Headlines

ಧರ್ಮಸ್ಥಳ ಬುರುಡೆ ಗ್ಯಾಂಗ್‌ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧ: ಚಾರ್ಜ್‌ಶೀಟಿನಲ್ಲೇನಿದೆ?

ಧರ್ಮಸ್ಥಳ ಬುರುಡೆ ಗ್ಯಾಂಗ್‌ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧ:  ಚಾರ್ಜ್‌ಶೀಟಿನಲ್ಲೇನಿದೆ?


ಬೆಂಗಳೂರು/ ಮಂಗಳೂರು, (ನವೆಂಬರ್ 19): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದು ಅಪಪ್ರಚಾರ ಪ್ರಕರಣ (ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ) ಜಾರ್ಜ್‌ಶೀಟ್ (ಚಾರ್ಜ್‌ಶೀಟ್) ಸಿದ್ಧವಾಗಿದೆ. ಮಹೇಶ್ ತಿಮರೋಡಿ, ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಸೇರಿ 6 ಮಂದಿ ವಿರುದ್ಧ ಒಟ್ಟು 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಿದ್ಧವಾಗಿದೆ.ವಿಶೇಷ ತನಿಖಾ ತಂಡ (SIT) ಗುರುವಾರ ಚಾರ್ಜ್‌ಶೀಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕೋರ್ಟ್‌ಗೆ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಚಿನ್ನಯ್ಯನನ್ನು ಬಂಧಿಸಲಾಗಿದೆ ಉಳಿದವರ ವಿಚಾರಣೆ ನಡೆಸಲಾಗಿದೆ. ಷಡ್ಯಂತ್ರ ರೂಪಿಸಿ , ಅಪಪ್ರಚಾರ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಸೂಚಿಸಲಾಗಿದೆ.

ಎಸ್ಐಟಿ ಮುಖ್ಯ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಸಿ.ಎನ್.ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಟಿ.ಜಯಂತ್, ವಿಠ್ಠಲಗೌಡ ಸೇರಿ ಒಟ್ಟು 6 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ಚಾರ್ಜ್ ಶೀಟ್ ನಲ್ಲಿ ತಲೆಬುರುಡೆ ತಂದಿದ್ದ ಸಿ.ಎನ್.ಚಿನ್ನಯ್ಯ, ಅದನ್ನು ತಂದುಕೊಟ್ಟವರ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ.

ಇದನ್ನೂ ಓದಿ: ಮಂಗಳೂರು: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಮುಸ್ಲಿಮರಿಂದ ಪಾದಯಾತ್ರೆ

ಹಾಗೇ ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಪ್ರೇರಣೆ ಕೊಟ್ಟಿದ್ದು ಯಾರು? ಬುರುಡೆ ತಂದುಕೊಟ್ಟಿದ್ದು ಯಾರು? ಎಲ್ಲಿಂದ ಬುರುಡೆ ತಂದಿದ್ದರು? ಬುರುಡೆ ವಿಚಾರದಲ್ಲಿ ಏನೇನು ಷಡ್ಯಂತ್ರ ನಡೆದಿದೆ? ತಲೆಬುರುಡೆ ಎಲ್ಲಿಗೆ ತೆಗೆದುಕೊಂಡು ಹೋಗಿದ್ದರು? ಬುರುಡೆಟ್ಕೊಂಡು ಏನೇನು ಷಡ್ಯಂತ್ರ ಮಾಡಿರುವ ಅಂಶವನ್ನು ಎಸ್‌ಐಟಿ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ತಾನು 100 ಕ್ಕೂ ಹೆಚ್ಚು ಶವಗಳನ್ನು ಹೂತ ಕಾಣಿಸಿಕೊಂಡಿದ್ದಾನೆ. ಈ ಕುರಿತು ಸಾಕಷ್ಟು ಕಾರ್ಯಾಚರಣೆಗಳು ನಡೆದಿತ್ತು. ಇದು ಧರ್ಮಸ್ಥಳದ ವಿರುದ್ಧ ಷಡ್ಯಂತ್ರವೆಂದು ಆಕ್ರೋಶಗಳು ಸಹ ಕಂಡುಬಂದಿವೆ. ಇನ್ನು ಈ ಸಂಬಂಧ ಬುರುಡೆ ತಂದಿದ್ದ ಚಿನ್ನಯ್ಯನನ್ನು ಎಸ್ ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಬಳಿಕ ಅರೆಸ್ಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *