
‘ಧುರಂಧರ 2’ ಸಿನಿಮಾ (ಧುರಂಧರ 2 ಚಿತ್ರ) ಮೊದಲ ದಿನದ ಓಪನಿಂಗ್ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ಈ ಚಿತ್ರ ಬರೋಬ್ಬರಿ 236 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದಾಗ್ಯೂ ಒಂದು ದೊಡ್ಡ ದಾಖಲೆಯನ್ನು ಮುರಿದು ಸಿನಿಮಾ ವಿಫಲವಾಗಿದೆ. ‘ಧುರಂಧರ 2’ ಚಿತ್ರದ ಮೊದಲ ದಿನದ ಕಲೆಕ್ಷನ್ 300 ಕೋಟಿ ರೂಪಾಯಿ ಆಗಲಿದೆ ಎಂದು ಹೇಳಲಾಗಿದೆ. ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಸಿನಿಮಾ ತಂಡ ಮಾಡಿದ ತಪ್ಪೇ ಕಾರಣ.
‘ಧುರಂಧರ 2’ ಸಿನಿಮಾ ಮೊದಲ ದಿನ ಅಬ್ಬರದ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಸುಳ್ಳಾಗಿದೆ. ಸಿನಿಮಾ 236 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ಈ ಮೂಲಕ ‘ಪುಷ್ಪ 2’ ಚಿತ್ರ ಸೃಷ್ಟಿ ಮಾಡಿದ್ದು ದಾಖಲೆಯನ್ನು ಮುರಿಯಲು ‘ಧುರಂಧರ 2’ ವಿಫಲವಾಗಿದೆ.
‘ಪುಷ್ಪ 2’ ಸಿನಿಮಾ ಮೊದಲ ದಿನ 294 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ‘ಧುರಂಧರ 2’ ಸಿನಿಮಾ ಮುರಿದು ಹಾಕುತ್ತದೆ ಎಂಬುದು ಎಲ್ಲರ ಊಹೆಯಲ್ಲಿದೆ. ಆದರೆ, ಅದು ಸಾಧ್ಯವಾಗಿಲ್ಲ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆ ತಂದಿದೆ. ಶೋ ಕ್ಯಾನ್ಸಲ್ ಆಗಿರೋದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ‘ಧುರಂಧರ 2’ ಸಿನಿಮಾದ ಶೋಗಳು ಕ್ಯಾನ್ಸಲ್ ಆದವು. ತೆಲುಗು, ಕನ್ನಡ ಕಾಪಿ ಅಪ್ಲೋಡ್ ಆಗಿರಲಿಲ್ಲ. ಇದು ರದ್ದಾಗಲು ಮೂಲ ಕಾರಣ. ಇದು ಚಿತ್ರಕ್ಕೆ ದೊಡ್ಡ ಹಿನ್ನಡೆಯನ್ನು ತಂದಿದೆ.
ಇದನ್ನೂ ಓದಿ: ‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್ಫ್ಲುಯೆನ್ಸರ್
‘ಧುರಂಧರ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಚಿತ್ರದ ಕಥೆ ಕಾರಣ ಎಂದು ಅನೇಕರು ಹೇಳುತ್ತಿದ್ದಾರೆ. ‘ಧುರಂಧರ 2’ ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾದ ಒಟ್ಟಾರೆ ಗಳಿಗೆ ಎಷ್ಟು ಕೋಟಿ ರೂಪಾಯಿ ಆಗಲಿದೆ ಎಂಬ ಊಹೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.