
ಟ್ರೈಲರ್ ಹಂಚಿಕೊಂಡ ರಣವೀರ್ ಸಿಂಗ್, “ಇದು ವೈಯಕ್ತಿಕ ಎಂದು ನಾನು ಹೇಳಿದ್ದೆ… ಟ್ರೈಲರ್ ಬಿಡುಗಡೆಯಾಗಿದೆ,” ಎಂದು ಬರೆದುಕೊಂಡಿದ್ದಾರೆ. ‘ಧುರಂಧರ್’ ರಣವೀರ್ ಸಿಂಗ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಹಿಂದಿ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್ನೊಂದಿಗೆ ಓಪನಿಂಗ್ ಮಾಡುವ ನಿರೀಕ್ಷೆಯಿದೆ.