
ತಮಿಳು ನಟ ಧನುಶ್ (ಧನುಷ್) ಹಾಗೂ ನಯನತಾರಾ-ವಿಘ್ನೇಶ್ ಶಿವನ್ ಮಧ್ಯೆ ಕಿರಿಕ್ ಆಗುತ್ತಿದೆ. ನೆಟ್ಫ್ಲಿಕ್ಸ್ ಅಲ್ಲಿ ರಿಲೀಸ್ ಆದ ನಯನತಾರಾ ಅವರ ಮದುವೆ ಡಾಕ್ಯುಮೆಂಟರಿಯಲ್ಲಿ ಧನುಶ್ ಸಿನಿಮಾದ ಸೆಟ್ ದೃಶ್ಯ ಒಂದನ್ನು ಹಾಕಲಾಗಿದೆ. ಈ ಸಂಬಂಧ ಧನುಶ್ ಕೇಸ್ ದಾಖಲು ಮಾಡಿದ್ದರು. ಆ ಬಳಿಕ ಇವರ ಸಂಬಂಧ ಹದಗೆಟ್ಟಿದೆ. ಈ ಬಗ್ಗೆ ವಿಘ್ನೇಶ್ ಶಿವನ್ ಮಾತನಾಡಿದ್ದಾರೆ. ಈ ಕಿತ್ತಾಟ ತಮಗೆ ದೊಡ್ಡ ನಷ್ಟ ತಂದಿದೆ ಎಂದು ವಿಘ್ನೇಶ್ ಹೇಳಿದ್ದಾರೆ.
2015ರಲ್ಲಿ ‘ನಾನು ರೌಡಿ ದಾನ್’ ಸಿನಿಮಾ ತೆರೆಗೆ ಬಂತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ವಿಘ್ನೇಶ್ ಶಿವನ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಧನುಶ್. ನಯನತಾರಾ ಈ ಚಿತ್ರದ ನಾಯಕಿ. ಧನುಷ್-ನಯನತಾರಾ ಮಧ್ಯೆ ಪ್ರೀತಿ ಮೂಡಿದ್ದು ಇದೆ ಸಿನಿಮಾದಲ್ಲಿ. ಈ ಶೂಟಿಂಗ್ ದೃಶ್ಯವನ್ನು ‘ನೆಟ್ಫ್ಲಿಕ್ಸ್’ ಡಾಕ್ಯುಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ನಲ್ಲಿ ಬಳಸಲಾಗಿದೆ. ಇದಕ್ಕೆ ಧನುಷ್ ಒಪ್ಪಿಗೆ ನೀಡಿರಲಿಲ್ಲ. ಈ ದೃಶ್ಯ ಬಳಸಿದ್ದಕ್ಕಾಗಿ ನಯನತಾರಾಗೆ ಮತ್ತು ನೆಟ್ಫ್ಲಿಕ್ಸ್ಗೆ 10 ಕೋಟಿ ರೂಪಾಯಿ ನೀಡುವಂತೆ ಧನುಷ್ ಬೇಡಿಕೆ ಇಟ್ಟಿದ್ದರು.
ಈ ಘಟನೆಯ ಬಗ್ಗೆ ವಿಘ್ನೇಶ್ ಮಾತನಾಡಿದ್ದಾರೆ. ‘ಜೊತೆ ಒಳ್ಳೆ ರೀತಿಯಲ್ಲಿ ಇದ್ದವರನ್ನು ಕಳೆದುಕೊಂಡರೆ ಅದು ನಾಚಿಕೆಗೇಡಿನ ಸಂಗತಿ. ಎಲ್ಲೋ ಒಂದು ಕಡೆ ತಪ್ಪು ನಡೆದಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಜಗಳಕ್ಕೆ ಮೂಲ ಕಾರಣರಾದ ಪತ್ನಿ ನಯನಾತಾರಾ ಬಗ್ಗೆಯೇ ಅವರಿಗೆ ಬೇಸರ ಇದೆಯೇ ಎಂಬ ಪ್ರಶ್ನೆ ಮೂಡಿದೆ.
ಭಿನ್ನಾಭಿಪ್ರಾಯಗಳಿವೆ, ವಿಘ್ನೇಶ್ ಅವರು ಧನುಷ್ ಬಗ್ಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಅವರು ಇಲ್ಲದಿದ್ದರೆ ನಾನು ಇಲ್ಲಿ ಇರಬೇಕಾಗಿದೆ’.
ಇದನ್ನೂ ಓದಿ: ನಯನಾತಾರಾಗೆ ದೊಡ್ಡ ಹಿನ್ನಡೆ: ಧನುಷ್ ಪರವಾಗಿ ತೀರ್ಪು ನೀಡಿದ ಕೋರ್ಟ್
ವಿಘ್ನೇಶ್ ಶಿವನ್ ಅವರಿಗೆ ಧನುಷ್ ಅವರ ಬಗ್ಗೆ ಅಪಾರ ಗೌರವವಿದೆ. ಜೊತೆಗೆ, ಅವರನ್ನು ಕಳೆದುಕೊಂಡಿದ್ದಕ್ಕೆ ಸಾಕಷ್ಟು ಬೇಸರ ಕೂಡ ಇದೆ. ಕ್ಷಮೆ ಕೇಳಿ ಈ ಪ್ರಕರಣವನ್ನು ಕೊನೆಗೊಳಿಸಿಕೊಳ್ಳುತ್ತಾರಾ ಅಥವಾ ಇವರ ಕಿತ್ತಾಟ ಹೀಗೆಯೇ ಮುಂದುವರಿಯುತ್ತದೆ ಎಂಬುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.