ಧನುಶ್ ಹಾಗೂ ಮೃಣಾಲ್ ಠಾಕೂರ್ (ಮೃಣಾಲ್ ಠಾಕೂರ್) ಅವರ ವಿವಾಹದ ಬಗ್ಗೆ ಚರ್ಚೆಗಳು ನಡೆದಿವೆ. ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಇವರು ಹಸೆಮಣೆ ಏರುತ್ತಾರೆ ಎಂಬ ಗಾಸಿಪ್ ಜೋರಾಗಿದೆ. ಆಪ್ತರು ಹಾಗೂ ಚಿತ್ರರಂಗದವರು ಈ ಮದುವೆಯಲ್ಲಿ ಭಾಗಿ ಆಗೋ ಸಾಧ್ಯತೆ ಇದೆ. ಹೀಗಿರುವಾಗಲೇ ಧನುಶ್ ಹಾಗೂ ಮೃಣಾಲ್ ಕದ್ದು ಮುಚ್ಚಿ ಮದುವೆ ಆದರೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಆ ಒಂದು ಫೋಟೋ.
ಧನುಶ್ ಹಾಗೂ ಮೃಣಾಲ್ ಒಟ್ಟಾಗಿ ಸಿನಿಮಾ ಮಾಡಿದವರಲ್ಲ. ಆದರೆ, ಇಬ್ಬರ ಮಧ್ಯೆ ಪರಿಚಯ ಆಯಿತು. ವಿವಾಹ ಸಮೀಪಿಸುತ್ತಿರುವಾಗಲೇ ಇವರ ಫೋಟೋ ವೈರಲ್ ಆಗಿದೆ. ಧನುಶ್ ಹಾಗೂ ಮೃಣಾಲ್ ಅಕ್ಕ ಪಕ್ಕ ಕೂತಿದ್ದಾರೆ. ಧನುಶ್ ಬಿಳಿ ಬಣ್ಣದ ಧೋತಿ ಹಾಗೂ ಶರ್ಟ್ ಧರಿಸಿದ್ದಾರೆ. ಮೃಣಾಲ್ ಠಾಕೂರ್ ಸೀರೆ ಉಟ್ಟಿ, ಕೂದಲಿಗೆ ಮಲ್ಲಿಗೆ ಹೂ ಮುಡಿದಿದ್ದಾರೆ.
ಹಿಂಭಾಗದಲ್ಲಿ ನಟರಾದ ದಳಪತಿ ವಿಜಯ್, ಅಜಿತ್, ದುಲ್ಖರ್ ಸಲ್ಮಾನ್, ನಟಿಯಾದ ಶ್ರುತಿ ಹಾಸನ್, ತ್ರಿಷಾ ಇದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಕೂಡ ಪೋಸ್ ಕೊಟ್ಟಿದ್ದಾರೆ. ಜನವರಿ 22 ರಂದು ಈ ಮದುವೆ ನಡೆದಿದೆ ಎಂದು ಫೇಕ್ ನ್ಯೂಸ್ ಹಬ್ಬಿಸಲಾಗಿದೆ. ಚೆನ್ನೈನಲ್ಲಿ ಈ ವಿವಾಹ ನಡೆದಿದೆ ಎಂದು ಬರೆಯಲಾಗಿದೆ. ಕೊನೆಯಲ್ಲಿ ಇದನ್ನು ಎಐನಿಂದ ಮಾಡಿದ ವಿಡಿಯೋ ವಿಶೇಷ ಸೂಚನೆಯನ್ನು ಹಾಕಲಾಗಿದೆ. ಈ ವಿಡಿಯೋ ನೋಡಿದ ಅನೇಕರು ಇದು ನಿಜ ಎಂದು ನಂಬಿದ್ದಾರೆ.
ಫೆಬ್ರವರಿ 14ರಂದು ಮೃಣಾಲ್ ಹಾಗೂ ಧನುಶ್ ಮದುವೆ ಎಂಬ ವರದಿ ಹರಿದಾಡಿದೆ. ಹೈದರಾಬಾದ್ ಈವೆಂಟ್‌ನಲ್ಲಿ ಇಬ್ಬರೂ ಭೇಟಿ ಮಾಡಿದರು. ಫೆಬ್ರವರಿ ಕೊನೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಸಮಾರಂಭದಂತೆ. ಒಂದೇ ತಿಂಗಳಿನಲ್ಲಿ ಎರಡೆರಡು ಮದುವೆ ನಂತರ.
ಇದನ್ನೂ ಓದಿ: ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ? ಇಬ್ಬರ ನಡುವಿನ ವಯಸ್ಸಿನ ಅಂತರ
ಧನುಷ್ ಅವರು ಈ ಮೊದಲು ರಜನಿಕಾಂತ್ ಮಗಳು ಐಶ್ವರ್ಯಾ ಅವರಿಗೆ ವಿವಾಹ ಆಗಿದ್ದರು. ಆ ಬಳಿಕ ವಿಚ್ಛೇದನ ಪಡೆದು ಇವರು ದೂರವಾದರು. ಈ ಬೆನ್ನಲ್ಲೇ ಧನುಷ್ ಎರಡನೇ ಮದುವೆಗೆ ರೆಡಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.