‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ

‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ


ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕಳೆದ ವರ್ಷ ಸಾವಿರ ಕೋಟಿ ಗಳಿಸಿದ ಏಕೈಕ ಸಿನಿಮಾ ಅದು. ಈ ಚಿತ್ರವು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಧುರಂಧರನಿಗೆ ಪ್ರತಿಸ್ಪರ್ಧಿಯಾಗಿ ಬೇರೆ ಯಾವುದೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಪ್ರತಿದಿನ ಆದಾಯದಲ್ಲಿ ಹೊಸ ಗರಿಷ್ಠ ದಾಖಲಿಸುತ್ತಿದೆ. ಈ ಸೀಕ್ವೆಲ್ ಮಾರ್ಚ್ 19 ರಂದು ರಿಲೀಸ್ ಆಗಲಿದೆ. ಆ ಸಮಯದಲ್ಲಿ ‘ಟಾಕ್ಸಿಕ್’ ಕೂಡ ಬಿಡುಗಡೆ ಆಗುತ್ತಿದೆ. ಈ ಕ್ಲ್ಯಾಶ್ ವೇಳೆ ಉಳಿದ ಸಿನಿಮಾಗಳು ಹಿಂದೇಟು ಹಾಕುತ್ತಿವೆ.

ಬಾಲಿವುಡ್‌ನಲ್ಲಿ ‘ಧುರಂಧರ’ ಚಿತ್ರದ ಕ್ರೇಜ್ ಮತ್ತು ಯಶಸ್ಸನ್ನು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರು ಮೆಚ್ಚಿದ್ದಾರೆ. ‘ಧುರಂಧರ’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ‘ಧುರಂಧರ’ ಚಿತ್ರದ ಮೊದಲ ಭಾಗ ಡಿಸೆಂಬರ್ 5 ರಂದು ಬಿಡುಗಡೆಯಾಯಿತು. ಈಗ ಎರಡನೇ ಭಾಗ ಮಾರ್ಚ್ 19 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.

‘ಧುರಂಧರ’ ಚಿತ್ರದ ಅದ್ಭುತ ಯಶಸ್ಸನ್ನು ನೋಡಿ, ಅನೇಕ ಬಾಲಿವುಡ್ ನಿರ್ಮಾಪಕರು ಮತ್ತು ದೊಡ್ಡ ನಟರು ಸಹ ಧುರಂಧರ 2′ ಬಿಡುಗಡೆಯ ಸಮಯದಲ್ಲಿ ತಮ್ಮ ಚಿತ್ರಗಳನ್ನು ಸಿದ್ಧರಿಲ್ಲ. ಈಗ ಹಿಂದಿಯ, ‘ಆವಾರಾಪನ್ 2’ ಬಿಡುಗಡೆ ವಿಳಂಬವಾಗಿದೆ. ಈ ಬಗ್ಗೆ ಚಿತ್ರನಿರ್ಮಾಪಕ ಮುಖೇಶ್ ಭಟ್ ಸ್ಪಷ್ಟನೆ ನೀಡಿದ್ದಾರೆ. ‘ಧುರಂಧರ 2 ಅಥವಾ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಸ್ಪರ್ಧೆಯಿಂದಾಗಿ ಆವಾರಪನ್ 2 ತಡವಾಗಿ ಬಿಡುಗಡೆಯಾಗುತ್ತಿಲ್ಲ’ ಎಂದು ಮುಖೇಶ್ ಭಟ್ ಹೇಳಿದ್ದಾರೆ.

‘ಆವಾರಪನ್ 2’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಾಯಕನಾಗಿ ನಟಿಸುತ್ತಿದ್ದಾರೆ. ಆವರಿಗೆ ಆದ ಗಾಯದಿಂದಾಗಿ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಲಾಯಿತು. ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಮುಖೇಶ್ ಭಟ್ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

‘ಧುರಂಧರ 2’ ಹಾಗೂ ‘ಟಾಕ್ಸಿಕ್’ ತಂಡಗಳು ಡೇಟ್ ಬದಲಿಸಲು ರೆಡಿ ಇಲ್ಲ. ಈ ಕಾರಣದಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ಲ್ಯಾಶ್ ನಿರೀಕ್ಷಿಸಲಾಗಿದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಯಶ್ ಅವರು ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್ ಸಿನಿಮಾ ಕೂಡ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *