Headlines

ಮತ್ತೆ ಬಾಲಿವುಡ್​​ಗೆ ಹಾರಿದ ಧನುಶ್, ಆನಂದ್ ಜೊತೆ ನಾಲ್ಕನೇ ಸಿನಿಮಾ

ಮತ್ತೆ ಬಾಲಿವುಡ್​​ಗೆ ಹಾರಿದ ಧನುಶ್, ಆನಂದ್ ಜೊತೆ ನಾಲ್ಕನೇ ಸಿನಿಮಾ


ಮತ್ತೆ ಬಾಲಿವುಡ್ ಗೆ ಹಾರಿದ ಧನುಶ್, ಆನಂದ್ ಜೊತೆ ನಾಲ್ಕನೇ ಸಿನಿಮಾ

ಧನುಶ್ (ಧನುಷ್), ತಮಿಳು ಚಿತ್ರರಂಗದ ಸ್ಟಾರ್ ನಟ, ತೆಲುಗು ರಾಜ್ಯಗಳಲ್ಲಿಯೂ ಸಾಕಷ್ಟು ಅಭಿಮಾನಿಗಳು. ಧನುಷ್ ಅವರು ದಕ್ಷಿಣದಲ್ಲಿ ಹಿಂದಿ ಭಾಷಿಕ ಪ್ರದೇಶದಲ್ಲೂ ದೊಡ್ಡ ಅಭಿಮಾನಿ ವರ್ಗ. ಅದಕ್ಕೆ ಮುಖ್ಯ ಕಾರಣ ಅವರ ನಟನೆಯ ‘ರಾಂಝನಾ’ ಸಿನಿಮಾ. 2013 ರಲ್ಲಿ ಬಿಡುಗಡೆ ಆಗಿದ್ದ ಹಿಂದಿ ಸಿನಿಮಾ ‘ರಾಂಝನಾ’ ಹಿಂದಿಯ ಕಲ್ಟ್ ಕ್ಲಾಸಿಕ್‌ಗಳಲ್ಲಿ ಒಂದು. ಅದಾದ ಬಳಿಕ ಸತತವಾಗಿ ಧನುಶ್ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ.

ಧನುಶ್ ಮತ್ತು ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಅವರದ್ದು ಜೋಡಿಯೇ ಆಗಿಬಿಟ್ಟಿದೆ. ಇತ್ತೀಚೆಗಷ್ಟೇ ಧನುಶ್, ಕೃತಿ ಸನೋನ್ ನಟಿಸಿದ್ದ ‘ತೇರೆ ಇಷ್ಕ್ ಮೇ’ ಸಿನಿಮಾವನ್ನು ಆನಂದ್ ಎಲ್ ರಾಯ್ ನಿರ್ದೇಶಿಸಿದ್ದು, ಸಿನಿಮಾ ಸಾಧಾರಣ ಹಿಟ್ ಅಷ್ಟೇ ಆಯ್ತಾದರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆ. ಇದೀಗ ಧನುಶ್ ಅವರು ಮತ್ತೊಮ್ಮೆ ಹಿಂದಿ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಆನಂದ್ ಅವರೇ ಧನುಶ್ ಅವರ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಈ ತನಕ ಆನಂದ್ ಅವರು, ಧನುಷ್ ಅನ್ನು ಸ್ಟ್ರೀಟ ಲವ್ವರ್, ಠಪೋರಿ ರೀತಿಯ ಪಾತ್ರಗಳಲ್ಲಿ ತೋರಿಸಿದ್ದರು. ಆದರೆ ಮೊದಲ ಬಾರಿಗೆ ಧನುಷ್ ಅವರಿಗಾಗಿ ಐತಿಹಾಸಿಕ ಕಥೆಯನ್ನು ಆನಂದ್ ಅವರು ಹೆಣೆದಿದ್ದಾರೆ. ಆನಂದ್ ಅವರು ಪಿರಿಯಡ್ ಲವ್ ಸ್ಟೋರಿ ಒಂದನ್ನು ಹೆಣೆದಿದ್ದು, ಸಿನಿಮಾದಲ್ಲಿ ಧನುಷ್ ಜೊತೆಗೆ ಕೃತಿ ಸನೋನ್ ನಾಯಕಿಯಾಗಿ ನಟಿಸಲಿದ್ದಾರೆ. ‘ತೇರೆ ಇಷ್ಕ್ ಮೇ’ ಸಿನಿಮಾದಲ್ಲಿಯೂ ಕೃತಿ ಸನೋನ್ ನಾಯಕಿ ಆಗಿದ್ದರು. ಧನುಶ್ ಅಂಥಾ ನಟನ ಮುಂದೆ ಸಹ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೇ ಜೋಡಿಯನ್ನು ಆನಂದ್ ಅವರು ತಮ್ಮ ಹೊಸ ಸಿನಿಮಾಕ್ಕೂ ನಿಂತಿದ್ದಾರೆ.

ಇದನ್ನೂ ಓದಿ:ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ

‘ರಾಂಝನಾ’, ‘ಅತರಂಗಿ ರೇ’, ‘ತೇರೆ ಇಷ್ಕ್ ಮೇ’ ಸಿನಿಮಾಗಳು ಧನುಶ್ ಮತ್ತು ಆನಂದ್ ಎಲ್ ರಾಯ್ ಅವರ ಕಾಂಬಿನೇಷನ್ ನಲ್ಲಿ ಈ ತನಕ ಮೂಡಿ ಬಂದಿದ್ದು, ಈ ಮೂರು ಸಿನಿಮಾಗಳು ಅದ್ಭುತ ಪ್ರೇಮಕತೆಯನ್ನು ಒಳಗೊಂಡಿವೆ. ಇದೀಗ ಮೊದಲ ಬಾರಿಗೆ ಆನಂದ್ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರೇಮಕತೆ ನಿರ್ದೇಶಿಸಲು ಕೈ ಹಾಕಿದ್ದಾರೆ. ಧನುಷ್ ಅವರೂ ಸಹ ಐತಿಹಾಸಿಕ ರೀತಿಯ ಪಾತ್ರಗಳಲ್ಲಿ ನಟಿಸಿರುವುದು ಕಡಿಮೆಯೇ. ಸಹಜವಾಗಿಯೇ ಈ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಕುತೂಹಲವಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *