ಧಾರವಾಡ, ಜ.21: 2025 ನವೆಂಬರ್ 11 ರಂದು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರದಲ್ಲಿ ಬಾಬಾಜಾನ್ (ಬಾಬಾ ಜಾನ್ ) ಚಿನ್ನೂರು(51) ಎಂಬ ವ್ಯಕ್ತಿ ಹೃದಯಘಾತದಿಂದ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಅವರ ಮನೆಯವರು ಹೃದಯಘಾತವಲ್ಲ, ಕೊಲೆ ಎಂದು ಹೇಳಿದರು. ಇದೀಗ ಹೂತಿದ್ದ ಬಾಬಾಜಾನ್ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
NWKSRTC (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಯಲ್ಲಿ ಡ್ರೈವರ್ ಆಗಿದ್ದ ಬಾಬಾಜಾನ್ ಅವರು, ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಇಬ್ಬರು ಸಂತೋಷದ ಜೀವನ ನಡೆಸುತ್ತಿದ್ದರು. ನವೆಂಬರ್ 11 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಾಬಾಜಾನ್ ಅವರ ಮೃತ ದೇಹವನ್ನು ಸ್ವಗ್ರಾಮ ಭದ್ರಾಪುರಕ್ಕೆ ತಂದು ಕುಟುಂಬ ತರಾತುರಿಯಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅದಾದ ಬಳಿಕ ಸೊಸೆಯೇ ತಮ್ಮ ಮಗನನ್ನು ಹತ್ಯೆ ಮಾಡಿದ್ದಾಳೆ ಎಂದು ಬಾಬಾಜಾನ್ ಅವರ ಅನುಮತಿ ದೂರಿದ್ದಾರೆ. ಯಾವುದೋ ದುರುದ್ದೇಶದಿಂದ ಮಗನ ಹತ್ಯೆಯಾಗಿದೆ ಎಂದು ಪೊಲೀಸರಿಗೆ ದೂರಿನಲ್ಲಿ ಕಳುಹಿಸಲಾಗಿದೆ.
ಇದನ್ನೂ ಓದಿ: ಮದ್ವೆಗೂ ಮುಂಚೆ ಪ್ರಗ್ನೆಂಟ್, ಹುಟ್ಟಿದ ಕ್ಷಣ ಹಸುಗೂಸು ಸಾವು:ಸಾವಿನ ಸುತ್ತ ಅನುಮಾನದ ಹುತ್ತ
ನಮ್ಮ ಮಗ ಸತ್ತ ನಂತರ ಅವನ ಮರಣೋತ್ತರ ಪರೀಕ್ಷೆ ಮಾಡಿಲ್ಲ, ಯಾವ ಕಾರಣಕ್ಕೆ ಮಾಡಿಲ್ಲ ಎಂಬುದು ತಿಳಿಯಬೇಕು. ಅವನಿಗೆ ನಿಜವಾಗಿಯೂ ಹೃದಯಾಘಾತ ಆಗಿದ್ದೀಯಾ? ಎಂಬುದು ತಿಳಿಯಬೇಕು. ಇದರ ಹಿಂದೆ ನಮ್ಮ ಸೊಸೆಯ ಕೈವಾಡ ಇದೆ ಎಂದು ಬಾಬಾಜಾನ್ ಅವರ ಹೆತ್ತವರ ಆರೋಪವಾಗಿದೆ. ಈ ಕಾರಣದಿಂದ ಎಸ್ಪಿಗೆ ದೂರು ನೀಡಲಾಗಿದೆ. ಇದೀಗ ತಹಶೀಲ್ದಾರ್ ಮತ್ತೆ ಮರಣೋತ್ತರ ಪರೀಕ್ಷೆಗಾಗಿ ಭದ್ರಾಪುರದ ಸ್ಮಶಾನದಲ್ಲಿ ಹೂತಿದ್ದ ಬಾಬಾಜಾನ್ ಶವವನ್ನು ಹೊರತೆಗೆಯಲಾಗಿದೆ. ಈ ಪರೀಕ್ಷೆಯ ನಂತರ ಇದು ಕೊಲೆಯೋ ಅಥವಾ ಹೃದಯಘಾತವೋ ಎಂಬುದು ತಿಳಿಯಲಿದೆ. ಮರಣೋತ್ತರ ನಂತರ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೂತಿದ್ದ ಬಾಬಾಜಾನ್ ಶವವನ್ನು ಹೊರತೆಗೆಯುವ ಪ್ರಕ್ರಿಯೆಗಳು ಮುಗಿದಿವೆ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ