Headlines

‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ

‘ಅದಕ್ಕೆ ದೊಡ್ಡೋರು ಅನ್ನೋದು’; ಸುದೀಪ್ ಬಗ್ಗೆ ಧನ್ವೀರ್ ಮೆಚ್ಚುಗೆ


ಚಿತ್ರರಂಗ ಒಟ್ಟಾಗಿ ಸಾಗಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಇದಕ್ಕೆ ಪ್ರತಿಕೂಲವಾಗಿ ಘಟನೆಗಳು ನಡೆದಿವೆ. ದರ್ಶನ್ ಬಗ್ಗೆ ಸುದೀಪ್ ಅವರು ಸದಾ ಮೆಚ್ಚುಗೆ ಸೂಚಿಸಿ ಮಾತನಾಡುತ್ತಾರೆ. ಆದರೆ, ಇಬ್ಬರ ಅಭಿಮಾನಿಗಳ ಮಧ್ಯೆ ಆಗಾಗ ಕಿರಿಕ್ ಗಳು ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾತನಾಡಿದ ಸುದೀಪ್ (ಸುದೀಪ್) ಅವರು, ದರ್ಶನ್ ಆಪ್ತ ಧನ್ವೀರ್ ಬಗ್ಗೆ ಮಾತನಾಡಿದ್ದರು. ಈ ವಿಷಯಕ್ಕೆ ಧನ್ವೀರ್ ಪ್ರತಿಕ್ರಿಯೆ.

ವಿನಯ್ ಹಾಗೂ ಧನ್ವೀರ್ ಪೋಸ್ಟ್ ಹಾಕಿಕೊಂಡು ಕಿರಿಕ್ ಮಾಡಿಕೊಂಡ ಸುದೀಪ್ ಮಾತನಾಡಿದ್ದರು. ‘ನನಗೆ ಧನ್ವೀರ್ ಹಾಗೂ ವಿನಯ್ ಇಬ್ಬರೂ ಒಂದೇ. ಅವರಿಬ್ಬರೂ ಚಿತ್ರರಂಗದ ಯಂಗ್‌ಸ್ಟರ್ಸ್. ಧನ್ವೀರ್ನ ನಾನು ನೋಡಿದ್ದೇನೆ. ಅವರು ಆ ಹೀರೋ ಜೊತೆ ಹುಡುಕೋದು ನೋಡಿದ್ದಾರೆ. ಆದರೂ ಆ ಹೀರೋ ಜೊತೆ ನಿಲ್ಲುತ್ತೇನೆ ಎಂಬ ನೀಯತ್ತು ಇದೆಯಲ್ಲ ಅದು ಬೇಕು’ ಎಂದಿದ್ದರು ಕಿಚ್ಚ.

ಈ ವಿಷಯವಾಗಿ ಧನ್ವೀರ್ ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಊ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಾನು ಆ ವಿಡಿಯೋ ನೋಡಿದೆ. ದೊಡ್ಡವರು ಎಂಬುದು ಹೇಳೋದು ಇದಕ್ಕೆ. ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಅದಕ್ಕೆ ಅವರು ದೊಡ್ಡ ಮಾತು ಆಡ್ತಾರೆ’ ಎಂದರು ಧನ್ವೀರ್.

ಇದೇ ವೇಳೆ ವಿನಯ್ ಗೌಡಗೆ ಟಾಂಗ್ ಕೊಟ್ಟಿದ್ದಾರೆ. ‘ಆಗದೆ ಇದ್ದವರು ಎಲ್ಲೋ ಕುಳಿತು ಮಾತನಾಡ್ತಾರೆ’. ‘ದೊಡ್ಡವರು ಮಾತನಾಡೋದು ಕೇಳಿ ನಮಗೆ ಖುಷಿ ಆಯ್ತು’ ಎಂದು ಧನ್ವೀರ್ ಹೇಳಿದ್ದಾರೆ.

ಇದನ್ನೂ ಓದಿ: ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್

ಸುದೀಪ್‌ಗೆ ಅನೇಕ ಯುವ ಹೀರೋಗಳನ್ನು ತೋರಿಸುತ್ತಾರೆ. ಈ ನಿಯತ್ತು ಸುದೀಪ್ ಗೆ ಇಷ್ಟ. ಬೇರೆ ನಟರಿಗೂ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ ಎಂದರೆ ಅದು ಹೆಮ್ಮೆ ಪಡೋ ವಿಷಯವೇ ಸರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *