‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್

‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್


'ಧುರಂಧರ 2' ಅಡ್ವಾನ್ಸ್ ಬುಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್

ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧಾರ್ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಧುರಂಧರ 2’ (ಧುರಂಧರ: ದಿ ರಿವೆಂಜ್) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ಸಿದ್ಧವಾಗಿದೆ. ಮಾರ್ಚ್ 19 ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ, ಮಾರ್ಚ್ 18 ರಂದು ಪೇಯ್ಡ್ ಪ್ರೀಮಿಯರ್ ಶೋಗಳು (ಧುರಂಧರ 2 ಪಾವತಿಸಿದ ಪ್ರೀಮಿಯರ್) ನಡೆಯಲಿವೆ. ಶನಿವಾರ (ಮಾರ್ಚ್ 7) ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಆರಂಭವಾದ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಈ ಸಿನಿಮಾ ಅಬ್ಬರದ ಸಾಧನೆ ಮಾಡಿದೆ. ಬುಕ್ಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ 87,000 ಟಿಕೆಟ್‌ಗಳ ಮಾರಾಟವಾಗಿದೆ.

ಪ್ರಮುಖ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಆದ ‘ಬುಕ್ ಮೈ ಶೋ’ ಒಂದರಲ್ಲಿ 87.81 ಸಾವಿರ ಟಿಕೆಟ್‌ಗಳು ಮಾರಾಟವಾಗುತ್ತಿರುವುದು ಚಿತ್ರದ ಮೇಲಿರುವ ನಿರೀಕ್ಷೆಯನ್ನು ತೋರಿಸುತ್ತದೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಪ್ರತಿ ಗಂಟೆಗೆ ಸರಾಸರಿ 7,500 ಟಿಕೆಟ್‌ಗಳು ಮಾರಾಟವಾಗುತ್ತಿವೆ. ಪ್ರಾಥಮಿಕ ಬುಕಿಂಗ್ ಶುರುವಾದ ಮೊದಲ ಎರಡು ಗಂಟೆಯಲ್ಲೇ 4 ಕೋಟಿ ಕಲೆಕ್ಷನ್ ಆಗಿದೆ.

Sacnilk ವರದಿ ಪ್ರಕಾರ, ಬುಕ್ಕಿಂಗ್ ಆರಂಭವಾದ ಕೇವಲ ಎರಡು ಗಂಟೆಗಳಲ್ಲಿ ಚಿತ್ರವು ವಿಶ್ವದಾದ್ಯಂತ 4 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಪಿವಿಆರ್, ಐನಾಕ್ಸ್ ಮತ್ತು ಸಿನಿಪೊಲಿಸ್‌ನಂತಹ ದೊಡ್ಡ ಮಲ್ಟಿಪ್ಲೆಕ್ಸ್‌ಗಳಿಂದ 2.50 ಕೋಟಿ ರೂಪಾಯಿ ಹರಿದುಬಂದಿದೆ. ದೆಹಲಿ-ಎನ್‌ಸಿಆರ್‌ನಂತಹ ನಗರಗಳಲ್ಲಿ ‘ಸೂಪರ್ ಬ್ಲಾಕ್‌ಬಸ್ಟರ್ ಪ್ಲಸ್’ ಎಂಬ ಹೊಸ ಪ್ರೀಮಿಯಂ ಕೆಟಗರಿ ಪರಿಚಯಿಸಿದೆ, ಅಲ್ಲಿ ಟಿಕೆಟ್ ದರ 2,500 ರೂಪಾಯಿಗಳು ಇಲ್ಲಿಯವರೆಗೆ ಇದೆ.

ಮಾರ್ಚ್ 18 ರಂದು ನಡೆಯಲಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಚಿತ್ರವು 8.06 ಕೋಟಿ ರೂಪಾಯಿ ಸಂಗ್ರಹಿಸಿದೆ. ಹಿಂದಿ ವರ್ಷದಿಂದ 7 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ತೆಲುಗಿನಿಂದ 5 ಲಕ್ಷ ರೂ., ತಮಿಳಿನಿಂದ 4 ಲಕ್ಷ ರೂ. ಹಾಗೂ ಕನ್ನಡದಿಂದ 28,000 ರೂಪಾಯಿ ಕಲೆಕ್ಷನ್ ಆಗಿದೆ. ಇದು ಪೇಯ್ಡ್ ಪ್ರೀಮಿಯರ್ ಗೆ ಈವರೆಗೂ ಆಗಿರುವ ಕಲೆಕ್ಷನ್ ಲೆಕ್ಕ. ಮೊದಲ ದಿನದ ಕಲೆಕ್ಷನ್ ಇನ್ನೂ ಜಾಸ್ತಿ ಆಗಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರಕ್ಕೆ ಮಾತ್ರ ಯುದ್ಧದ ಬಿಸಿ: ‘ಧುರಂಧರ 2’ ಸಿನಿಮಾಗೆ ಚಿಂತೆ ಇಲ್ಲ ಯಾಕೆ?

‘ಧುರಂಧರ’ ಮೊದಲ ಭಾಗವು ಭಾರತದಲ್ಲಿ 28 ಕೋಟಿ ರೂಪಾಯಿಗಳ ಭರ್ಜರಿ ಓಪನಿಂಗ್ ಪಡೆದಿತ್ತು ಮತ್ತು ಒಟ್ಟಾರೆ ವಿಶ್ವದಾದ್ಯಂತ 1303.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿತ್ತು. ಈಗ ಎರಡನೇ ಭಾಗವು ಎಲ್ಲಾ ದಾಖಲೆಗಳನ್ನು ಅಳಿಸಿಹಾಕುವ ಮುನ್ಸೂಚನೆ ನೀಡಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *