Headlines

ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ

ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ

ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಮೂರು ಹೆಸರಿನ ಧಾರವಾಡದ ಸುಂದ್ರಿ
ಧಾರವಾಡದ ಯುವತಿಯೊಬ್ಬಳು ಐಶ್ವರ್ಯಾ, ರೇಣುಕಾ, ಆರೋಹಿ ಎಂದು ಹೆಸರು ಬದಲಾಯಿಸಿಕೊಂಡು ಯುವಕರಿಗೆ ಪ್ರೀತಿಯ ನಾಟಕವಾಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ. ಈಕೆಯ ಮೋಸದಿಂದ ನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಯುವತಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
ಧಾರವಾಡದ ಯುವತಿಯೊಬ್ಬಳು ಹೆಸರು ಬದಲಾಯಿಸಿಕೊಂಡು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸುಂದ್ರಿಯ ವೈಯ್ಯಾರಕ್ಕೆ ಮನಸೋತ ಓರ್ವ ಯುವಕ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದನು. ಪೋಷಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಯುವಕ ಬದುಕುಳಿದಿದ್ದಾನೆ.

ಈ ಯುವತಿ ಐಶ್ವರ್ಯಾ, ರೇಣುಕಾ ಮತ್ತು ಆರೋಹಿ ಎಂಬ ಮೂರು ಹೆಸರುಗಳನ್ನಿಟ್ಟುಕೊಂಡು ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದಳು. ಪ್ರೀತಿಯ ಹೆಸರಿನಲ್ಲ ಯುವಕರಿಂದ ಹಣ ಪಡೆದುಕೊಳ್ಳುತ್ತಿದ್ದಳು. ಮದುವೆಯಾಗೋದಾಗಿ ನಂಬಿಸಿ ಯುವಕರಿಂದ ಲಕ್ಷ ಲಕ್ಷ ಹಣ ಪೀಕಿದ್ದಾಳೆ. ಈಕೆಯ ನಕಲಿ ಪ್ರೀತಿಯಲ್ಲಿ ಅಂಧನಾದ ಗುರು ವಕ್ಕಂದ್ ಎಂಬಾತ ಐಶ್ವರ್ಯನೇ ಬೇಕು ಎಂದು ಮನನೊಂದು ವಿಷ ಸೇವಿಸಿದ್ದನು.

ಇಷ್ಟು ಮಾತ್ರವಲ್ಲ ಮದುವೆಯಾಗೋದಾಗಿ ಹೇಳಿ ಗುರು ಬಳಿಯಲ್ಲಿ 7 ಲಕ್ಷ ರೂಪಾಯಿ ತೆಗೆದುಕೊಂಡಿದ್ದಳು. ಹಣ ಬರುತ್ತಿದ್ದಂತೆ ಐಶ್ವರ್ಯಾ ವರಸೆ ಬದಲಿಸಿದ್ದಳು. ಇದರಿಂದ ನೊಂದ ಗುರು, ವಿಷ ಸೇವಿಸಿದ್ದನು. ಈ ವಿಷಯ ತಿಳಿದು ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಾಗ ಗುರು ಕುಟುಂಬಸ್ಥರು ಐಶ್ವರ್ಯಾಳನ್ನು ಲಾಕ್ ಮಾಡಿದ್ದಾರೆ. ಓಡಿ ಹೋಗ್ತಿದ್ದಾಕೆಯನ್ನು ಹಿಡಿದು ಥಳಿಸಿದ್ದಾರೆ.

ನನ್ನ ಮಗನನ್ನು ಮದುವೆ ಆಗಬೇಕು ಇಲ್ಲಾಂದ್ರೆ 7 ಲಕ್ಷ ರೂಪಾಯಿ ವಾಪಸ್ ಕೊಡಬೇಕು ಎಂದು ಗುರು ತಾಯಿ ರತ್ನವ್ವ ಹೇಳಿದ್ದಾರೆ. ಇನ್ನು ರತ್ನವ್ವ ಹೇಳುವ ಪ್ರಕಾರ, ಐಶ್ವರ್ಯಾಗೆ ಮದುವೆಯಾಗಿ ಒಂದು ಮಗುವಿದೆ. ಈಗ ಗಂಡನಿಂದ ಡಿವೋರ್ಸ್ ಪಡೆದುಕೊಂಡಿದ್ದಾಳೆ. ಹೆಸರು ಬದಲಿಸಿಕೊಂಡು ಮೋಸ ಮಾಡ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೋಮು ಘರ್ಷಣೆ; ಇಡೀ ನಗರ ಬೂದಿ ಮುಚ್ಚಿದ ಕೆಂಡ: ರಾತ್ರೋರಾತ್ರಿ ನಡೆದಿದ್ದೇನು?

ಸಂಜು ದೊಡ್ಡಮನಿ ಎಂಬ ಯುವಕನಿಗೂ ಐಶ್ವರ್ಯಾ ಮೋಸ ಮಾಡಿದ್ದಾಳೆ. ಸದ್ಯ ಐಶ್ವರ್ಯಾಳನ್ನು ಗುರು ಪೋಷಕರು ಪೊಲೀಸರ ವಶಕ್ಕೆ ನೀಡಿದ್ದಾರೆ. ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ?

Source link

Leave a Reply

Your email address will not be published. Required fields are marked *