ಸರಸ್ವತಿ ಸ್ವಾಮೀಜಿ ಮಹಿಳೆಯಿಂದ ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಸ್ವಾಮೀಜಿ ತನ್ನನ್ನು ಬ್ಲಾಕ್‌ಮೇಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
17

Image Credit : Asianet News
ಮಠದಲ್ಲಿಯೇ ಬೆತ್ತಲಾದ ಸ್ವಾಮಿ; ಖಾವಿ ಧರಿಸಿದ್ರು ಕಡಿಮೆಯಾಗದ ಚಪಲ
ಧಾರವಾಡ: ಜಿಲ್ಲೆಯ ಕವಲಗೇರಿ ಮಠದ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿಯ ಕಾಮ ಪುರಾಣ ಬಯಲಾಗಿದೆ. ಮಠದ ಆವರಣದಲ್ಲಿ ಬೆತ್ತಲೆಯಾಗಿ ಮಹಿಳೆಯಿಂದ ಎಣ್ಣೆಮ ಮಸಾಜ್ ಮಾಡಿಸಿಕೊಂಡಿರುವ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದ್ದು, ಸ್ವಾಮೀಜಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
27
Image Credit : Asianet News
ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಗ್ರಾಮಸ್ಥರ ಮುಂದೆ ಸನ್ಯಾಸಿಯಂತೆ ಕಾಣಿಸಿಕೊಂಡಿದ್ದ ಸರಸ್ವತಿ ಸ್ವಾಮಿಗೆ 60 ವರ್ಷವಾದ್ರು ಚಪಲ ಮಾತ್ರ ಕಡಿಮೆಯಾಗಿಲ್ಲ. ಗ್ರಾಮಸ್ಥರ ಆಧ್ಯಾತ್ಮಿಕ ಕೇಂದ್ರವಾಗಿದ್ದ ಮಠವನ್ನೇ ಸರಸ್ವತಿ ಸ್ವಾಮಿ ಮಸಾಜ್ ಪಾರ್ಲರ್ ಆಗಿ ಮಾಡಿಕೊಂಡಿದ್ದು ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವನ್ನುಂಟು ಮಾಡಿದೆ.
37
Image Credit : Asianet News
ಬೆತ್ತಲೆಯಾಗಿ ಎಣ್ಣೆ ಮಸಾಜ್
ಸಂಪೂರ್ಣ ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸಿಕೊಂಡ ಸರಸ್ವತಿ ಸ್ವಾಮಿ, ಮಹಿಳೆ ಮುಂದೆಯೇ ನಗ್ನವಾಗಿ ಸ್ನಾನ ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಎಣ್ಣೆ ಹಚ್ಚಿಕೊಂಡ ನಂತ್ರ ಸ್ವಾಮಿಗೆ ಬಿಸಿನೀರಿನ ಸ್ನಾನ ಬೇಕೇ ಬೇಕಂತೆ. ಇದೀಗ ಕಳ್ಳ ಸ್ವಾಮಿಯ ಕಾಮದಾಟದ ಹುಚ್ಚಾಟ ಎಲ್ಲರ ಮುಂದೆ ಖುಲ್ಲಂ ಖುಲ್ಲಾ ಆಗಿದೆ.
47
Image Credit : Asianet News
ಗ್ರಾಮಸ್ಥರಿಂದ ಆಕ್ರೋಶ
ಈ ವಿಷಯ ತಿಳಿಯುತ್ತಿದ್ದಂತೆ ಸರಸ್ವತಿ ಸ್ವಾಮಿ ವಿರುದ್ಧ ಕವಲಗೇರಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ನಂತರ ಸ್ವಾಮಿಯನ್ನು ಮಠದಿಂದಲೂ ಹೊರಗೆ ಹಾಕಲಾಗಿತ್ತು. ಆ ಬಳಿಕ ಗ್ರಾಮದ ಮತ್ತೊಂದು ಗುಂಪು ಸ್ವಾಮಿಯನ್ನು ಮತ್ತೆ ಮಠಕ್ಕೆ ಕರೆದುಕೊಂಡು ಬಂದಿದ್ದಾರೆ.
57
Image Credit : Asianet News
ವಿಡಿಯೋ ವೈರಲ್ ಆಗಿದ್ದು ಹೇಗೆ?
ಸುಮಾರು 5 ಜನರ ಗುಂಪು ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮಿಯನ್ನು ಬ್ಲಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಗ್ರಾಮದ ವ್ಯಕ್ತಿಯೊಬ್ಬರ ಸಮ್ಮುಖದಲ್ಲಿ 10 ಲಕ್ಷಕ್ಕೆ ಡೀಲ್ ಓಕೆಯಾಗಿದೆ. ನಂತರ ನಾಲ್ವರನ್ನು ಮಠಕ್ಕೆ ಕರೆಸಿಕೊಂಡ ಸ್ವಾಮಿ 7 ಲಕ್ಷ ರೂ. ನೀಡಿದ್ದು, ಬಾಕಿ ಹಣ ನೀಡದ್ದಕ್ಕೆ ಗ್ಯಾಂಗ್ ವಿಡಿಯೋ ವೈರಲ್ ಮಾಡಿದೆ.
67
Image Credit : Asianet News
ಮಹಿಳೆ ಸ್ವಲ್ಪ ಪರಿಚಯ ಎಂದ ಸ್ವಾಮಿ
77
Image Credit : Asianet News