
ದೇವನಹಳ್ಳಿ, ಏಪ್ರಿಲ್ 03: ಅಣ್ಣನ ಮೇಲಿನ ಕೋಪಕ್ಕೆ ಆತ ಸಾಕಿದ್ದ ನಾಯಿಗೆ ಗುಂಡಿಟ್ಟು ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಹೋದರ ವೆಂಕಟೇಶ್ ಮೇಲೆ ಇದ್ದ ಕೋಪಕ್ಕೆ ತಮ್ಮ ನಾರಾಯಣಸ್ವಾಮಿ ಈ ಕೃತ್ಯ ಎಸಗಿದ್ದು, ಆಸ್ತಿ ವಿಚಾರವಾಗಿ ಸಹೋದರರ ನಡುವೆ ಬಹು ಸಮಯದಿಂದ ಜಗಳ ನಡೆಯುತ್ತಿತ್ತು. ಈ ನಡುವೆ ತಾನು ಹೂಕೋಸು ಬೆಳೆದಿದ್ದ ಸ್ಥಳದಲ್ಲಿ ವೆಂಕಟೇಶ್ ಸಾಕಿದ್ದ ನಾಯಿ ಯಾವಾಗಲೂ ಸುತ್ತಾಡುತ್ತೆ ಎಂದು ಆರೋಪಿಸಿ ಸಹೋದರನ ಮನೆ ಬಳಿ ಬಂದ ನಾರಾಯಣಸ್ವಾಮಿ ಬಂದೂಕಿನಿಂದ ನಾಯಿಗೆ ಶೂಟ್ ಮಾಡಿದ್ದಾನೆ.
ಅಂದಹಾಗೆ ಇವರಿಬ್ಬರೂ ಮಲತಾಯಿ ಮಕ್ಕಳಾಗಿದ್ದರೆ, ಇಬ್ಬರ ನಡುವೆ ಹಳೆಯ ದ್ವೇಷವಿತ್ತು. ನಾರಾಯಣಸ್ವಾಮಿ ಯಾವಾಗಲೂ ಅಣ್ಣ ವೆಂಕಟೇಶ್ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರಂತೆ. ಮೊನ್ನೆಯೂ ಬೇಕು ಅಂತಾ ರಸ್ತೆಯಲ್ಲಿ ಹೋಗ್ತಿದ್ದ ನಾಯಿಗೆ ನಾರಾಯಣಸ್ವಾಮಿ ಕಲ್ಲು ಹೊಡೆದು ಓಡಿಸಿದ್ದಲ್ಲದೆ, ಅದರ ಮೇಲೆ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಗುಂಡೇಟು ತಿಂದ ಸಾಕು ನಾಯಿ ಸ್ಥಳದಲ್ಲೇ ಜೀವ ಬಿಟ್ಟಿದೆ. ಘಟನೆಯ ದೃಶ್ಯ ಸಿಟಿವಿ ಕ್ಯಾಮರಾದಲ್ಲಿ ಸೆರೆ, ಮೃತ ನಾಯಿಯ ಶವ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು. ಜೊತೆಗೆ ಘಟನೆ ಬಗ್ಗೆ ವೆಂಕಟೇಶ್ ನೀಡಿದ ದೂರಿನ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗಂಡನ ಮನೆಯವರ ಕಿರುಕುಳಕ್ಕೆ ಜೀವಬಿಟ್ಟ 4 ತಿಂಗಳ ಗರ್ಭಿಣಿ; ಪತಿ ಮನೆಯವರಿಂದಲೇ ಕೊಲೆಯೆಂದು ಪೋಷಕರ ಆರೋಪ
ಈ ಕೇಸ್ ದಾಖಲಾದ ಶೂ ಸ್ಥಳ ಪರಿಶೀಲನೆ ನಡೆಸಿದ ನಾಯಿಯ ಮೇಲೆ ಗುಂಡನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಾರಾಯಣಸ್ವಾಮಿ ಹಾಗೂ ಆತನ ಪತ್ನಿ ನಾಗಮ್ಮನ ಮೇಲೆ ಎಫ್ಐಆರ್ ದಾಖಲಾಗಿದ್ದು, ಸಹೋದರನ ಮೇಲೆ ಮೂಖ ಪ್ರಾಣಿಯನ್ನ ಕೊಂದವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.