Headlines

'ನೀನು ಕರಿಯ, ನನಗೆ ಬೆಳ್ಳಗಿದ್ದವನು ಬೇಕಿತ್ತು..' ಲವರ್‌ ಜೊತೆ ಸೇರಿ ಗಂಡನ ಕೊ*ಲೆಗೈದು ಆಸ್ಕರ್ ರೇಂಜ್ ಆಕ್ಟಿಂಗ್‌ ಮಾಡಿದ ಪತ್ನಿ

'ನೀನು ಕರಿಯ, ನನಗೆ ಬೆಳ್ಳಗಿದ್ದವನು ಬೇಕಿತ್ತು..' ಲವರ್‌ ಜೊತೆ ಸೇರಿ ಗಂಡನ ಕೊ*ಲೆಗೈದು ಆಸ್ಕರ್ ರೇಂಜ್ ಆಕ್ಟಿಂಗ್‌ ಮಾಡಿದ ಪತ್ನಿ

'ನೀನು ಕರಿಯ, ನನಗೆ ಬೆಳ್ಳಗಿದ್ದವನು ಬೇಕಿತ್ತು..' ಲವರ್‌ ಜೊತೆ ಸೇರಿ ಗಂಡನ ಕೊ*ಲೆಗೈದು ಆಸ್ಕರ್ ರೇಂಜ್ ಆಕ್ಟಿಂಗ್‌ ಮಾಡಿದ ಪತ್ನಿ
ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ, ಪತಿಯ ಕಪ್ಪು ಬಣ್ಣವನ್ನು ದ್ವೇಷಿಸುತ್ತಿದ್ದ ಪತ್ನಿ, ತನ್ನ ಪ್ರಿಯಕರನೊಂದಿಗೆ ಸೇರಿ ಸುಪಾರಿ ಕಿಲ್ಲರ್ ಮೂಲಕ ಗಂಡನನ್ನು ಕೊಲೆ ಮಾಡಿಸಿದ್ದಾಳೆ. ನಂತರ ದರೋಡೆಯ ನಾಟಕವಾಡಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದರೂ, ತನಿಖೆಯ ವೇಳೆ ಆಕೆಯ ಅಸಲಿ ಮುಖ ಬಯಲಾಗಿದೆ.
ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ ನಡೆದ ಈ ಬೆಚ್ಚಿಬೀಳಿಸುವ ಕೊಲೆ ಪ್ರಕರಣದ ಇನ್ನಷ್ಟು ವಿವರಗಳು ಬಹಿರಂಗವಾಗಿದೆ. ಸಾವು ಕಂಡಿರುವ ದೇವಕೃಷ್ಣ ಪುರೋಹಿತ್ ಅವರ ಪತ್ನಿ ಪ್ರಿಯಾಂಕಾ ಪುರೋಹಿತ್, ತನ್ನ ಪತಿಗೆ ಪದೇ ಪದೇ ಬಣ್ಣದ ವಿಚಾರವಾಗಿ ಅವಮಾನಿಸುತ್ತಿದ್ದಳು. "ನೀನು ಕಪ್ಪು ಮೈಬಣ್ಣದವನು, ನೀನು ನನಗೆ ಅರ್ಹನಲ್ಲ. ನನಗಿಂತ ಉತ್ತಮವಾದ ವ್ಯಕ್ತಿ ನನಗೆ ಬೇಕು" ಎಂದು ಹೀಯಾಳಿಸುತ್ತಿದ್ದಳು. ಈ ಬಣ್ಣದ ದ್ವೇಷ ಮತ್ತು ಪ್ರಿಯಕರ ಕಮಲೇಶ್ ಜೊತೆಗಿನ ಅಕ್ರಮ ಸಂಬಂಧವೇ ಕೊಲೆಗೆ ಪ್ರಮುಖ ಕಾರಣವಾಗಿದೆ.

ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಕಮಲೇಶ್ ಒಂದಾಗಲು ದೇವಕೃಷ್ಣ ಅಡ್ಡಿಯಾಗಿದ್ದ. ತನ್ನ ಹಾದಿಯಿಂದ ತಪ್ಪಿಸಲು ಈ ಜೋಡಿಯು ಭೀಕರ ಸಂಚು ರೂಪಿಸಿತು. ಇದಕ್ಕಾಗಿ ಕಮಲೇಶ್ ಸುಮಾರು ₹1 ಲಕ್ಷ ಹಣ ನೀಡಿ ಸುಪಾರಿ ಕಿಲ್ಲರ್ ಒಬ್ಬನನ್ನು ನೇಮಿಸಿದ್ದ. ಈ ಕಿರಾತಕ ದೇವಕೃಷ್ಣ ಮಲಗಿದ್ದ ಕೋಣೆಗೆ ನುಗ್ಗಿ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದ.

ಕೊಲೆಯ ನಂತರ ಪ್ರಿಯಾಂಕಾ ಪ್ರಕರಣಕ್ಕೆ ‘ದರೋಡೆ’ಯ ಬಣ್ಣ ಬಳಿಯಲು ಯತ್ನಿಸಿದ್ದಳು. ಮನೆಗೆ ನುಗ್ಗಿದ ಅಪರಿಚಿತರು ಹಣ ಮತ್ತು ಒಡವೆಗಳನ್ನು ಲೂಟಿ ಮಾಡಿದ್ದಾರೆ ಹಾಗೂ ವಿರೋಧಿಸಿದ ತನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ಕಥೆ ಹೇಳಿದ್ದಳು. ಅಷ್ಟೇ ಅಲ್ಲದೆ, ಕ್ಯಾಮೆರಾಗಳ ಮುಂದೆ ಜೋರಾಗಿ ಅಳುತ್ತಾ ‘ಆಸ್ಕರ್ ಪ್ರಶಸ್ತಿ’ ಬರುವಂಥ ನಟನೆ ಮಾಡಿದ್ದಳು.

ಪೊಲೀಸರ ತನಿಖೆ ವೇಳೆ ಪ್ರಿಯಾಂಕಾ ನೀಡಿದ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದವು. ಮನೆಯಿಂದ ಕಳುವಾಗಿದೆ ಎನ್ನಲಾದ ಒಡವೆಗಳು ಮನೆಯ ಒಳಗಡೆಯೇ ಪತ್ತೆಯಾದವು. ಇದಾದ ಬಳಿಕ ಪೊಲೀಸರು ಕಟ್ಟುನಿಟ್ಟಿನ ವಿಚಾರಣೆ ನಡೆಸಿದಾಗ ಕೊಲೆಯ ಅಸಲಿ ಸತ್ಯ ಹೊರಬಂದಿದೆ. ನೆಟ್ಟಿಗರು ಕೂಡ ಆಕೆಯ ಅಳುವಿನ ವಿಡಿಯೋ ನೋಡಿ ಇದು ಬರೀ ನಾಟಕ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಸಾಲೆ ವ್ಯಾಪಾರಿಯಾಗಿದ್ದ ದೇವಕೃಷ್ಣ ಅವರ ತಾಯಿ ತನ್ನ ಮಗನ ಸಾವಿನಿಂದ ಕಂಗಾಲಾಗಿದ್ದು, "ಆರೋಪಿಗಳನ್ನು ಈಗಲೇ ಕೊಂದು ಹಾಕಿ, ಇಲ್ಲದಿದ್ದರೆ ನಾನೇ ಅವರನ್ನು ಕೊಲ್ಲುತ್ತೇನೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪ್ರಿಯಾಂಕಾ ಮತ್ತು ಕಮಲೇಶ್‌ರನ್ನು ಬಂಧಿಸಿದ್ದಾರೆ. ಸುಪಾರಿ ಕಿಲ್ಲರ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *