Headlines

ಧನ್ವೀರ್ ಸಿನಿಮಾಕ್ಕೆ ಆರಂಭದಲ್ಲೇ ವಿಘ್ನ, ರಾಜ್ಯದಾದ್ಯಂತ ಶೋಗಳು ರದ್ದು

ಧನ್ವೀರ್ ಸಿನಿಮಾಕ್ಕೆ ಆರಂಭದಲ್ಲೇ ವಿಘ್ನ, ರಾಜ್ಯದಾದ್ಯಂತ ಶೋಗಳು ರದ್ದು


ದರ್ಶನ್ (ದರ್ಶನ್) ಆಪ್ತ ಎಂದೆಂದಿಗೂ ಗುರುತಿಸಿಕೊಂಡಿರುವ ಧನ್ವೀರ್ ಗೌಡ ನಟನೆಯ ‘ಹಯಗ್ರೀವ’ ಸಿನಿಮಾ ಇಂದು (ಫೆಬ್ರವರಿ 27) ಬಿಡುಗಡೆಯಾಗಬೇಕಿತ್ತು, ಸಿನಿಮಾಕ್ಕೆ ಸಾಕಷ್ಟು ಪ್ರಚಾರವನ್ನೂ ಸಹ ಧನ್ವೀರ್ ಮತ್ತು ತಂಡ ಮಾಡಿತ್ತು, ದರ್ಶನ್ ಖಾತೆಯಿಂದ ‘ಹಯಗ್ರೀವ’ ಸಿನಿಮಾದ ಪೋಸ್ಟ್ ಬಗ್ಗೆ ಸಹ ಶೇರ್ ಮಾಡಿ ಶುಭಾಶಯ ಕೋರಲಾಗಿದೆ. ಆದರೆ ಇದೀಗ ಸಿನಿಮಾಕ್ಕೆ ಮೊದಲ ಹೆಜ್ಜೆಯನ್ನೇ ವಿಘ್ನ ಎದುರಾಗಿದೆ. ಸಿನಿಮಾದ ಬೆಳಿಗ್ಗೆ ಮತ್ತು ಮಧ್ಯಾಹ್ನದ ಶೋಗಳು ರಾಜ್ಯದಾದ್ಯಂತ ಸಾಮೂಹಿಕವಾಗಿ ರದ್ದಾಗಿವೆ.

‘ಹಯಗ್ರೀವ’ ಸಿನಿಮಾ ಇಂದು (ಫೆಬ್ರವರಿ 27) ಬಿಡುಗಡೆಯಾಗಬೇಕಿತ್ತು, ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾದ ಮೊದಲ ಎರಡು ಶೋಗಳು ಅಂದರೆ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 1:30ಕ್ಕೆ ಪ್ರದರ್ಶನ ಆಗಬೇಕಿದ್ದ ಶೋಗಳು ರದ್ದಾಗಿವೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚಿತ್ರತಂಡ, ‘ಅನಿವಾರ್ಯ ಕಾರಣಗಳಿಂದ ನಮ್ಮ ಸಿನಿಮಾದ ದಿನದ ಮೊದಲ ಎರಡೂ ಶೋಗಳು ರದ್ದಾಗಿದ್ದು, ಸಂಜೆ 4:30 ರ ಶೋನಿಂದ ರಾಜ್ಯದಾದ್ಯಂತ ಅದ್ಧೂರಿಯಾಗಿ ಪ್ರಾರಂಭ ಆಗುತ್ತವೆ, ನೋಡಿ ಹರಸಿ’ ನಟ ಧನ್ವೀರ್.

ಧನ್ವೀರ್ ಗೌಡ ನಟಿಸಿರುವ ‘ಹಯಗ್ರೀವ’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿರುವ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ‘ಹಯಗ್ರೀವ’ ಸಿನಿಮಾದಲ್ಲಿ ಹಿಂದೂ ದೇವತೆಗಳ ಉಲ್ಲೇಖ ಇದೆಯಂತೆ. ಕೆಲವು ದೃಶ್ಯಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳು ಅಥವಾ ಮುಖವನ್ನು ತಿರುಚಿರುವ ದೃಶ್ಯಗಳು ಸಹ ಇವೆ. ಇದೇ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಸಿನಿಮಾವನ್ನು ರಿವೈಸ್ ಕಮಿಟಿಗೆ ಕಳಿಸಿದ್ದು, ರಿವೈಸ್ ಸಮಿತಿ ಸಿನಿಮಾ ನೋಡಿದ ಬಳಿಕವಷ್ಟೆ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗಲಿದೆ. ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ವಿಳಂಬವಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಕೇಸ್: ಪೊಲೀಸರ ತನಿಖೆ ಬಗ್ಗೆ ಅನುಮಾನ; ಗೃಹ ಸಚಿವರ ಪ್ರತಿಕ್ರಿಯೆ ಇಲ್ಲಿದೆ..

ನಿಯಮದ ಪ್ರಕಾರ ರಿವೈಸ್ ಕಮಿಟಿಯವರಿಗೆ ಸಿನಿಮಾವನ್ನು ನೋಡಿ ಕಟ್ಗಳನ್ನು ಸೂಚಿಸಲು ಅಥವಾ ಪ್ರಮಾಣ ಪತ್ರ ನೀಡಲು ಹದಿನೈದು ದಿನಗಳ ಕಾಲಾವಕಾಶ ಇರುತ್ತದೆ. ಆದರೆ ರಿವೈಸ್ ಕಮಿಟಿಯವರು ಇಂದೇ ಸೆನ್ಸಾರ್ ಪ್ರಮಾಣ ಪತ್ರ ನೀಡುವ ಭರವಸೆಯಲ್ಲಿರುವ ‘ಹಯಗ್ರೀವ’ ಚಿತ್ರತಂಡ ಇಂದು ಸಂಜೆಯಿಂದಲೇ ಪದರ್ಶನ ಆರಂಭಿಸುವುದಾಗಿ ಭರವಸೆ ನೀಡಿವೆ.

‘ಹಯಗ್ರೀವ’ ಸಿನಿಮಾದಲ್ಲಿ ಧನ್ವೀರ್ ಗೌಡ ಮತ್ತು ಸಂಜನಾ ಆನಂದ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ರಘು ಕುಮಾರ್, ಸಿನಿಮಾದಲ್ಲಿ ಶರತ್ ಲೋಹಿತಾಶ್ವ, ಸಾಧುಕೋಕಿಲ, ಶೋಭರಾಜ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸಮೃದ್ಧಿ ಮಂಜುನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *