ ದೋಚಿದ (ದರೋಡೆ) ಘಟನೆ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ್ ರೆಡ್ಡಿ ಎಂಬಾತನನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದೊಣ್ಣೆಯಿಂದ ಹೊಡೆದು, ಬ್ಯಾಗ್ ಕಸಿದು ಪರಾರಿ

ವಿಶ್ವಪ್ರಸಾದ್ ರೆಡ್ಡಿಗೆ ಕುಮಾರ್ ಎಂಬಾತ ಪರಿಚಯವಾಗಿ, ತಮ್ಮ ಬಳಿ ಕಡಿಮೆ ಬೆಲೆಗೆ ಸುಮಾರು 4 ಕೆಜಿ ಚಿನ್ನದ ಕಾಯಿ ಇದೆ ಎಂದು ಹೇಳಿ ಆಸೆ ಹುಟ್ಟಿಸಿದ್ದರು. ಒಂದು ಕೆಜಿ ಚಿನ್ನಕ್ಕೆ 20 ಲಕ್ಷ ರೂ. ನೀಡುವಂತೆ ಹೇಳಿದ ವಿಶ್ವಪ್ರಸಾದ್ ಚಿನ್ನ ಖರೀದಿಸಲು ಒಪ್ಪಿಕೊಂಡಿದ್ದಾನೆ. ಈ ಪೈಕಿ ಆಂಧ್ರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಶ್ವಪ್ರಸಾದ್, ನಂತರ ಯಲಹಂಕದಿಂದ 20 ಲಕ್ಷ ರೂ. ಹಣದೊಂದಿಗೆ ಟ್ಯಾಕ್ಸಿಯಲ್ಲಿ ದೇವನಹಳ್ಳಿ ಕಡೆಗೆ ಪ್ರಯಾಣಿಸಿದ್ದಾರೆ.

ಇದನ್ನೂ ಓದಿ ಕುಂಬಳಗೋಡು ಠಾಣೆ ಪಿಐ ವಿರುದ್ಧ 10 ಲಕ್ಷ ರೂ.ಲಂಚ ಕೇಳಿದ ಆರೋಪ: ಪೊಲೀಸ್ ಆಯುಕ್ತರಿಗೆ ವಕೀಲರಿಂದ ದೂರು

ಈ ವೇಳೆ ರಾಷ್ಟ್ರೀಯ ಹೆದ್ದಾರಿ 47ರ ಬಳಿ ಇರುವ ವೆಂಕಟಗಿರಿಕೋಟೆ ಸಮೀಪದ ಖಾಸಗಿ ಲೇಔಟ್ ಬಳಿ ತಲುಪಲು ದುಷ್ಕರ್ಮಿಗಳ ಗ್ಯಾಂಗ್ ದಾಳಿ ನಡೆಸಿದೆ. ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದೊಣ್ಣೆಗಳಿಂದ ವಿಶ್ವಪ್ರಸಾದ್ ಹಾಗೂ ಅವನ ಜೊತೆಗಿದ್ದ ವ್ಯಕ್ತಿಯ ಮೇಲೆ ಹಲ್ಲೆ. ಬಳಿಕ ವಿಶ್ವಪ್ರಸಾದ್ ಬಳಿ ಇದ್ದ ಹಣದ ಬ್ಯಾಗ್ ಹಾಗೂ ಮೊಬೈಲ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ನಡೆದಿದ್ದು ವಿಜಯಪುರ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *