Headlines

‘ಧುರಂಧರ್ 2’ ಅಡ್ವಾನ್ಸ್ ಬುಕಿಂಗ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಟಿಕೆಟ್ ಬೆಲೆ

‘ಧುರಂಧರ್ 2’ ಅಡ್ವಾನ್ಸ್ ಬುಕಿಂಗ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಟಿಕೆಟ್ ಬೆಲೆ


'ಧುರಂಧರ 2' ಅಡ್ವಾನ್ಸ್ ಬುಕಿಂಗ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಟಿಕೆಟ್ ಬೆಲೆ

ರಣವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಸಿನಿಮಾದ ಟ್ರೈಲರ್ ಇಂದಷ್ಟೇ ಬಿಡುಗಡೆಯಾಗಿದೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ, ಹಿಂದಿ ಮಾತ್ರವೇ ಅಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇಂದಿನಿಂದಲೇ ಆರಂಭವಾಗಿದ್ದು, ದೇಶದ ನಾನಾ ನಗರಗಳಲ್ಲಿ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಂತೂ ಟಿಕೆಟ್ ಬೆಲೆ ಗಗನಕ್ಕೇರಿ ನಿಂತಿವೆ. ‘ಧುರಂಧರ 2’ ಸಿನಿಮಾಕ್ಕೆ ಇರುವ ಬೇಡಿಕೆಯನ್ನು ಲಾಭವನ್ನಾಗಿ ಬದಲಾಯಿಸಲು ಟೊಂಕ ಕಟ್ಟಿ ನಿಂತಿದೆ.

‘ಧುರಂಧರ 2’ ಸಿನಿಮಾ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 18 ರಂದು ಪ್ರೀಮಿಯರ್ ಶೋ ನಡೆಯುತ್ತಿದೆ, ಬೆಂಗಳೂರಿನಲ್ಲಿ ಈ ಪ್ರೀಮಿಯರ್ ಶೋ ಟಿಕೆಟ್ ಬೆಲೆಗಳು ಬಲು ದುಬಾರಿಯಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ತೋಚಿದ ಬೆಲೆಯನ್ನು ಟಿಕೆಟ್‌ಗೆ ನಿಗದಿಪಡಿಸಲಾಗಿದೆ. 2500 ರೂಪಾಯಿ ಒಂದೆಡೆ ಇದ್ದರೆ, ಇನ್ನೊಂದೆಡೆ 1800 ರೂಪಾಯಿಗಳಿವೆ. 1500, 1200 ಹೀಗೆ ಒಂದೊಂದು ಮಲ್ಟಿಪ್ಲೆಕ್ಸ್‌ನಲ್ಲಿ ಒಂದೊಂದು ರೀತಿಯ ಬೆಲೆಗಳನ್ನು ನಿಗದಿಪಡಿಸಲಾಗಿದೆ, ಸಾಮಾನ್ಯ ಪ್ರದರ್ಶನದಲ್ಲಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.

ಸಿನೆಪೊಲೀಸ್, ಗೋಪಾಲನ್ ಸಿನಿಮಾಗಳು, ಕಿನೋ ಸಿನಿಮಾಗಳು ಸಾಮಾನ್ಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಹ 700 ರೂಪಾಯಿ ಟಿಕೆಟ್ ಬೆಲೆ ಇದೆ. ಅತಿ ಹೆಚ್ಚು ಬೆಲೆ ಇದೆ ಫೋರನ್ನ ಪಿವಿಆರ್ ಡೈರೆಕ್ಟರ್ಸ್ ಕಟ್‌ನಲ್ಲಿ ಇಲ್ಲಿ ಒಂದು ‘ಧುರಂಧರ 2’ ಸಿನಿಮಾದ ಟಿಕೆಟ್ ಬೆಲೆ 2500 ರೂಪಾಯಿ. ಬೆಂಗಳೂರಿನಲ್ಲಿ, ಪ್ರೀಮಿಯರ್ ಶೋಗೆ ನಿಗದಿ ಪಡಿಸಿದ ಅತಿ ಹೆಚ್ಚು ಬೆಲೆ ಇದೆ ಎನ್ನಬಹುದೇನೊ. ವಿಜಯ್ ನಟನೆಯ ‘ಜನ ನಾಯಕನ್’ ಸಿನಿಮಾದ ಪ್ರೀಮಿಯರ್ ಶೋಗೂ ಸಹ ಇಷ್ಟು ದುಬಾರಿ ಬೆಲೆ ಇಡಲಾಗಲಿಲ್ಲ.

ಮುಂಬೈನಲ್ಲಿ ಹೋಲಿಕೆ ಮಾಡಿ ಬೆಂಗಳೂರಿನಲ್ಲಿ ‘ಧುರಂಧರ 2’ ಸಿನಿಮಾಕ್ಕೆ ಟಿಕೆಟ್ ಬೆಲೆ ಹೆಚ್ಚು ಇರಿಸಲಾಗಿದೆ. ಮುಂಬೈನಲ್ಲಿಯೂ ಸಹ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಿನ ಬೆಲೆಯಾದರೂ, ಕಡಿಮೆ ಬೆಲೆಯ ಹಲವಾರು ಮಲ್ಟಿಪ್ಲೆಕ್ಸ್‌ಗಳಿವೆ. ಸರಾಸರಿ ನೋಡಿದಲ್ಲಿ, ಮುಂಬೈನಲ್ಲಿ ಬೆಂಗಳೂರಿನಲ್ಲಿ ‘ಧುರಂಧರ 2’ ಸಿನಿಮಾ ಪ್ರೀಮಿಯರ್ ಶೋನ ಟಿಕೆಟ್ ಬೆಲೆಗಳು ಹೆಚ್ಚಿವೆ. ಜೊತೆಗೆ, ‘ಧುರಂಧರ 2’ ಚಿತ್ರತಂಡ ಸಖತ್ ಪ್ಲ್ಯಾನ್ ಮಾಡಿದ್ದು, ಪ್ರಸ್ತುತ ‘ಧುರಂಧರ 2’ ಸಿನಿಮಾ 18ನೇ ಮಾರ್ಚ್‌ನ ಟಿಕೆಟ್‌ಗಳ ಮುಂಗಡ ಬುಕಿಂಗ್ ಮಾತ್ರವೇ ರಿಲೀಸ್ ಆಗಿದೆ. ಮಾರ್ಚ್ 19 ರ ಶೋಗಳ ಮುಂಗಡ ಬುಕಿಂಗ್ ಓಪನ್ ಮಾಡಲಾಗಿಲ್ಲ.

ಇದನ್ನೂ ಓದಿ:’ಧುರಂಧರ’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣವೀರ್ ಸಿಂಗ್

‘ಧುರಂಧರ 2’ ಸಿನಿಮಾದಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಇನ್ನೂ ನಟಿಸಿದ್ದು, ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ’ ಸಿನಿಮಾ ಭಾರಿ ಹಿಟ್ ಆಗಿದೆ. ಇದೀಗ ಸಿನಿಮಾದ ಎರಡನೇ ಭಾಗ ಮಾರ್ಚ್ 19ರಂದು ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *