ಆಸ್ಕರ್​ ಅವಾರ್ಡ್ಸ್​​​​ಗೆ ನೆನಪಾಗಿಲ್ಲ ಬಾಲಿವುಡ್​ ಲೆಜೆಂಡ್ ನಟ ಧರ್ಮೇಂದ್ರ

ಆಸ್ಕರ್​ ಅವಾರ್ಡ್ಸ್​​​​ಗೆ ನೆನಪಾಗಿಲ್ಲ ಬಾಲಿವುಡ್​ ಲೆಜೆಂಡ್ ನಟ ಧರ್ಮೇಂದ್ರ


ಆಸ್ಕರ್ ಅವಾರ್ಡ್ಸ್ ಗೆ ನೆನಪಾಗಿಲ್ಲ ಬಾಲಿವುಡ್ ಲೆಜೆಂಡ್ ನಟ ಧರ್ಮೇಂದ್ರ

ಆಸ್ಕರ್ 2026 ನವೀಕರಣಗಳು:98ನೇ ಸಾಲಿ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ ಸೋಮವಾರ ಭಾರತೀಯ ಕಾಲಮಾನದ ಪ್ರಕಾರ (ಮಾರ್ಚ್ 16) ಬೆಳಿಗ್ಗೆ ಆರಂಭವಾಗಿದೆ. ಭಾರತ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಕಾರ್ಯಕ್ರಮದಲ್ಲಿ ಮಿಂಚಿದರು. ಅಚ್ಚರಿಯೆಂದರೆ, ಬಾಲಿವುಡ್ ದಂತಕಥೆ ಧರ್ಮೇಂದ್ರ ಅವರಿಗೆ ಆಸ್ಕರ್ 2026 ‘ಮೆಮೋರಿಯಮ್’ ಸೇರಿಸಲಾಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಭಾರತ ಮೂಲದ ಅಮೆರಿಕ ನಿರ್ದೇಶಕಿ ಗೀತಾ ಕೂಡ ಆಸ್ಕರ್ ಕಾರ್ಯಕ್ರಮದಲ್ಲಿ ಇದ್ದರು. ‘ದಿ ಪರ್ಫೆಕ್ಟ್ ನೇಬರ್’ (ಬೆಸ್ಟ್ ಡಾಕ್ಯುಮೆಂಟರಿ ಫೀಚರ್) ಹಾಗೂ ‘ದಿ ಡೆವಿಲ್’ (ದಿ ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್) ನಾಮಿನೇಟ್ ಆಗಿದ್ದವು. ಆದರೆ, ಅವಾರ್ಡ್ ಗೆಲ್ಲಲು ಸಾಧ್ಯವಾಗಿಲ್ಲ.

ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ಧರ್ಮೇಂದ್ರ ಅವರು ಕಳೆದ ವರ್ಷ ಪೂರೈಸಿದರು. ಅವರು ಭಾರತೀಯ ಮತ್ತು ಜಾಗತಿಕ ಸಿನಿಮಾಗೆ ಹಲವು ಕಾಲ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಇವರನ್ನು ಅಕಾಡೆಮಿ ಅವಾರ್ಡ್ಸ್ ನಲ್ಲಿ ಗೌರವಿಸಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರ ಹೆಸರು ಇರಲೇ ಇಲ್ಲ. ಈ ವರ್ಷ ಅಕಾಡೆಮಿಯ ಗೌರವವು ಇತರ ಸಿನಿಮಾ ರಂಗದ ದಂತಕಥೆಗಳ ಮೇಲೆ ಆಧಾರಿತವಾಗಿದೆ.

ಇದನ್ನೂ ಓದಿ: ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ

ಕಾಮಿಡಿಯನ್ ಕೋನನ್ ಒ ಬ್ರೇನ್ ಅವವರು ಈ ಬಾರಿ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ‘ಸಿನ್ನರ್ಸ್’ ಸಿನಿಮಾ ಬರೋಬ್ಬರಿ 17 ವಿಭಾಗಳಲ್ಲಿ ನಾಮ ನಿರ್ದೇಶನಗೊಂಡಿದೆ.
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಕಳೆದ ನವೆಂಬರ್ 24 ರಂದು ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಗೂ ಬದುಕುಳಿಯಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *