ಮಂಗಳೂರು, (ಡಿಸೆಂಬರ್ 17): ಧರ್ಮಸ್ಥಳ ಪ್ರಕರಣಕ್ಕೆ (ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ)ಪ್ರಮುಖ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ (ಮುಖವಾಡ ಚಿನ್ನಯ್ಯ) ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ. ಜಾಮೀನು ಸಿಕ್ಕಿದ್ದರೂ ಸಹ ಶ್ಯೂರಿಟಿ ಇಲ್ಲದೇ ಶಿವಮೊಗ್ಗದ ಜೈಲಿನಲ್ಲಿ ಚಿನ್ನಯ್ಯ ಮಂಕಾಗಿದ್ದರೆ, ಸಹ ಕೈದಿಯೊಂದಿಗೆ ಹೆಚ್ಚು ಮಾತನಾಡದೆ ಶರಣಾಗಿದ್ದ. ಆದರೆ, ಇದೀಗ ಒಂದು ಲಕ್ಷ ಬಾಂಡ್, ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್‌ಗೆ ಶ್ಯೂರಿಟಿ ನೀಡಲಾಗುತ್ತದೆ. ಈ ಆರೋಪಿ ಬುರುಡೆ ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು. ಹೀಗಾಗಿ ಚಿನ್ನಯ್ಯನಿಗೆ ಜಾಮೀನು ಸಿಕ್ಕು 23 ದಿನಗಳ ಬಳಿಕ ಬಂಧನದಿಂದ ಮುಕ್ಸಿ ಸಿಕ್ಕಿದ್ದು, ಆಚೆ ಬಂದ ಬಳಿಕ ಈ ಪ್ರಕರಣದ ಬಗ್ಗೆ ಏನಾದರೂ ಸ್ಫೋಟಕ ಅಂಶ ಬಿಚ್ಚಿಡುತ್ತದೆ ಎಂಬ ಕುತೂಹಲವೂ ಇದೆ.
ಇಂದು (ಡಿಸೆಂಬರ್ 17) ಚಿನ್ನಯ್ಯ ಪತ್ನಿ ಮಲ್ಲಿಕಾ ಒಂದು ಲಕ್ಷ ಬಾಂಡ್ ಕೊಟ್ಟಿದ್ದು, ಜೊತೆಗೆ ಇಬ್ಬರು ಜಾಮೀನುದಾರರು ಮತ್ತು ಒಬ್ಬರ ಶ್ಯೂರಿಟಿ ಕೊಡಿಸಿದ್ದಾರೆ. ಬಳಿಕ ಕೋರ್ಟ್, ಡಿಸೆಂಬರ್ 17 ರಂದು ಚಿನ್ನಯ್ಯನ ಬಿಡುಗಡೆಗೆ ಆದೇಶ ಹೊರಡಿಸಿದೆ. ಸದ್ಯ ಕೋರ್ಟಿನ ಆದೇಶ ಹಿಡಿದು ಮಲ್ಲಿಕಾ ಮತ್ತು ಸಹೋದರಿ ರತ್ನ ಶಿವಮೊಗ್ಗ ಜೈಲಿನತ್ತ ಪ್ರಯಾಣ ಬೆಳೆಸಿದ್ದು, ಇಂದು ಸಂಜೆ ವೇಳೆಗೆ ಶಿವಮೊಗ್ಗ ಜೈಲಿನಿಂದ ಚಿನ್ನಯ್ಯನ ಬಿಡುಗಡೆಗೆ ಅವಕಾಶವಿದೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬಿಗ್ ರಿಲೀಫ್
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಾಲ್ಕು ತಿಂಗಳಿನಿಂದ ಶಿವಮೊಗ್ಗ ಜೈಲಿನಲ್ಲಿ ಚಿನ್ನಯ್ಯನಿಗೆ ನವೆಂಬರ್ 24 ರಂದು ಜಾಮೀನು ಸಿಕ್ಕಿತ್ತು. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ, ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ.
ಜಾಮೀನು ಸಿಕ್ಕ ಬಳಿಕ ಹೊರಬರುವ ಖುಷಿಯಿಂದ ಚಿನ್ನನಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ಮಾಸ್ಕ್ ಮ್ಯಾನ್ ಮಂಕಾಗಿದ್ದ. ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನ ಬುರುಡೆ ಗ್ಯಾಂಗ್ ಸಹ ಅಂತರ ಕಾಯ್ದುಕೊಂಡಿತ್ತು.ಹೀಗಾಗಿ ಜಾಮೀನು ಆದೇಶದ ಬಳಿಕ 23 ದಿನಗಳಿಂದ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿರಬೇಕಿತ್ತು.
ಅ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್‌ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿದೆ. ಸೆ.6ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಅಂತಿಮವಾಗಿ ಜಾಮೀನು ಸಿಕ್ಕು 23 ದಿನಗಳ ಬಳಿಕ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾದ ನಂತರ, ಆಚೆ ಬಂದ ಬಳಿಕ ಧರ್ಮಸ್ಥಳದ ಪ್ರಕರಣದ ಬಗ್ಗೆ ಏನಾದರೂ ಮಾಹಿತಿ ತಿಳಿಯಬಹುದು ಎಂಬ ಕುತೂಹಲ ಮೂಡಿಸಿದೆ. ಇನ್ನು ತಮ್ಮ ವಿರುದ್ಧ ಏನಾದರೂ ಆರೋಪ ಮಾಡಬಹುದು ಎಂಬ ಆತಂಕದಲ್ಲಿ ಬುರುಡೆ ಗ್ಯಾಂಗ್ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.