
ಧಾರವಾಡ, ಮಾರ್ಚ್ 25: ಜಿಲ್ಲೆಯಲ್ಲಿ ಮಾಜಿ ಶಾಸಕನ ಪುತ್ರನ ಹತ್ಯೆ ಪ್ರಕರಣ ಭಾರೀ ತಿರುವು ಪಡೆದಿದ್ದು, ಘಟನೆ ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ಮತ್ತಷ್ಟು ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವ ಧಾರವಾಡ (ಧಾರವಾಡ) ತಾಲೂಕಿನ ರಾಮಾಪುರ ಅರಣ್ಯ ಪ್ರದೇಶದ ಕಾರಿನೊಳಗೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಮಂಗಳವಾರ ಇತ್ತು. ಈ ಪ್ರಕರಣದಲ್ಲಿ ಮೂವರಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಿಳೆಗೆ ಸಾಲದ ರೂಪದಲ್ಲಿ ಹಣ ನೀಡಿದ್ದ ರಾಜು
ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ಯೋಜನೆ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಸಿಗದಷ್ಟು ಸುಟ್ಟು ಕರಕಲಾದ ರಾಜುನ ಶವ ಸಿಕ್ಕಿತ್ತು. ಈ ಘಟನೆಯು ಎಲ್ಲೆಡೆ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಮಿಂಚಿನ ಕಾರ್ಯಾಚರಣೆಯಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಮೃತನಾಗಿರುವ ಅನೈತಿಕ ಸಂಭಂದ ಹಿನ್ನೆಲೆ ಕೊಲೆ ನಡೆದಿದೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರಾಜು ಬೋಳಶೆಟ್ಟಿ, ದೈಹಿಕ ಸಂಪರ್ಕಕ್ಕೆ ಬಂದಾಗ ಆಕೆಗೆ ಹಣ ನೀಡುತ್ತಿದ್ದ. ಸಾಲದ ರೂಪದಲ್ಲಿ ಮಹಿಳೆಗೆ ಹಣ ನೀಡುತ್ತಿದ್ದ ರಾಜು, 2 ಲಕ್ಷ ರೂ. ಗೂ ಹೆಚ್ಚು ಹಣ ಕೊಟ್ಟಿದ್ದ. ಇದೇ ವಿಚಾರಕ್ಕೆ ಮಹಿಳೆ ಹಾಗೂ ರಾಜು ನಡುವೆ ಮನಸ್ತಾಪ. ನಿನ್ನೆಯೂ ಆತ ದೈಹಿಕ ಸಂಪರ್ಕಕ್ಕಾಗಿ ಹೊಲಕ್ಕೆ ಮಹಿಳೆಯನ್ನು ಕರೆದಿದ್ದಾಳೆ. ಇದೆ ವೇಳೆ ಮಹಿಳೆ, ಆಕೆಯ ಮಗ ಹಾಗೂ ಆಕೆಯ ಪ್ರಿಯಕರ ಸೇರಿ ಈ ಕೃತ್ಯವೆಸಗಿದ್ದಾರೆ.
ಇದನ್ನೂ ಓದಿ ಕಾರಿನಲ್ಲೇ ಸುತ್ತು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಶವವನ್ನು ಕಾರು ಸಮೇತ ಸುಟ್ಟ ಆರೋಪಿಗಳು
ರಾಜು ಬೋಳಶೆಟ್ಟಿಯ ಕಾರಿನಲ್ಲೇ ರಾಮಾಪುರ ಅರಣ್ಯಕ್ಕೆ ಆತನ ಶವವನ್ನು ತಂದ ಈ ಮೂವರು, ಹಿಂದಿನ ಸೀಟಿನಲ್ಲಿ ಶವವಿಟ್ಟು, ತಾವು ತಂದಿದ್ದ 10 ಲೀ. ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾರೆ. ಘಟನೆ ಬಳಿಕ ಮೂವರೂ ಆರೋಪಿಗಳು ಪರಾರಿ, ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಕೆಲವೇ ಗಂಟೆಗಳಲ್ಲಿ ಮೂವರನ್ನೂ ಸೆರೆ ಹಿಡಿಯಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.